ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್‌ಫುಡ್‌ ಲಿಸ್ಟ್ ಬಿಡುಗಡೆ, ನಿಮ್ಮ ನೆಚ್ಚಿನ ಚಾಟ್ಸ್ ಇದ್ಯಾ ಚೆಕ್ ಮಾಡ್ಕೊಳ್ಳಿ

First Published | Aug 23, 2023, 9:12 AM IST

ಟೇಸ್ಟ್ ಅಟ್ಲಾಸ್ ಭಾರತದಲ್ಲಿ ಲಭ್ಯವಿರೋ ಅತ್ಯಂತ ಕೆಟ್ಟ ಸ್ಟ್ರೀಟ್ ಫುಡ್‌ಗಳು ಯಾವುವು ಎಂಬುದನ್ನು ಲಿಸ್ಟ್ ಮಾಡಿದೆ. ಅದರಲ್ಲಿ ಯಾವ್ಯಾವ ಆಹಾರಗಳಿವೆ. ನೀವೂ ಅದನ್ನು ತಿನ್ತಿದ್ದೀರಾ..ಚೆಕ್ ಮಾಡ್ಕೊಳ್ಳಿ.

ಆನ್‌ಲೈನ್‌ ಫುಡ್‌ ಮತ್ತು ಟ್ರಾವೆಲ್‌ ಗೈಡ್‌ ಟೇಸ್ಟ್‌ ಅಟ್ಲಾಸ್‌, ಅತ್ಯಂತ ಕಳೆದ ದರ್ಜೆಯ ಭಾರತೀಯ ಬೀದಿ ಬದಿ ಆಹಾರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಒಟ್ಟು 2508 ರೇಟಿಂಗ್‌ ಪಡೆದಿದೆ. ಇದರಲ್ಲಿ ಕೇವಲ 1,773 ಕಾನೂನು ಬದ್ಧವಾಗಿ ಪಡೆದ ರೇಟಿಂಗ್‌ ಎಂದು ಟೇಸ್ಟ್‌ ಆಟ್ಲಾಸ್‌ ತಿಳಿಸಿದೆ. ಇದರಲ್ಲಿ ಹಲವು ಚಾಟ್‌ ಐಟಂಗಳಿವೆ. 

ಚಾಟ್ಸ್‌ ತಿನ್ನುವುದು ಹಲವರಿಗೆ ಫೇವರಿಟ್‌.  ಪಾನಿಪೂರಿ, ಮಸಾಲ್ ಪೂರಿ, ಟಿಕ್ಕಿ ಪೂರಿ, ಭೇಲ್ ಪೂರಿ, ದಹಿ ಪೂರಿ ಹೀಗೆ ಎಲ್ಲವನ್ನೂ ಇಷ್ಟಪಟ್ಟು ತಿನ್ನುತ್ತಾರೆ.  ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಹಲವರ ಫೇವರಿಟ್‌, ಮಹಾರಾಷ್ಟ್ರದ ಪ್ರಸಿದ್ಧ ದಹಿಪುರಿ ಅಗ್ರಸ್ಥಾನ ಪಡೆದಿದೆ. ಹಾಗಾದರೆ ಇನ್ನೂ ಯಾವುದೆಲ್ಲಾ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ ನೋಡಿ. 

Tap to resize

ಸೇವ್, ಮಧ್ಯಪ್ರದೇಶದ ಮಸಾಲೆಯುಕ್ತ ತಿಂಡಿ, ಬೇಳೆ ಹಿಟ್ಟು ಮತ್ತು ಮಸಾಲೆಗಳೊಂದಿಗೆ ಇದನ್ನು ತಯಾರಿಸಲಾಗುತ್ತದೆ. ಇದು ಎರಡನೇಯ ಅತಿ ಕೆಟ್ಟ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ಆಲೂಗೆಡ್ಡೆ ಸ್ಮ್ಯಾಶ್‌ ಮಾಡಿ, ಬನ್‌ ನಡುವೆ ಸೇರಿಸಿ ಕೊಡುವ ಗುಜರಾತ್‌ ಮೂಲದ ಸ್ಟ್ರೀಟ್‌ ದಾಬೇಲಿ ನಂತರದ ಸ್ಥಾನದಲ್ಲಿದೆ.
 

ಆಹಾರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಬಾಂಬೆ ಸ್ಯಾಂಡ್‌ವಿಚ್‌ ಪಡೆದುಕೊಂಡಿದೆ. ಬ್ರೆಡ್‌ ತುಂಡುಗಳ ನಡುವೆ ತರಕಾರಿ, ಮಸಾಲೆ ಸೇರಿಸಿ ಇರುವ ಮುಂಬೈನಲ್ಲಿ ಹೆಚ್ಚು ಖ್ಯಾತಿಯಲ್ಲಿರುವ ಈ ತಿಂಡಿಗೆ ಕೆಟ್ಟ ತಿಂಡಿ ಕೆಟ್ಟ ತಿಂಡ ಅನ್ನೋ ಕುಖ್ಯಾತಿಗೆ ಒಳಗಾಗಿದೆ.. ಎಗ್‌ ಬುರ್ಜಿ, ದಹಿ ವಡಾ ಮತ್ತು ಸಾಬುದಾನ ವಡಾ ಇವು ಕ್ರಮವಾಗಿ ಐದು, ಆರು ಹಾಗೂ ಏಳನೇ ಸ್ಥಾನ ಗಳಿಸಿವೆ.
 

ಅತ್ಯಂತ ಕೆಟ್ಟ ತಿಂಡಿಗಳ ಪಟ್ಟಿಯಲ್ಲಿ 8ನೇ ಸ್ಥಾನಗಳಿಸಿರುವುದು ಉತ್ತರ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಖ್ಯಾತಿ ಪಡೆದಿರುವ ಪುರಿ ಚಾಟ್‌. ಇದಕ್ಕೂ ಕೂಡ ಕಡಿಮೆ ರೇಟಿಂಗ್‌ ಸಿಕ್ಕಿದ್ದು ಕೆಟ್ಟ ತಿಂಡಿ ಎನ್ನಿಸಿದೆ. ಒಂಬತ್ತನೇ ಸ್ಥಾನದಲ್ಲಿ ಉತ್ತರ ಭಾರತದ ಸಾಂಪ್ರದಾಯಿಕ ತಿಂಡಿಯಾದ ಗೋಬಿ ಪರೋಟವಿದೆ.

ಭಾರತದಲ್ಲಿ ಲಭ್ಯವಿರೋ ಅತ್ಯಂತ ಕೆಟ್ಟ ಸ್ಟ್ರೀಟ್ ಫುಡ್‌ಗಳ ಲಿಸ್ಟ್‌ನ ಕೊನೆಯ ಸ್ಥಾನದಲ್ಲಿ ಕರಿದ ತಿನಿಸು ಹಾಗೂ ಎಲ್ಲರೂ ಇಷ್ಟಪಡುವ ಬೋಂಡಾವಿದೆ. ಈ ಫುಡ್‌ ಲಿಸ್ಟ್‌ನಲ್ಲಿ ನಿಮ್ಮ ಇಷ್ಟದ ತಿಂಡಿಗಳು ಇವೆಯೇ ನೋಡಿ.

Latest Videos

click me!