ಹೆಸರು ಕಾಳು ದೋಸೆ
150 ಕ್ಯಾಲೋರಿಗಿಂತ ಕಡಿಮೆಯಿರುವ ಬ್ರೇಕ್‌ಫಾಸ್ಟ್‌ಗಳಲ್ಲಿ ಹೆಸರುಕಾಳಿನ ದೋಸೆ ಸಹ ಒಂದಾಗಿದೆ. ನೆನೆಸಿದ ಹೆಸರುಕಾಳು, ಹಸಿಮೆಣಸು, ಜೀರಿಗೆ ಉಪ್ಪು ಮೊದಲಾದವುಗಳನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಪೌಷ್ಠಿಕಾಂಶದಲ್ಲಿ ಹೇರಳವಾಗಿರುವ ಈ ದೋಸೆ ಆರೋಗ್ಯಕ್ಕೆ ಅತ್ಯುತ್ತಮ. ತೂಕ ಇಳಿಕೆಗೂ ಸಹಕಾರಿ.
ರವಾ ಇಡ್ಲಿ
ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿ-ಸಾಂಬಾರ್ ಅತ್ಯುತ್ತಮ ಆಯ್ಕೆ. ಅದರಲ್ಲೂ ರವಾ ಇಡ್ಲಿ ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ತೂಕ ಹೆಚ್ಚುವ ಭಯವಿಲ್ಲ. ರವೆ, ಉದ್ದಿನಬೇಳೆ, ಸಾಸಿವೆ, ಕರಿಬೇವು ಸೇರಿಸಿ ತಯಾರಿಸುವ ಈ ಇಡ್ಲಿ ತಿನ್ನಲು ರುಚಿಕರಿಯಾಗಿದೆ. ಜೊತೆಗೆ ಪೌಷ್ಠಿಕಾಂಶದ ಆಗರವೂ ಹೌದು.
ಅವಲಕ್ಕಿ
ಕ್ವಿಕ್ ಆಗಿ ತಯಾರಿಸುವ ಬ್ರೇಕ್‌ಫಾಸ್ಟ್ ವಿಷಯಕ್ಕೆ ಬಂದಾಗ ಎಲ್ಲರಿಗೆ ತಕ್ಷಣಕ್ಕೆ ನೆನಪಾಗೋದು ಅವಲಕ್ಕಿ. ಶೇಂಗಾ, ಈರುಳ್ಳಿ, ನಿಂಬೆಹಣ್ಣನ್ನು ಸೇರಿಸಿ ಮಾಡುವ ಪೋಹಾ ತಿನ್ನಲು ರುಚಿಕರವಾಗಿರುತ್ತದೆ. ಕ್ಯಾಲೋರಿ ಕಡಿಮೆ ಇರೋ ಕಾರಣ ತೂಕ ಇಳಿಸುವ ವಿಷಯಕ್ಕೆ ಬಂದಾಗ ಇದು ಬೆಸ್ಟ್ ಚಾಯ್ಸ್.
ಉಪ್ಪಿಟ್ಟು
ರವೆಯಿಂದ ಮಾಡುವ ಉಪ್ಪಿಟ್ಟು ಸಹ ಆರೋಗ್ಯಕ್ಕೆ ಒಳ್ಳೆಯದು. ಹಲವು ತರಕಾರಿಗಳನ್ನು ಸೇರಿಸಿ ತಯಾರಿಸುವ ಕಾರಣ ಉಪ್ಪಿಟ್ಟು ಸೇವನೆಯಿಂದ ಆರೋಗ್ಯಕ್ಕೆ ಬೇಕಾದಷ್ಟು ಪ್ರೊಟೀನ್ ಸಹ ಸಿಗುತ್ತದೆ. ಇದರಲ್ಲಿ ಕ್ಯಾಲೋರಿ ಸಹ ಕಡಿಮೆ ಇರುತ್ತದೆ.
ಮೊಳಕೆಬರಿಸಿದ ಕಾಳುಗಳ ಸಲಾಡ್
ದಿನದ ಆರಂಭದಲ್ಲಿ ಸೇವಿಸಲು ಮೊಳಕೆಬರಿಸಿದ ಕಾಳುಗಳ ಸಲಾಡ್ ತುಂಬಾ ಒಳ್ಳೆಯದು. ಹೆಸರುಕಾಳು, ಕಡಲೇಕಾಳು ಮೊದಲಾದವುಗಳನ್ನು ಸೇರಿಸಿ ಸೌತೆಕಾಯಿ, ಟೊಮೆಟೋ ಹೆಚ್ಚಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸವನ್ನು ಸೇರಿಸಿದರಾಯಿತು. ಹೆಲ್ದೀ ಕಾಳುಗಳ ಸಲಾಡ್ ರೆಡಿ.
ಮಸಾಲಾ ಓಟ್ಸ್
ತೂಕ ಇಳಿಸಿಕೊಳ್ಳುವವರ ಮೊದಲ ಆಯ್ಕೆ ಓಟ್ಸ್. ಕ್ಯಾಲೊರಿ ವಿಷಯಕ್ಕೆ ಬಂದಾಗಲೂ ಇದು ಪರ್ಫೆಕ್ಟ್ ಆಯ್ಕೆ. ತರಕಾರಿಗಳನ್ನು ಸೇರಿಸಿದ ಮಸಾಲಾ ಓಟ್ಸ್‌ನಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ.