ಬರ್ಗರ್ ಕಂಪನಿಯಿಂದ ಬಂಪರ್ ಆಫರ್… ನೀವೂ ಭಾಗವಹಿಸಿ 8 ಕೋಟಿ ಗೆಲ್ಲಿ

Published : Feb 07, 2024, 05:12 PM IST

ಫಾಸ್ಟ್ ಫುಡ್ ಲವರ್ ನೀವಾಗಿದ್ರೆ ಬರ್ಗರ್ ಗಳನ್ನು ಖಂಡಿತವಾಗಿಯೂ ಇಷ್ಟಪಡ್ಟೀರಿ ಅಲ್ವಾ?. ಈ ಬರ್ಗರ್ ನಿಂದಾಗಿಯೇ ನೀವು ಹಣ ಸಂಪಾದಿಸಲು ಅವಕಾಶ ಸಿಕ್ಕರೆ ಹೇಗಿರಬಹುದು ಯೋಚಿಸಿ? ಬರ್ಗರ್ ಕಂಪನಿಯೊಂದು ಇಂತಹ ಸುವರ್ಣಾವಕಾಶವನ್ನು ನೀಡುತ್ತಿದೆ.

PREV
16
ಬರ್ಗರ್ ಕಂಪನಿಯಿಂದ ಬಂಪರ್ ಆಫರ್… ನೀವೂ ಭಾಗವಹಿಸಿ 8 ಕೋಟಿ ಗೆಲ್ಲಿ

ಮನೆಯ ಆಹಾರದ ಬದಲು ಹೊರಗಿನ ಆಹಾರವನ್ನು ತಿನ್ನಲು ಬಯಸುವ ಅನೇಕ ಜನರನ್ನು ನೀವು ನೋಡಿರಬಹುದು. ಅವರ ಈ ಅಭ್ಯಾಸವು ಅವರ ಆರೋಗ್ಯಕ್ಕೆ ಎಂದಿಗೂ ಒಳ್ಳೆಯದನ್ನು ಮಾಡದಿದ್ದರೂ, ಇಲ್ಲೊಂದು ಆಫರ್ ಈ ಫಾಸ್ಟ್ ಫುಡ್ (fast food)ಪ್ರಿಯರಿಗೆ ಅಚ್ಚರಿ ನೀಡುವಂತಿದೆ. ಯಾಕಂದ್ರೆ ಇದರಿಂದ ನೀವು ಹಣ ಸಂಪಾದಿಸಬಹುದು. 

26

ಹೌದು… ನೀವು ಬರ್ಗರ್ (Burger) ಪ್ರಿಯರಾಗಿದ್ರೆ ನಿಮಗೊಂದು ಸುವರ್ಣ ಅವಕಾಶ ಕಾಯುತ್ತಿದೆ. ಬರ್ಗರ್ ಪ್ರಿಯರನ್ನು ಖುಷಿಯಲ್ಲಿ ಜಿಗಿಯುವಂತೆ ಮಾಡುವ ಕೊಡುಗೆಯ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ಆಫರ್ ಕೋಟಿ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ನಿಮಗೆ ನೀಡುತ್ತದೆ.

36

ಫಾಸ್ಟ್ ಫುಡ್ (fast food) ಲವರ್ ಖಂಡಿತವಾಗಿಯೂ ಬರ್ಗರ್ ಗಳನ್ನು ಇಷ್ಟಪಡುತ್ತಾರೆ.  ಇದೇ ಬರ್ಗರ್ ನಿಂದ ನೀವು ಹಣ ಸಂಪಾದಿಸಲು ಅವಕಾಶ ಸಿಕ್ಕರೆ ಏನು ಮಾಡ್ತೀರಿ? ಫಾಸ್ಟ್ ಫುಡ್ ಕಂಪನಿ - ಬರ್ಗರ್ ಕಿಂಗ್ ಅಂತಹ ಸುವರ್ಣಾವಕಾಶವನ್ನು ನೀಡುತ್ತಿದೆ. ನೀವು ನೀಡುವ ಆಫರ್ ನ್ನು ಒಪ್ಪಿಕೊಂಡರೆ, ನಿಮಗೆ ಅಮೇರಿಕನ್ ಬರ್ಗರ್ ಕಂಪನಿಯಿಂದ ದೊಡ್ಡ ಮೊತ್ತ ಹಣ ನೀಡಲಾಗುತ್ತದೆ. 

46

8 ಕೋಟಿ ರೂಪಾಯಿ ಗೆಲ್ಲಬಹುದು: ನ್ಯೂಯಾರ್ಕ್ ಪೋಸ್ಟ್ (NewYork Post) ವರದಿಯ ಪ್ರಕಾರ, ಫ್ಲೋರಿಡಾದ ಅತ್ಯುತ್ತಮ ಫಾಸ್ಟ್ ಫುಡ್ ಚೈನ್ ಬರ್ಗರ್ ಕಿಂಗ್ ತನ್ನ ಅಭಿಮಾನಿಗಳಿಗೆ ಒಟ್ಟು 1 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಘೋಷಿಸಿದೆ. ಇದಕ್ಕಾಗಿ, ಅವರು ಕಂಪನಿಯ Whopper ಸ್ಯಾಂಡ್ ವಿಚ್ ಅನ್ನು ತಮ್ಮದೇ ಆದ ರೀತಿಯಲ್ಲಿ ವಿನ್ಯಾಸಗೊಳಿಸಬೇಕು.  

56

ಪತ್ರಿಕಾ ಪ್ರಕಟಣೆ ತಿಳಿಸಿದಂತೆ ಬರ್ಗರ್ ಕಿಂಗ್ (Burger King) ತಮ್ಮ ಅತಿಥಿಗಳು ಇಷ್ಟಪಡುವ ಸ್ಯಾಂಡ್ ವಿಚ್ ಹೇಗಿರಬೇಕು ಅನ್ನೋದನ್ನು ಅತಿಥಿಗಳಿಂದಲೇ ಕೇಳಿ ತಿಳಿದುಕೊಳ್ಳುತ್ತಾರೆ.  ಅದೇ ರೀತಿ ಬರ್ಗರ್ ತಯಾರಿಸಲಾಗುವುದು. ಯಾವ ವ್ಯಕ್ತಿ ಡಿಸೈನ್ ಮಾಡಿದ ಬರ್ಗರ್ ಗೆ ಹೆಚ್ಚು ಮತಗಳು ಬರುತ್ತದೆಯೋ ಅವರನ್ನು ಸ್ಪರ್ಧೆಯ ವಿಜೇತರೆಂದು ಘೋಷಿಸಲಾಗುತ್ತದೆ ಮತ್ತು 1 ಮಿಲಿಯನ್ ಯುಎಸ್ ಡಾಲರ್ ಅಂದರೆ 8 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಹುಮಾನವನ್ನು ನೀಡಲಾಗುತ್ತದೆ.

66

ನೀವು ಹೇಗೆ ಭಾಗವಹಿಸಬಹುದು?: ಈ ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿಯನ್ನು ಬರ್ಗರ್ ಕಿಂಗ್ ವೆಬ್ಸೈಟ್ನಲ್ಲಿ (Burger King Website)ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ರಾಯಲ್ ಪರ್ಕ್ಸ್ ಅಕೌಂಟ್ ಹೊಂದಿರಬೇಕು. ಅರ್ಜಿ ಸಲ್ಲಿಸಲು ಮಾರ್ಚ್ 17 ಕೊನೆಯ ದಿನವಾಗಿದೆ. ಮೊದಲಿಗೆ, ಬರ್ಗರ್ ನ ಚಿತ್ರವನ್ನು ಎಐ ಮೂಲಕ ತಯಾರಿಸಲಾಗುತ್ತದೆ, ಇದರಿಂದ ನಿಮ್ಮ ಹೆಸರು ಎಂಟ್ರಿಯಾಗುತ್ತದೆ. ಇದರಲ್ಲಿ, ಆಯ್ಕೆಯಾದ ಅಂತಿಮ ಸ್ಪರ್ಧಿಗಳನ್ನು ಮಿಯಾಮಿಯಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆ ಕರೆಯಲಾಗುತ್ತದೆ ಮತ್ತು ಅವರ ಪರಿಕಲ್ಪನೆಯನ್ನು ಪರಿಷ್ಕರಿಸಲು ಅವಕಾಶ ನೀಡಲಾಗುವುದು.

Read more Photos on
click me!

Recommended Stories