ಕಿಸ್ ಬೆಡಗಿ, ಕ್ಯೂಟ್ ಹುಡುಗಿ ಶ್ರೀಲೀಲಾ ಫಿಗರ್‌ ಮೈಂಟೇನ್ ಮಾಡೋಕೆ ಏನ್‌ ತಿನ್ತಾರೆ?

First Published Feb 7, 2024, 3:09 PM IST

ಕನ್ನಡದ 'ಕಿಸ್' ಬೆಡಗಿ ಶ್ರೀಲೀಲಾಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಮುದ್ದು ಮುದ್ದಾಗಿರುವ ಶ್ರೀಲೀಲಾ ಲುಕ್‌, ಡ್ಯಾನ್ಸ್, ಆಕ್ಟಿಂಗ್‌ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದ್ರೆ ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರೋ ಶ್ರೀಲೀಲಾ ಹೇಗೆ ಫಿಗರ್ ಮೈಂಟೇನ್ ಮಾಡ್ತಾರೆ ಅನ್ನೋದು ನಿಮ್ಗೊತ್ತಾ?

ಟಾಲಿವುಡ್‌ನ ಹಾಟ್ ಬೆಡಗಿಯರಲ್ಲಿ ಒಬ್ಬರು ಶ್ರೀಲೀಲಾ. ಕನ್ನಡದ 'ಕಿಸ್' ಸಿನಿಮಾದಲ್ಲಿ ನಟಿಸಿದ ನಟಿ ನಂತರ ತೆಲುಗಿನತ್ತ ಹಾರಿದ್ದರು. ಹಲವು ಸೂಪರ್‌ಸ್ಟಾರ್‌ ನಟರ ಸಿನಿಮಾಗಳಲ್ಲಿ ಶ್ರೀಲೀಲಾ ಅಭಿನಯಿಸಿದ್ದಾರೆ. ಮುದ್ದು ಮುದ್ದಾಗಿರುವ ಶ್ರೀಲೀಲಾ ಲುಕ್‌, ಡ್ಯಾನ್ಸ್, ಆಕ್ಟಿಂಗ್‌ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

ಅದರಲ್ಲೂ ಶ್ರೀಲೀಲಾ ಫಿಗರ್ ಮೈಂಟೇನ್ ಮಾಡಿರುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆಲುಗಿನಲ್ಲಿ ಮೊದಲ ಚಿತ್ರದಲ್ಲಿ ಅಭಿನಯಿಸಿದಾಗ ಶ್ರೀಲೀಲಾ ಸ್ಪಲ್ಪ ದಪ್ಪಗಿದ್ದರು. ಈಗ ಸ್ಲಿಮ್ ಆಗಿ ಚಿಕ್ಕ ಹುಡುಗಿಯಂತೆ ಕಾಣುತ್ತಿದ್ದಾರೆ. ಹೀಗಾಗಿ ಶ್ರೀಲೀಲಾ ಹೇಗೆ ಫಿಗರ್ ಮೈಂಟೇನ್ ಮಾಡ್ತಾರೆ ಅನ್ನೋ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. 

ಶ್ರೀಲೀಲಾ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಸಮತೋಲನಗೊಳಿಸುವುದರ ಬಗ್ಗೆ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಪ್ರತಿದಿನ ಯೋಗ ಮಾಡುತ್ತಾರೆ. ನಿಯಮಿತವಾಗಿ ಪ್ರತಿದಿನ 45 ನಿಮಿಷಗಳನ್ನು ಯೋಗಕ್ಕೆ ಮೀಸಲಿಡುತ್ತಾರೆ. ಯಾವುದೇ ಸಂದರ್ಭದಲ್ಲೂ ಯೋಗ ಮಾಡುವುದನ್ನು ತಪ್ಪಿಸುವುದಿಲ್ಲ.

ಶೆಡ್ಯೂಲ್ ಎಷ್ಟೇ ಬಿಝಿಯಾಗಿದ್ದರೂ ಶ್ರೀಲೀಲಾ ವರ್ಕೌಟ್ ಮಾಡೋದನ್ನು ಮರೆಯೋದಿಲ್ಲ. ಭಗವಂತ ಕೇಸರಿ ಚಿತ್ರದಲ್ಲಿ ಶ್ರೀಲೀಲಾ ಸೇನೆಯ ತರಬೇತಿಯಲ್ಲಿ ಭಾಗವಹಿಸುವ ದೃಶ್ಯವಿದೆ. ನಟಿ ಅದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದರು. 

ಕಾರ್ಡಿಯೋ, ಹಗ್ಗ ಎಳೆಯುವುದು ಇತ್ಯಾದಿ. ತೂಕ ಎತ್ತುವುದು,  ಥ್ರೆಡ್ ಮಿಲ್ ಓಟವನ್ನು ನಟಿ ಒಂದು ದಿನವೂ ಬಿಡದೆ ಮಾಡುತ್ತಾರೆ. ಸ್ನಾಯುಗಳ ಬಲಕ್ಕಾಗಿ,  ಹೆಚ್ಚಾಗಿ ಬೆಂಚ್ ಪ್ರೆಸ್‌ಗಳು, ಡೆಡ್ ಲಿಫ್ಟ್‌ಗಳು ಮತ್ತು ತಮ್ಮ ದೇಹವನ್ನು ಟೋನ್ ಆಗಿ ಇರಿಸಿಕೊಳ್ಳಲು ಸ್ಕ್ವಾಟ್‌ಗಳನ್ನು ಮಾಡುತ್ತಾರೆ. 

ಆಹಾರದ ವಿಷಯದಲ್ಲೂ ಶ್ರೀಲೀಲಾ ಅಷ್ಟೇ ಕಾಳಜಿ ವಹಿಸುತ್ತಾರೆ. ಬೆಳಗ್ಗೆ ತೆಂಗಿನ ನೀರು, ನಂತರ ಕಡಿಮೆ ಕೊಬ್ಬಿನ ಪಾನೀಯಗಳ ರಸ, ತರಕಾರಿ ಸ್ಯಾಂಡ್‌ವಿಚ್‌ ತಿನ್ನುತ್ತಾರೆ. ಒಂದು ಹಣ್ಣು, ಸಲಾಡ್‌ ಬೌಲ್ ಉಪಾಹಾರಕ್ಕಾಗಿ ತೆಗೆದುಕೊಳ್ಳುತ್ತಾರೆ. 

ಸಲಾಡ್, ತರಕಾರಿಗಳು, ಬ್ರೌನ್ ರೈಸ್ ಮತ್ತು ಕಾಳುಗಳನ್ನು ಊಟಕ್ಕೆ ಸೇವಿಸುತ್ತಾರೆ. ದೇಹವನ್ನು ನಿರ್ಜಲೀಕರಣಗೊಳಿಸಲು ನಿಂಬೆ ನೀರನ್ನು ಕುಡಿಯುತ್ತಾರೆ.

ರಾತ್ರಿಯ ಊಟದಲ್ಲಿ ಬಹಳ ಕಡಿಮೆ ಆಹಾರವನ್ನು ತೆಗೆದುಕೊಳ್ಳುತ್ತಾರೆ. ತರಕಾರಿ ಸೂಪ್ ಅಥವಾ ಯಾವುದೇ ಸಲಾಡ್ ತಿನ್ನುತ್ತಾರೆ. ಸಿಹಿ ತಿನ್ನಬೇಕೆಂದು ಅನಿಸಿದಾಗ ಸಕ್ಕರೆ ಕಡಿಮೆ ಇರುವ ಸ್ವೀಟ್ ತೆಗೆದುಕೊಳ್ಳುತ್ತಾರೆ.

ಶ್ರೀಲೀಲಾಗೆ ಕಾಫಿ ಅಂದರೆ ಅಚ್ಚುಮೆಚ್ಚು. ಸಂಜೆಯ ಹೊತ್ತು ಮಿಸ್ ಮಾಡದೆ ಕಾಫಿ ಕುಡಿಯುತ್ತಾರೆ. ಅವುಗಳ ಜೊತೆಗೆ, ತಿಂಡಿಗಳನ್ನೂ ತೆಗೆದುಕೊಳ್ಳುತ್ತಾರೆ.

'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇತ್ತೀಚಿಗೆ ಮಹೇಶ್ ಬಾಬು ಜೊತೆ ಅಭಿನಯಿಸಿದ ಗುಂಟೂರು ಕಾರಂ ಸಿನಿಮಾ ರಿಲೀಸ್ ಆಗಿತ್ತು. 

click me!