ಜಸ್ಟ್ 1 ತಿಂಗಳು ಈ ನೀರು ಕುಡಿದ್ರೆ ಸಾಕು, ಭರ್ತಿ 10 ಕೆಜಿ ತೂಕ ಕಡಿಮೆ ಮಾಡ್ಕೋಬೋದು

First Published | Sep 26, 2023, 11:40 AM IST

ದಿನದ ಮೂರೂ ಹೊತ್ತು ಹೊರಗಡೆ ತಿನ್ನೋದು. ಬರ್ಗರ್‌, ಪಿಜ್ಜಾ, ಪೆಪ್ಸಿ, ಕೋಲಾಗಳೇ ಫೇವರಿಟ್‌. ಮೂವಿ, ಶಾಪಿಂಗ್‌ ಅಂತ ಸುತ್ತಾಡಿದ್ರೆ ದಿನ ಮುಗೀತು. ಎಕ್ಸರ್‌ಸೈಸ್ ಮಾತೇ ಇಲ್ಲ. ಅಂದ್ಮೇಲೆ ತೂಕ ಹೆಚ್ಚಾಗದೆ ಇರುತ್ತಾ? ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಹಲವರನ್ನು ಕಾಡೋ ಸಮಸ್ಯೆ. ದಿನದಿಂದ ದಿನಕ್ಕೆ ವೈಟ್‌ ಗೈನ್ ಆಗ್ತಾನೆ ಹೋಗುತ್ತೆ. ಇದಕ್ಕೇನು ಪರಿಹಾರ.

ದಿನದ ಮೂರೂ ಹೊತ್ತು ಹೊರಗಡೆ ತಿನ್ನೋದು. ಬರ್ಗರ್‌, ಪಿಜ್ಜಾ, ಪೆಪ್ಸಿ, ಕೋಲಾಗಳೇ ಫೇವರಿಟ್‌. ಮೂವಿ, ಶಾಪಿಂಗ್‌ ಅಂತ ಸುತ್ತಾಡಿದ್ರೆ ದಿನ ಮುಗೀತು. ಎಕ್ಸರ್‌ಸೈಸ್ ಮಾತೇ ಇಲ್ಲ. ಅಂದ್ಮೇಲೆ ತೂಕ ಹೆಚ್ಚಾಗದೆ ಇರುತ್ತಾ? ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಹಲವರನ್ನು ಕಾಡೋ ಸಮಸ್ಯೆ. ದಿನದಿಂದ ದಿನಕ್ಕೆ ವೈಟ್‌ ಗೈನ್ ಆಗ್ತಾನೆ ಹೋಗುತ್ತೆ. ಇದಕ್ಕೇನು ಪರಿಹಾರ.

ಒತ್ತಡದ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ಸರಿಯಾಗಿ ನಿದ್ದೆ ಮಾಡದಿರೋದು, ವ್ಯಾಯಾಮ ಮಾಡದಿರೋದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ. ತೂಕ ಇಳಿಸಿಕೊಳ್ಳೋಕೆ ಅಂತ ಎಲ್ಲರೂ ನಾನಾ ರೀತಿಯ ಸರ್ಕಸ್ ಮಾಡ್ತಾರೆ. ಡಯೆಟ್, ವಾಕಿಂಗ್‌, ರನ್ನಿಂಗ್ ಅಂತ ಏನೇನೋ ಟ್ರೈ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ನಿಮ್ಮನ್ನೂ ತೂಕ ಹೆಚ್ಚಳದ ಸಮಸ್ಯೆ ಕಾಡ್ತಿದ್ರೆ ಇಲ್ಲೊಂದು ಈಝಿ ಮೆಥಡ್ ಇದೆ. ಇದನ್ನು ಟ್ರೈ ಮಾಡ್ಬೋದು

Latest Videos


ತೂಕ ಕಡಿಮೆ ಮಾಡ್ಕೊಳ್ಳೋಕೆ ಬೆಳಗ್ಗೆದ್ದು ಬರೀ ಹೊಟ್ಟೆಗೆ ಬಿಸಿ ನೀರು, ಜೇನು ಬೆರೆಸಿದ ನೀರು, ನಿಂಬೆ ಹನಿ ಬೆರೆಸಿದ ನೀರು ಕುಡಿಯುವವರಿದ್ದಾರೆ. ಆದರೆ ಇವೆಲ್ಲಕಿಂತ ತೂಕ ಇಳಿಕೆಗೆ ಜೀರಿಗೆ ನೀರು ತುಂಬಾ ಪರಿಣಾಮಕಾರಿ ಅನ್ನೋದು ನಿಮ್ಗೊತ್ತಾ? ಹೌದು, ಜೀರಿಗೆ ನೀರು ತೂಕವನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕ್ರಿಯೆಯನ್ನು ಸುಧಾರಿಸುವವರೆಗೆ ಜೀರಿಗೆ ಹಲವು  ಔಷಧೀಯ ಗುಣಗಳಿಂದ ಕೂಡಿದೆ.

ಆದರೆ ಬೆಳಗ್ಗಿನ ಬದಲು ರಾತ್ರಿಯಲ್ಲಿ ಜೀರಿಗೆ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾ. ದಿನಾ ಇದನ್ನು ಸೇವಿಸುವುದರಿಂದ ಅನೇಕ ರೋಗಗಳ ಅಪಾಯ  ಕಡಿಮೆಯಾಗುತ್ತದೆ. ಈ ಕಾರಣಕ್ಕಾಗಿಯೇ ಡಯೆಟ್  ತಜ್ಞರು ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ.  ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಜೀರಿಗೆ ನೀರು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಜೀರಿಗೆ ಚಯಾಪಚಯ ದರವನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ ಮತ್ತು ಇದು ತೂಕ ನಷ್ಟಕ್ಕೆ ಸುಲಭವಾಗಿ ನೆರವಾಗುತ್ತದೆ. ಅಷ್ಟೇ ಅಲ್ಲ, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಈ ನೀರು  ತುಂಬಾ ಪ್ರಯೋಜನಕಾರಿಯಾಗಿದೆ. 

ಜೀರಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿ ಜೀರ್ಣಕಾರಿ ಕಿಣ್ವಗಳಿರುತ್ತವೆ. ಇವು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಊಟವಾದ ಸುಮಾರು 2 ಗಂಟೆಗಳ ನಂತರ ಜೀರಿಗೆ ನೀರನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ವೇಗಗೊಳ್ಳುತ್ತದೆ, ಇದು ಮುಖ್ಯವಾಗಿ ದೇಹದಲ್ಲಿ ಇರುವ ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ತ್ಯಾಜ್ಯವನ್ನು ಹೊರಹಾಕಲು ಪ್ರಯೋಜನಕಾರಿಯಾಗಿದೆ.

ಜೀರಿಗೆ ಇತರ ಆಹಾರ ಪದಾರ್ಥಗಳಿಗಿಂತ ಸರಿಸುಮಾರು 13 ಪಟ್ಟು ಹೆಚ್ಚು ಕಬ್ಬಿಣವನ್ನು ಹೊಂದಿರುತ್ತದೆ. ಹೀಗಾಗಿ ಜೀರಿಗೆ ನೀರು ಕುಡಿಯುವ ಅಭ್ಯಾಸ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ.
 

ರಾತ್ರಿ ಊಟಕ್ಕೆ ಅರ್ಧ ಗಂಟೆ ಮೊದಲು ಜೀರಿಗೆ ನೀರನ್ನು ಕುಡಿಯುವುದರಿಂದ ದೇಹಕ್ಕೆ ಕಬ್ಬಿಣದಂತಹ ಹಲವಾರು ಪೋಷಕಾಂಶಗಳು ಪೂರೈಕೆಯಾಗುತ್ತದೆ. ಇದು ದೇಹವನ್ನು ಆರೋಗ್ಯವಾಗಿಡಲು ಸಹ ಸಹಾಯ ಮಾಡುತ್ತದೆ

click me!