ಕಬಾಬ್ ಪ್ರಿಯರೇ ಕೇಳಿ… ಈ ಜಾಗದಲ್ಲಿ ಸಿಗುತ್ತಂತೆ ಕಿಕ್ ಏರಿಸೋ ಆಲ್ಕೋಹಾಲ್ ಕಬಾಬ್!

Published : Sep 23, 2023, 05:24 PM IST

ಇತ್ತೀಚಿನ ದಿನಗಳಲ್ಲಿ, ಜನರು ಆಹಾರದೊಂದಿಗೆ ವಿವಿಧ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕೆಲವೊಂದು ತುಂಬಾನೆ ವಿಚಿತ್ರ ಕಾಂಬಿನೇಶನ್ ಆಗಿರುತ್ತೆ. ಹಾಗಂತ ಎಲ್ಲಾ ಹೊಸ ಪ್ರಯೋಗದ ಆಹಾರಗಳನ್ನು ಕೆಟ್ಟದ್ದು ಎಂದು ಹೇಳೋ ಹಾಗಿಲ್ಲ, ಆದರೆ ಅವು ತುಂಬಾನೆ ವಿಚಿತ್ರವಾಗಿರುತ್ತೆ.  

PREV
16
ಕಬಾಬ್ ಪ್ರಿಯರೇ ಕೇಳಿ… ಈ ಜಾಗದಲ್ಲಿ ಸಿಗುತ್ತಂತೆ ಕಿಕ್ ಏರಿಸೋ ಆಲ್ಕೋಹಾಲ್ ಕಬಾಬ್!

ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ (social media) ಆಹಾರದ ಬಗ್ಗೆ ಅನೇಕ ರೀತಿಯ ವೀಡಿಯೊಗಳು ವೈರಲ್ ಆಗುತ್ತಿವೆ. ಆಹಾರದೊಂದಿಗೆ ಪ್ರಯೋಗ ಮಾಡುವುದು ಒಂದು ಟ್ರೆಂಡ್. ಕೆಲವೆಡೆ ಸಮೋಸಾ ಮ್ಯಾಗಿಯನ್ನು ತಯಾರಿಸಿ ಮಾರುತ್ತಿದ್ದರೆ, ಕೆಲವು ಜನರು ಲಿಮ್ಕಾ ಮ್ಯಾಗಿ ತಯಾರಿಸುತ್ತಾರೆ. ಇನ್ನೂ ಕೆಲವರು ಫ್ಯಾಂಟಾ ಆಮ್ಲೆಟ್ ಕೂಡ ತಯಾರಿಸುತ್ತಾರೆ. ಅಂತಹುದ್ದೇ ಒಂದು ಹೊಸ ಪ್ರಯೋಗ ಇದೀಗ ನಡೆದೆ. 
 

26

ಇತ್ತೀಚೆಗೆ, ಬೀದಿ ಬದಿ ವ್ಯಾಪಾರಿಯೊಬ್ಬರು ಆಹಾರದ ಮೇಲೆ ಇಂತಹ ಪ್ರಯೋಗವನ್ನು ಮಾಡಿದ್ದಾರೆ, ಇದು ಎಲ್ಲೆಡೆ ಚರ್ಚೆಯಾಗುತ್ತಿದೆ. ಅಂದಹಾಗೆ, ಈ ರೆಸಿಪಿ ಆಲ್ಕೋಹಾಲ್ ಕುಡಿಯುವವರಿಗೆ ಮಾತ್ರ. ಏಕೆಂದರೆ ಈ ಪಾಕವಿಧಾನದ ಹೆಸರು ಆಲ್ಕೋಹಾಲ್ ಕಬಾಬ್ (alcohol kebab). ಹೌದು ನೀವು ಕಬಾಬ್ ಪ್ರಿಯರಾಗಿದ್ರೆ, ಕಿಕ್ ಏರಿಸುವಂತಹ ಆಲ್ಕೋಹಾಲ್ ಕಬಾಬ್ ಎಲ್ಲಿ ಸಿಗುತ್ತೆ ಅನ್ನೋದನ್ನು ಸಹ ನೀವು ತಿಳಿಯಬಹುದು. 
 

36

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ
ವೈರಲ್ ಆಗುತ್ತಿರುವ ವಿಡಿಯೋ ಒಂದರಲ್ಲಿ, ಕಬಾಬ್ ತಯಾರಿಸುವಾಗ ಆಲ್ಕೋಹಾಲ್ ಹೇಗೆ ಬಳಸಲಾಗುತ್ತಿದೆ ಎಂಬುದನ್ನು ನೀವು ನೋಡಬಹುದು. ಈ ವಿಡಿಯೋ ಕೊಲ್ಕತ್ತಾದ ಬೀದಿಯಲ್ಲಿನ ಒಂದು ಅಂಗಡಿಯದ್ದಾಗಿದೆ. ಒಬ್ಬ ವ್ಯಕ್ತಿಯು ಕೆಲವು ಕಬಾಬ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಹಿಟ್ಟಿನ ಮೇಲೆ ಒಂದು ತಟ್ಟೆಯಲ್ಲಿ ಇರಿಸಿ, ನಂತರ ಅದರ ಮೇಲೆ ಓಲ್ಡ್ ಮಾಂಕ್ (Old Monk) ಸುರಿಯುತ್ತಾನೆ.

46

ಮಸಾಲೆ -ಓಲ್ಡ್ ಮಾಂಕ್ ಬೆರೆಸಿದ ಚಿಕನ್ ತುಂಡನ್ನು ನಂತರ ಬೇಯಿಸಲು ತಂದೂರ್ ಮೇಲೆ ಇರಿಸುತ್ತಾನೆ.  ಅದು ಬೆಂಕಿಯಲ್ಲಿ ಬೇಯುತ್ತಿರುವಾಗಲೂ ಅದರ ಮೇಲೆ ಮತ್ತೆ ಆಲ್ಕೋಹಾಲ್ ಬೆರೆಸುತ್ತಾನೆ. ಚಿಕನ್ ಕಬಾಬ್ ರೆಡಿಯಾಗಿ ತಟ್ಟೆಗೆ ಹಾಕಿದ ಮೇಲೆ ಮತ್ತೆ ಅದರ ಮೇಲೆ ಆಲ್ಕೋಹಾಲ್ ಸುರಿದು ನೀಡುತ್ತಾನೆ. ತುಂಬಾ ಚೆನ್ನಾಗಿದೆ ಎಂದು ವಿಡಿಯೋ ಮಾಡಿದವರು ಹೇಳಿದ್ದಾರೆ. ಆದ್ರೆ ತಿಂದಾದ ಮೇಲೆ ಏನಾಗಿದೆ ಅನ್ನೋದು ಮಾತ್ರ ಗೊತ್ತಿಲ್ಲ.

Video Link : ಆಲ್ಕೋಹಾಲ್ ಕಬಾಬ್

56

ಆಲ್ಕೋಹಾಲ್ ಕಬಾಬ್ ಗಳ ಬೆಲೆ ಎಷ್ಟು? 
ಒಂದು ಪ್ಲೇಟ್ ಆಲ್ಕೋಹಾಲ್ ಕಬಾಬ್ ಗೆ ನೀವು 220 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆದ್ರೆ ಇದನ್ನ ತಿನ್ನೋದಕ್ಕೆ ಮಾತ್ರ ಕೋಲ್ಕತ್ತಾಗೆ ಹೋಗಬೇಕಾಗುತ್ತೆ. 

ವಿಳಾಸ- 28/5, ಕಾನ್ವೆಂಟ್ ರಸ್ತೆ, ಆಂಟ್ಲಿ, ಕೋಲ್ಕತಾ (28/5, ಕಾನ್ವೆಂಟ್ ರಸ್ತೆ, ಎಂಟಲಿ, ಕೋಲ್ಕತಾ)
ಸಮಯ: ನೀವು ಸಂಜೆ 6 ರಿಂದ ರಾತ್ರಿ 10:30 ರವರೆಗೆ ಇಲ್ಲಿಗೆ ಹೋಗಬಹುದು. 
ಅಂಗಡಿ ಹೆಸರು - ಓಹ್ ಮೈ ಕಬಾಬ್!

66

ಹೋಗೋದು ಹೇಗೆ?
ನೀವು ಎಂದಾದರೂ ಕೋಲ್ಕತ್ತಾಗೆ ಪ್ರವಾಸ ಪ್ಲ್ಯಾನ್ ಮಾಡಿದ್ರೆ ಮತ್ತು ನೀವು ವಿಭಿನ್ನವಾದದ್ದನ್ನು ಟ್ರೈ ಮಾಡಲು ಬಯಸಿದ್ರೆ, ಇಲ್ಲಿಗೆ ಹೋಗಬಹುದು. ನೀವು ದೆಹಲಿ, ಮುಂಬೈ, ಬೆಂಗಳೂರು ಎಲ್ಲಾ ಕಡೆಯಿಂದಲೂ ಕೋಲ್ಕತ್ತಾಗೆ ಹೋಗಬಹುದು. ರೈಲು, ವಿಮಾನ ಸೌಲಭ್ಯ ಎಲ್ಲಾ ಕಡೆಯೂ ಇದೆ. 

Read more Photos on
click me!

Recommended Stories