ಮೀನು ಇಷ್ಟ ಅಂತ… ಇವನ್ನು ತಿಂದ್ರೆ ಜೀವವೇ ಹೋಗಬಹುದು!

First Published | Sep 24, 2023, 12:45 PM IST

ಅನೇಕ ಜನರು ಮೀನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ವಿವಿಧ ರೀತಿಯ ಮೀನುಗಳನ್ನು ತಿನ್ನಲು ಜನ ಇಷ್ಟಪಡ್ತಾರೆ, ಆದರೆ ಮೀನು ತಿನ್ನುವ ನಿಮ್ಮ ಹವ್ಯಾಸವು ಕೆಲವೊಮ್ಮೆ ನಿಮಗೆ ಹಾನಿಯನ್ನುಂಟು ಮಾಡುತ್ತೆ. ನೀವೂ ಮೀನು ಪ್ರಿಯರಾಗಿದ್ರೆ ಯಾವ ಮೀನು ತಿನ್ನೋದು ಆರೋಗ್ಯಕ್ಕೆ ಹಾನಿಯಾಗುತ್ತೆ ಅನ್ನೋದನ್ನು ನೋಡೋಣ. 
 

ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಗೊತ್ತಿಲ್ಲದೆ ವಿಷಪೂರಿತ ಮೀನು ತಿಂದ ಮಹಿಳೆಯೊಬ್ಬರ ಕೈ ಮತ್ತು ಕಾಲುಗಳನ್ನು ಕತ್ತರಿಸಲಾಗಿತ್ತು. ಇಲ್ಲಿನ ಟಿಲಾಪಿಯಾ ಎಂಬ ಮೀನನ್ನು ತಿಂದ ನಂತರ, ವಿಬ್ರಿಯೊ ವಲ್ನಿಕಸ್ ಎಂಬ ಬ್ಯಾಕ್ಟೀರಿಯಾ ಮಹಿಳೆಯ ದೇಹದಲ್ಲಿ ಹರಡಿತು, ಇದರಿಂದಾಗಿ ಸೋಂಕು ಅವಳ ದೇಹದಾದ್ಯಂತ ಹರಡಿ, ಮಹಿಳೆ ತನ್ನ ಕೈ ಮತ್ತು ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಇಂತಹ ಪರಿಸ್ಥಿತಿ ನಿಮಗೆ ಬಾರದಿರಲು ಮೀನು ತಿನ್ನುವ ಮುನ್ನ ಯೋಚಿಸಬೇಕು. 

ಅನೇಕ ಜನರು ಮೀನು (eating fish) ತಿನ್ನಲು ಇಷ್ಟಪಡುತ್ತಾರೆ, ಆದರೆ ಕೆಲವೊಮ್ಮೆ ನಮ್ಮ ಹವ್ಯಾಸವು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೀನು ತಿನ್ನುವ ಮೊದಲು ನೀವು ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. 
 

Tap to resize

ಮೀನುಗಳಲ್ಲಿ ಪಾದರಸ (mercury) ಕಂಡು ಬರುತ್ತದೆ, ಇದು ನಮ್ಮ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ನೀವು ತಿನ್ನುವ ಮೀನಿನಲ್ಲಿ ಪಾದರಸ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳುವುದು ಮುಖ್ಯ, ಇದರಿಂದ ನೀವು ಯಾವುದೇ ರೀತಿಯ ತೊಂದರೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
 

ಪಾದರಸದ ವಿಧಗಳು
ಪಾದರಸದ ಎರಡು ಪ್ರಮುಖ ರೂಪಗಳಿವೆ, ಅವುಗಳಲ್ಲಿ ಒಂದು ಮೀಥೈಲ್ಮರ್ಕ್ಯುರಿ ಮತ್ತು ಧಾತು ಪಾದರಸ. ಮೀಥೈಲ್ಮರ್ಕ್ಯುರಿ ನೀರಿನಲ್ಲಿ, ನಮ್ಮ ದೇಹದಲ್ಲಿ ಮತ್ತು ನಮ್ಮ ಆಹಾರಗಳಲ್ಲೂ ಕಂಡುಬರುತ್ತದೆ, ಆದರೂ ಇದು ಸುರಕ್ಷಿತವಲ್ಲ. ಇನ್ನು ಧಾತು ಪಾದರಸವು ಆಹಾರದಲ್ಲಿ ಇರುವುದಿಲ್ಲ, ಆದರೆ ಇದು ದೈನಂದಿನ ವಿಷಯಗಳಲ್ಲಿ ಕಂಡು ಬರುತ್ತದೆ. ಮೀಥೈಲ್ಮರ್ಕ್ಯುರಿ ಮೀನುಗಳಲ್ಲಿ ಕಂಡು ಬರುವ ಒಂದು ವಿಧ. ಸ್ವೋರ್ಡ್ ಫಿಶ್, ಬಂಗುಡೆ ಮತ್ತು ಶಾರ್ಕ್ ಗಳಂತಹ ಕೆಲವು ಮೀನುಗಳು ಈ ಸಾವಯವ ಸಂಯುಕ್ತವನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿರುತ್ತವೆ.

ಪಾದರಸವು ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?
ಪಾದರಸವು ಅತ್ಯಂತ ವಿಷಕಾರಿ. ಮತ್ತು ಇದನ್ನು ನ್ಯೂರೋಟಾಕ್ಸಿನ್ (neurotoxin) ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ನಿಮ್ಮ ನರಮಂಡಲವನ್ನು ಹಾನಿಗೊಳಿಸುತ್ತದೆ. ಪಾದರಸವನ್ನು ನುಂಗುವುದಕ್ಕಿಂತ ಉಸಿರಾಟದ ಮೂಲಕ ದೇಹಕ್ಕೆ ಹೋದರೆ, ಅದು ಹೆಚ್ಚು ಅಪಾಯಕಾರಿ. ಮೀಥೈಲ್ಮರ್ಕ್ಯುರಿ ಅಪಾಯಕಾರಿ, ವಿಶೇಷವಾಗಿ ಹುಟ್ಟಲಿರುವ ಶಿಶುಗಳಿಗೆ ಇದು ಭಾರಿ ಅಪಾಯವನ್ನುಂಟು ಮಾಡುತ್ತೆ. 

ಪಾದರಸ ವಿಷದ ಲಕ್ಷಣಗಳು ಯಾವುವು?
ಕೈ ಮತ್ತು ಕಾಲುಗಳಲ್ಲಿ ಜುಮುಗುಡುವಿಕೆ
ನಡೆಯಲು ಕಷ್ಟವಾಗುವುದು
ಆಲಸ್ಯ
ಸಮನ್ವಯದ ಕೊರತೆ
ಮಾತನಾಡಲು ಅಥವಾ ಕೇಳಲು ಕಷ್ಟವಾಗುವುದು
ಶಿಶುಗಳು ಮತ್ತು ಮಕ್ಕಳಲ್ಲಿ ಬೆಳವಣಿಗೆಯ ಸಮಸ್ಯೆಗಳು

ನೀವು ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ ಮತ್ತು ನೀವು ಹೆಚ್ಚು ಮೀನು ತಿನ್ನುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಏಕೆಂದರೆ ಇವು ಮೀಥೈಲ್ಮರ್ಕ್ಯುರಿ ಚಿಹ್ನೆಗಳಾಗಿರಬಹುದು. ಆದರೆ, ಎಲ್ಲಾ ರೀತಿಯ ಮೀನುಗಳು ಹಾನಿಕಾರಕವಲ್ಲ. ಕೆಲವು ಮೀನುಗಳು ಹೆಚ್ಚಿನ ಪ್ರಮಾಣದ ಪಾದರಸವನ್ನು ಹೊಂದಿದ್ದರೆ, ಕೆಲವು ನಿಯಮಿತವಾಗಿ ತಿನ್ನಲು ಸುರಕ್ಷಿತವಾಗಿವೆ.
 

ಈ ಮೀನುಗಳು ಹೆಚ್ಚಿನ ಪಾದರಸವನ್ನು ಹೊಂದಿರುತ್ತವೆ
ಹೆಚ್ಚಿನ ಪಾದರಸದ ಮೀನುಗಳನ್ನು ವಿಶೇಷ ಸಂದರ್ಭಗಳಲ್ಲಿ ಬಳಸಬೇಕು. ಇದಲ್ಲದೆ, ನೀವು ಗರ್ಭಿಣಿಯಾಗಿದ್ದರೆ, ನೀವು ಅವುಗಳನ್ನು ಸೇವಿಸಬಾರದು. ಹೆಚ್ಚು ಪಾದರಸ ಹೊಂದಿರುವ ಮೀನುಗಳು ಯಾವುವು ಎಂದರೆ
ಕಿಂಗ್ ಮ್ಯಾಕೆರೆಲ್
ಷಾರ್ಕ್ ಮೀನು
ಸ್ವೋರ್ಡ್ ಫಿಶ್
ಟೈಲ್ ಫಿಶ್
ಟ್ಯೂನ ಮೀನು (Tuna fish)
 

ಕಡಿಮೆ ಪಾದರಸ ಮಟ್ಟವನ್ನು ಹೊಂದಿರುವ ಮೀನು
ಕಡಿಮೆ ಪಾದರಸದ ಅಂಶವನ್ನು ಹೊಂದಿರುವ ಮೀನುಗಳು ನಿಯಮಿತ ಸೇವನೆಗೆ ಸುರಕ್ಷಿತವೆ. ಗರ್ಭಿಣಿಯರು ಮತ್ತು ಮಕ್ಕಳು ಸಹ ಅವುಗಳನ್ನು ತಮ್ಮ ಆಹಾರದ ಒಂದು ಭಾಗವಾಗಿಸಬಹುದು. ಈ ಮೀನುಗಳಲ್ಲಿ ಇವು ಸೇರಿವೆ:
ಸಾಲ್ಮನ್ (salmon fish)
ಸಾರ್ಡೀನ್
ಟಿಲಾಪಿಯಾ
ಕ್ಯಾಟ್ಫಿಶ್
ಕೋಡ್
ಸೀಗಡಿ, ಸ್ಕಾಲ್ಪ್ಸ್ ಮತ್ತು ಏಡಿ ಮಾಂಸಗಳಂತಹ ಚಿಪ್ಪಿನ ಮೀನುಗಳು ಉತ್ತಮವಾಗಿದೆ. 

ಮಧ್ಯಮ ಪಾದರಸ  ಹೊಂದಿರುವ ಮೀನುಗಳು
ಕಾರ್ಪ್
ಅಟ್ಲಾಂಟಿಕ್ ಸಾಗರ ಟೈಲ್ ಫಿಶ್
ಗ್ರೂಪರ್
ಯೆಲ್ಲೊಫಿನ್ ಟ್ಯೂನಾ
ಆಲ್ಬಾಕೋರ್ ಟ್ಯೂನ ಮೀನು
ಈ ಮೀನುಗಳನ್ನು ಕಡಿಮೆ ಪ್ರಮಾಣದಲ್ಲಿ ಅಥವಾ ತಿನ್ನದೇ ಇದ್ದರೆ ಉತ್ತಮ. 
 

Latest Videos

click me!