ಕಾಫಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತು. ಕಾಫಿ ಯಾಕೆ ಬೇಕು ಎಂದು ಯಾರಾದ್ರು ಕೇಳಿದ್ರೆ, ನಿಮ್ಮಿಂದ ಬರೋ ಫಸ್ಟ್ ಉತ್ತರ ಏನೆಂದ್ರೆ ಮೂಡ್ ಫ್ರೆಶ್ ಆಗೋಕೆ ಎಂದು ಅಲ್ವಾ? ಯೆಸ್… ಇದರಿಂದ ಲಾಭಗಳೇನೋ ಇದೆ ನಿಜಾ… ಆದರೆ ಅನೇಕ ಅನಾನುಕೂಲತೆಗಳಿವೆ ಅನ್ನೋದು ನಿಮಗೆ ಗೊತ್ತಾ? ನಿಮಗೊಂದು ಹೇಳ್ತೀವಿ ಕೇಳಿ… ಯಾವುದೇ ಆಹಾರವನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಯಾವಾಗಲೂ ಪ್ರಯೋಜನಕಾರಿಯಾಗಿದೆ. ಆದರೆ ಅದು ಹೆಚ್ಚಾದ್ರೆ ಮಾತ್ರ ಹಾನಿ. ಇಲ್ಲಿ ನಾವು, ಕಾಫಿ ಸಿಪ್ ಮಾಡುತ್ತಾ, ತೂಕ ಇಳಿಸುವ ವಿಧಾನ ಇಲ್ಲಿ ತಿಳಿಸಲಾಗಿದೆ.
ನಿಮ್ಮ ಹೆಚ್ಚಿದ ತೂಕವನ್ನು (heavy weight) ನಿಯಂತ್ರಿಸಲು ಅಥವಾ ಕೆಲವು ಕಿಲೋಗಳಷ್ಟು ತೂಕವನ್ನು ಕಳೆದುಕೊಳ್ಳಲು ನೀವು ಬಯಸಿದರೆ, ಈ ಕೆಲಸದಲ್ಲಿ ನೀವು ಕಾಫಿಯ ಸಹಾಯವನ್ನು ಪಡೆಯಬಹುದು. ಹೌದು, ಹೇಗೆ ಗೊತ್ತಾ? ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುವ ಕಾಫಿಗೆ ವಿಶೇಷ DIY ಪೇಸ್ಟ್ ಅನ್ನು ಸೇರಿಸಿದರೆ, ಅದು ತೂಕ ನಷ್ಟಕ್ಕೆ (weight loss)ಸಹಾಯ ಮಾಡುತ್ತೆ.
ತೂಕ ಇಳಿಸಲು ಬೇಕಾಗಿರುವ ಪೇಸ್ಟ್ ಅನ್ನು ಹೇಗೆ ತಯಾರಿಸುವುದು ಮತ್ತು ಅದಕ್ಕೆ ನಿಮಗೆ ಏನು ಬೇಕು ಎಂದು ತಿಳಿಯಿರಿ, ಇಲ್ಲಿದೆ ಕಾಫಿ ಜೊತೆ ನೀವು ಸೇರಿಸಬೇಕಾದ ಕೆಲವು ಅಗತ್ಯ ಸಾಮಾಗ್ರಿಗಳು :
ತೆಂಗಿನೆಣ್ಣೆ
ದಾಲ್ಚಿನ್ನಿ ಪುಡಿ
ಶುದ್ಧ ಜೇನುತುಪ್ಪ
ಈ ವಿಧಾನದ ಮೂಲಕ ಕಾಫಿ ಪೇಸ್ಟ್ ತಯಾರಿಸಿ
ನೀವು 100 ಗ್ರಾಂ ಜೇನುತುಪ್ಪಕ್ಕೆ (Honey) 120 ಮಿಲೀ ಕೊಬ್ಬರಿ ಎಣ್ಣೆ ಸೇರಿಸಿ ಮತ್ತು ನಂತರ ಅದಕ್ಕೆ ಒಂದು ಟೀಸ್ಪೂನ್ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ನಂತರ ಈ ಪೇಸ್ಟ್ ಅನ್ನು ಗಾಜಿನ ಜಾರ್ ನಲ್ಲಿ ತುಂಬಿ ಮತ್ತು ಅದನ್ನು ಫ್ರಿಡ್ಜ್ ನಲ್ಲಿ ಇರಿಸಿ.
ಬಳಕೆಯ ವಿಧಾನ
ನೀವು ಹಗಲಿನಲ್ಲಿ ಕಾಫಿ ಕುಡಿದಾಗಲೆಲ್ಲಾ ನೀವು ಈ ಪೇಸ್ಟ್ ಅನ್ನು ಬಳಸಬೇಕು. ಇದನ್ನು ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಬಳಸಬೇಡಿ.
ಕಾಫಿಯನ್ನು ತಯಾರಿಸಿದ ನಂತರ, ಈ ಪೇಸ್ಟ್ ಅನ್ನು ಕಾಫಿಯೊಂದಿಗೆ ಮಿಕ್ಸ್ ಮಾಡಿ ಮತ್ತು ಅದನ್ನು ಸವಿಯಿರಿ. ನೀವು ಈ ಪೇಸ್ಟ್ ಅನ್ನು ಬ್ಲ್ಯಾಕ್ ಕಾಫಿಯಲ್ಲಿ (black coffee) ಬೆರೆಸಿ ಕುಡಿಯುವುದು ಉತ್ತಮ. ಇದು ತೂಕ ಇಳಿಕೆಗೆ ಸಹಕಾರಿ.
ನೀವು ಈ ಪ್ರಯೋಜನವನ್ನು ಪಡೆಯುತ್ತೀರಾ?
ನಿಮ್ಮ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ, ಎಣ್ಣೆ ಮತ್ತು ಜೇನುತುಪ್ಪದ ಜೊತೆಗೆ ದಾಲ್ಚಿನ್ನಿ ನಿಮ್ಮ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ? ಅನ್ನೋದು ಅಲ್ವಾ? ತೆಂಗಿನ ಕಾಯಿಯ ತೈಲ, ತೂಕ ಇಳಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರಿಂದ, ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಬೇಗನೆ ಕರಗುತ್ತೆ.
ಜೇನುತುಪ್ಪವು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುವ ಕೆಲಸ ಮಾಡುತ್ತದೆ, ಕಿರಿಕಿರಿಯಿಂದ ರಕ್ಷಿಸುತ್ತದೆ ಮತ್ತು ಅದರ ಆಂಟಿ ಆಕ್ಸಿಡೆಂಟ್ಸ್ ದಾಲ್ಚಿನ್ನಿಯ (Cinnamon)ಆಂಟಿ ಆಕ್ಸಿಡೆಂಟ್ಸ್ ಗಳೊಂದಿಗೆ ಸೇರಿಸಿ ಸೇವಿಸಿದಾಗ ದೇಹದಲ್ಲಿರುವ ಫ್ರೀ ರಾಡಿಕಲ್ಗಳನ್ನು ತೊಡೆದುಹಾಕುತ್ತದೆ. ಜೊತೆಗೆ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುವಲ್ಲಿ ಇವೆರಡೂ ಸಹ ಸಹಾಯ ಮಾಡುತ್ತೆ. ನಿಮಗೆ ಮಧುಮೇಹದ (Diabetes) ಸಮಸ್ಯೆ ಇದ್ದರೆ, ನೀವು ಕೊಬ್ಬರಿ ಎಣ್ಣೆ ಮತ್ತು ದಾಲ್ಚಿನ್ನಿಯನ್ನು ಮಾತ್ರ ಬಳಸಬಹುದು. ಈ ಪೇಸ್ಟ್ ನಲ್ಲಿ ಜೇನುತುಪ್ಪದ ಬಳಕೆ ನಿಮಗೆ ಬೇಕಾದರೆ ಮಾತ್ರ ಬಳಸಬಹುದು.