Chicken Storage Tips: ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಪದೇ ಪದೇ ಅಂಗಡಿ-ಮಾರ್ಕೇಟ್ ಎಂದು ಓಡಾಡುವುದಕ್ಕೆ ಆಗದೆ ಒಂದೇ ಸಾರಿ ಕೆಜಿಗಟ್ಟಲೇ ಮಾಂಸವನ್ನು ಖರೀದಿಸಿ ಫ್ರಿಜ್‌ನಲ್ಲಿ ಇಡ್ತಾರೆ. ನೀವೂ ಹೀಗೆ ಮಾಂಸವನ್ನು ಫ್ರಿಜ್‌ನಲ್ಲಿ ಇಡುತ್ತಿದ್ದರೆ ನೀವಿದನ್ನ ತಿಳಿದುಕೊಳ್ಳಲೇಬೇಕು.
ಹಲವರಿಗೆ ಒಂದು ಚಿಕ್ಕ ಪೀಸ್ ಚಿಕನ್ ತುಂಡು ಇಲ್ದೇನೇ ಮುದ್ದೆ ಮುರಿಯೋಕೆ ಆಗಲ್ಲ ಅಂತಾರೆ. ಅದಕ್ಕೆ ಒಂದು ವಾರದ ಮಾಂಸವನ್ನು ಒಮ್ಮೆಗೇ ತಂದು ಫ್ರಿಡ್ಜ್‌ನಲ್ಲಿ ಇಡ್ತಾರೆ. ಮತ್ತೆ ಕೆಲವರು ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಪದೇ ಪದೇ ಅಂಗಡಿ-ಮಾರ್ಕೇಟ್ ಎಂದು ಓಡಾಡುವುದಕ್ಕೆ ಆಗದೆ ಒಂದೇ ಸಾರಿ ಕೆಜಿಗಟ್ಟಲೇ ಮಾಂಸವನ್ನು ಖರೀದಿಸಿ ಫ್ರಿಜ್‌ನಲ್ಲಿ ಇಡ್ತಾರೆ. ನೀವೂ ಹೀಗೆ ಮಾಂಸವನ್ನು ಫ್ರಿಜ್‌ನಲ್ಲಿ ಇಡುತ್ತಿದ್ದರೆ ನೀವಿದನ್ನ ತಿಳಿದುಕೊಳ್ಳಲೇಬೇಕು.
25
ಖರೀದಿಸಿದ ಎರಡು ದಿನದಲ್ಲಿ ಸೇವಿಸೋದು ಒಳ್ಳೇದು
ಫ್ರಿಜ್‌ನಲ್ಲಿಟ್ಟ ಮಾಂಸವು ಶಕ್ತಿಯನ್ನು ನೀಡುತ್ತೋ ಅಥವಾ ಸೈಲೆಂಟ್ ಕಿಲ್ಲರ್ ಆಗಿ ಬದಲಾಗುತ್ತದೆಯೇ ಎಂದು ನೋಡುವುದಾದರೆ ಪೌಷ್ಟಿಕತಜ್ಞರು ಎಚ್ಚರಿಸಿರುವ ಪ್ರಕಾರ, ಫ್ರಿಜ್‌ನಲ್ಲಿ 48 ಗಂಟೆಗಳ ಕಾಲ ಇಟ್ಟ ನಂತರ ಕಚ್ಚಾ ಮಾಂಸವು ತನ್ನ ನೈಸರ್ಗಿಕ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಬ್ಯಾಕ್ಟೀರಿಯಾಗಳಿಗೆ ಪ್ರಮುಖ ಸಂತಾನೋತ್ಪತ್ತಿ ಸ್ಥಳವೂ ಆಗುತ್ತದೆ. ಆದ್ದರಿಂದ ಖರೀದಿಸಿದ ಎರಡು ದಿನಗಳಲ್ಲಿ ಮಾಂಸವನ್ನು ಬೇಯಿಸುವುದು ಸುರಕ್ಷಿತವಾಗಿದೆ.
35
ಸರಿಯಾದ ಶೇಖರಣಾ ವಿಧಾನ ಯಾವುದು?
ಮಾಂಸವನ್ನ ಸಂಗ್ರಹಿಸುವಾಗ ಈ ಮುನ್ನೆಚ್ಚರಿಕೆಗಳನ್ನ ಅನುಸರಿಸಲು ಸೂಚಿಸುತ್ತಾರೆ.. *ಮಾಂಸವನ್ನು ತಂದ ತಕ್ಷಣ ಸ್ವಚ್ಛಗೊಳಿಸಬೇಕು ಅಥವಾ ತೇವಾಂಶವಿಲ್ಲದೆ ಒಣಗಲು ಬಿಡಬೇಕು. *ಗಾಳಿಯಾಡದ ಡಬ್ಬಿಯಲ್ಲಿ ಅಥವಾ ಜಿಪ್ ಲಾಕ್ ಬ್ಯಾಗ್‌ಗಳಲ್ಲಿ ಸಂಗ್ರಹಿಸಿ. *ಸಾಮಾನ್ಯ ಫ್ರಿಜ್ ವಿಭಾಗಕ್ಕಿಂತ ಡೀಪ್ ಫ್ರೀಜರ್‌ನಲ್ಲಿ ಇಡುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆ ನಿಧಾನವಾಗುತ್ತದೆ. *ಮಾಂಸವನ್ನು ಫ್ರೀಜರ್ ನಿಂದ ಹೊರತೆಗೆದು, ಅದು ಕರಗಿದ ನಂತರ ಮತ್ತೆ ಫ್ರೀಜರ್ ನಲ್ಲಿ ಇಡುವುದು ಅತ್ಯಂತ ಅಪಾಯಕಾರಿ. ಇದು ಬ್ಯಾಕ್ಟೀರಿಯಾಗಳು ವೇಗವಾಗಿ ಹರಡಲು ಅನುವು ಮಾಡಿಕೊಡುತ್ತದೆ.
ನೀವು ಸಂಗ್ರಹಿಸಿದ ಮಾಂಸದಲ್ಲಿ ಈ ಬದಲಾವಣೆಗಳನ್ನ ಗಮನಿಸಿದ್ರೆ ತಕ್ಷಣ ಎಸೆಯಿರಿ.. *ಮಾಂಸವು ಕೆಂಪು ಬಣ್ಣದಿಂದ ಬೂದು ಅಥವಾ ಹಸಿರು ಬಣ್ಣಕ್ಕೆ ತಿರುಗುತ್ತದೆ. *ಬಲವಾದ ಅಥವಾ ಕೊಳೆತ ವಾಸನೆ. *ಮಾಂಸವು ಮೇಲ್ಮೈಯಲ್ಲಿ ಜಿಗುಟಾದಂತೆ ಭಾಸವಾಗುತ್ತದೆ.
55
ತಿಂದ್ರೆ ಏನಾಗುತ್ತೆ?
ಕಲುಷಿತ ಅಥವಾ ಅತಿಯಾಗಿ ಬೇಯಿಸಿದ ಮಾಂಸವನ್ನು ಸೇವಿಸುವುದರಿಂದ ಫುಡ್ ಪಾಯಿಸನ್ ಆಗಬಹುದು. ಇದು ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವನ್ನು ಉಂಟುಮಾಡಬಹುದು. ದೀರ್ಘಕಾಲದ ಜಠರಗರುಳಿನ ಸಮಸ್ಯೆಗಳಿಗೂ ಕಾರಣವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.