Crispy Dosa Tips: ಪೇಪರ್‌ನಂತೆ ತೆಳುವಾಗಿರುವ ದೋಸೆ ಬೇಕಾ?, ಇಲ್ಲಿದೆ ಸುಲಭ ಟಿಪ್ಸ್‌

Published : May 15, 2026, 11:15 AM IST

Crispy Dosa Secret Ingredients: ಪೇಪರ್‌ನಷ್ಟೇ ತೆಳುವಾಗಿರುವ, ಗರಿಗರಿಯಾದ ಮತ್ತು ಹೋಟೆಲ್ ಶೈಲಿಯ ದೋಸೆ ಮನೆಯಲ್ಲೇ ಮಾಡಲು ಇಲ್ಲಿದೆ ಸುಲಭವಾದ ಟಿಪ್ಸ್ ಮತ್ತು ಟ್ರಿಕ್ಸ್. ಸರಿಯಾದ ಹಿಟ್ಟು ಮತ್ತು ಹಂಚಿನ ತಾಪಮಾನದ ರಹಸ್ಯ ತಿಳಿಯಿರಿ. 

PREV
19
ಹೋಟೆಲ್ ಶೈಲಿಯಲ್ಲಿ ಮಾಡಿ

ದೋಸೆ ತಯಾರಿಸುವಾಗ ಅದು ಹಂಚಿಗೆ ಅಂಟಿಕೊಳ್ಳುತ್ತಿದ್ದರೆ ಅಥವಾ ಹೋಟೆಲ್ ಶೈಲಿಯಲ್ಲಿ ಗರಿಗರಿಯಾಗಿ ಬರುತ್ತಿಲ್ಲವೆಂದರೆ, ಈ ಕೆಳಗಿನ ಕಿಚನ್ ಟಿಪ್ಸ್ ನಿಮಗೆ ಖಂಡಿತ ಸಹಾಯ ಮಾಡುತ್ತವೆ.

29
ಸರಿಯಾಗಿ ಹುದುಗು ವುದು(Fermentation)

ದೋಸೆ ಹಿಟ್ಟು ಸರಿಯಾಗಿ ಹುದುಗುವುದು ಬಹಳ ಮುಖ್ಯ. ಹಿಟ್ಟು ಚೆನ್ನಾಗಿ ಉಬ್ಬಿ ಬಂದಿದ್ದರೆ ಮಾತ್ರ ದೋಸೆ ಹಗುರವಾಗಿ ಮತ್ತು ಗರಿಗರಿಯಾಗಿ ಬರುತ್ತದೆ. ನೆನಪಿಡಿ, ಹಿಟ್ಟು ಅತಿ ಗಟ್ಟಿಯೂ ಇರಬಾರದು, ತೆಳುವೂ ಇರಬಾರದು.

39
ಹಂಚಿನ ತಾಪಮಾನ ಸರಿಯಾಗಿರಲಿ

ಹಂಚು ಅತಿಯಾಗಿ ಕಾಯ್ದಿದ್ದರೆ ಹಿಟ್ಟನ್ನು ಹರಡಲು ಬರುವುದಿಲ್ಲ, ಒಂದು ವೇಳೆ ಹಂಚು ತಣ್ಣಗಿದ್ದರೆ ದೋಸೆ ಅಂಟಿಕೊಳ್ಳುತ್ತದೆ. ಹಿಟ್ಟು ಹಾಕುವ ಮೊದಲು ಹಂಚಿನ ಮೇಲೆ ಸ್ವಲ್ಪ ನೀರು ಚಿಮುಕಿಸಿ. ನೀರು ತಕ್ಷಣ ಆವಿಯಾದರೆ ಹಂಚು ದೋಸೆ ಹಾಕಲು ಸಿದ್ಧವಾಗಿದೆ ಎಂದರ್ಥ.

49
ಈರುಳ್ಳಿ ಅಥವಾ ಉಪ್ಪಿನ ಬಳಕೆ

ದೋಸೆ ಹಾಕುವ ಮೊದಲು ಹಂಚಿಗೆ ಸ್ವಲ್ಪ ಎಣ್ಣೆ ಹಾಕಿ ಅರ್ಧ ಕತ್ತರಿಸಿದ ಈರುಳ್ಳಿಯಿಂದ ಉಜ್ಜಿ. ನೀವು ಬೇಕಿದ್ದರೆ ಸ್ವಲ್ಪ ಉಪ್ಪನ್ನೂ ಉಜ್ಜಬಹುದು. ಇದರಿಂದ ದೋಸೆ ಹಂಚಿಗೆ ಅಂಟಿಕೊಳ್ಳದೆ ಸುಲಭವಾಗಿ ಏಳುತ್ತದೆ.

59
ಹಿಟ್ಟನ್ನು ಹರಡುವ ಸರಿಯಾದ ವಿಧಾನ

ಹಂಚಿನ ಮಧ್ಯಭಾಗಕ್ಕೆ ಹಿಟ್ಟು ಹಾಕಿ, ಹಗುರವಾದ ಕೈಯಿಂದ ವೃತ್ತಾಕಾರದಲ್ಲಿ ತೆಳುವಾಗಿ ಹರಡಿ. ದೋಸೆ ಎಷ್ಟು ತೆಳುವಾಗಿರುತ್ತದೆಯೋ ಅಷ್ಟು ಗರಿಗರಿಯಾಗಿ ಬರುತ್ತದೆ.

69
ಎಣ್ಣೆ ಅಥವಾ ತುಪ್ಪದ ಬಳಕೆ

ದೋಸೆಯ ಅಂಚುಗಳಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಹಾಕಿ. ಇದು ದೋಸೆಗೆ ಬಂಗಾರದ ಬಣ್ಣ ನೀಡುತ್ತದೆ ಮತ್ತು ಕ್ರಿಸ್ಪಿಯಾಗಿ ಮಾಡುತ್ತದೆ.

79
ನಾನ್-ಸ್ಟಿಕ್ ಅಥವಾ ಕಾಸ್ಟ್ ಐರನ್ ಹಂಚು

ಹಳೆಯ ಮತ್ತು ಸರಿಯಾಗಿ ಸೀಸನಿಂಗ್ (Seasoning) ಮಾಡಿದ ಕಾಸ್ಟ್ ಐರನ್ (ಕಬ್ಬಿಣದ) ಹಂಚು ದೋಸೆ ಮಾಡಲು ಅತ್ಯುತ್ತಮ. ಇದರಲ್ಲಿ ದೋಸೆ ಹೆಚ್ಚು ಕ್ರಿಸ್ಪಿಯಾಗಿ ಬರುತ್ತದೆ.

89
ಅವಲಕ್ಕಿ ಅಥವಾ ಮೆಂತ್ಯ ಕಾಳು ಬಳಸಿ

ದೋಸೆ ಹಿಟ್ಟು ರುಬ್ಬುವಾಗ ಸ್ವಲ್ಪ ಅವಲಕ್ಕಿ ಅಥವಾ ನೆನೆಸಿದ ಮೆಂತ್ಯ ಕಾಳುಗಳನ್ನು ಹಾಕುವುದರಿಂದ ದೋಸೆಯ ಟೆಕ್ಸ್ಚರ್ ಚೆನ್ನಾಗಿ ಬರುತ್ತದೆ ಮತ್ತು ದೋಸೆ ಕೆಂಪಗೆ ಗರಿಗರಿಯಾಗುತ್ತದೆ.

99
ಗಮನಿಸಿ

ದೋಸೆ ಹಾಕುವ ಮೊದಲು ಪ್ರತಿ ಬಾರಿ ಹಂಚಿನ ತಾಪಮಾನವನ್ನು ಪರೀಕ್ಷಿಸಿ ನೀರು ಚಿಮುಕಿಸುವುದನ್ನು ಮರೆಯಬೇಡಿ. ಇದು ದೋಸೆ ಸುಡದಂತೆ ತಡೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories