ತಣ್ಣಗಾದ ಬಿರಿಯಾನಿಯನ್ನು ರುಚಿ ಕೆಡದಂತೆ ಬಿಸಿ ಮಾಡಲು ಹಲವು ವಿಧಾನಗಳಿವೆ. ಮೈಕ್ರೋವೇವ್ ಓವನ್ ಇಲ್ಲದೇ ಸಾಂಪ್ರದಾಯಿಕ ವಿಧಾನಗಳ ಮೂಲಕ ಬಿಸಿ ಮಾಡಿದ್ರೆ, ನಿಮಗೆ ಬಿರಿಯಾನಿಯ ತಾಜಾ ಅನುಭವ ನೀಡುತ್ತದೆ.
ಬಿರಿಯಾನಿ ಅಂದ್ರೆ ಕೆಲವರಿಗೆ ಎರಡು ಹೊಟ್ಟೆ. ಬಿಸಿ ಬಿಸಿಯಾಗಿರೋ ಬಿರಿಯಾನಿ ತಿಂದಾಗ ಮಾತ್ರ ಅದರ ರುಚಿ ಗೊತ್ತಾಗುತ್ತದೆ. ಮಸಾಲೆಯಲ್ಲಿ ಅಕ್ಕಿ ಜೊತೆ ಚೆನ್ನಾಗಿ ಮಟನ್ ಬೇಯಸಿ ಮಾಡುವ ರೆಸಿಪಿಯೇ ಬಿರಿಯಾನಿ. ಇಂದು ಹಲವು ಬಗೆಯಲ್ಲಿ ಬಿರಿಯಾನಿ ಮಾಡುತ್ತಾರೆ. ಕೋಳಿ, ಮೇಕೆ, ಕುರಿ ಸೇರಿದಂತೆ ಬೇರೆ ಬೇರೆ ಮಾಂಸಗಳ ಮೂಲಕ ಬಿರಿಯಾನಿ ಸಿದ್ಧಪಡಿಸಲಾಗುತ್ತದೆ.
25
ಬಿರಿಯಾನಿ ಹೇಗೆ ಬಿಸಿ ಮಾಡೋದು?
ಕೆಲವೊಮ್ಮೆ ಹೊಟ್ಟೆ ತುಂಬಾ ತಿಂದ್ರೂ ಮಾಡಿರುವ ಬಿರಿಯಾನಿ ಕೊಂಚ ಉಳಿದಿರುತ್ತದೆ. ತಣ್ಣಗಾದ ಬಿರಿಯಾನಿ ತಿನ್ನೋಕೆ ಬಹುತೇಕರು ಹಿಂದೇಟು ಹಾಕುತ್ತಾರೆ. ಇದಕ್ಕೆ ಕಾರಣ ರುಚಿ ಸಂಪೂರ್ಣ ಭಿನ್ನವಾಗಿರುತ್ತದೆ. ಆದ್ರೆ ಕ್ರಮಬದ್ಧವಾಗಿ ಬಿಸಿ ಮಾಡಿದ್ರೆ ಬಿರಿಯಾನಿಯ ರುಚಿ ಕೊಂಚವೂ ಕಡಿಮೆಯಾಗಲ್ಲ. ಬಿರಿಯಾನಿ ಹೇಗೆ ಬಿಸಿ ಮಾಡೋದು ಅಂತ ನೋಡೋಣ ಬನ್ನಿ.
35
ಬಿರಿಯಾನಿ ಬಿಸಿ ಮಡುವ ವಿಧಾನ
ಮೊದಲಿಗೆ ಬಿರಿಯಾನಿಯನ್ನು ಸ್ವಚ್ಛವಾದ ಪಾತ್ರೆಗೆ ಹಾಕಿಕೊಳ್ಳಿ. ಒಲೆ ಆನ್ ಮಾಡ್ಕೊಂಡು ಅಗಲವಾದ ಪಾತ್ರೆ ಇಟ್ಕೊಳ್ಳಿ. ಈಗ ಈ ಪಾತ್ರೆಯ ತಳದಲ್ಲಿ ಸ್ವಲ್ಪ ನೀರು ಹಾಕಿಕೊಳ್ಳಿ. ನಂತರ ಪಾತ್ರೆಯೊಳಗೆ ಪುಟಾಣಿ ಸ್ಟ್ಯಾಂಡ್ ಇಟ್ಕೊಳ್ಳಿ. ಈ ಸ್ಟ್ಯಾಂಡ್ ಮೇಲೆ ಬಿರಿಯಾನಿಯಿರೋ ಪಾತ್ರೆ ಇರಿಸಿ ಮುಚ್ಚಳ ಮುಚ್ಚಿ. ನಂತರ ಕಡಿಮೆ ಉರಿಯಲ್ಲಿ ಐದು ನಿಮಿಷ ಬೇಯಿಸಿದ್ರೆ ಬಿಸಿ ಬಿಸಿಯಾದ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ. ಈ ರೀತಿ ಮಾಡೋದರಿಂದ ಬಿರಿಯಾನಿ ತಳ ಹಿಡಿಯಲ್ಲ.
ಇಡ್ಲಿ ಕುಕ್ಕರ್‌ನಲ್ಲಿಯೂ ಬಿರಿಯಾನಿ ಬಿಸಿ ಮಾಡಬಹುದು. ಇಡ್ಲಿ ಮಾಡುವ ರೀತಿಯಲ್ಲಿ ಮೊದಲು ಪಾತ್ರೆಯ ತಳಕ್ಕೆ ನೀರು ಹಾಕಿಕೊಳ್ಳಿ. ಇದಾದ ಮೇಲೆ ಇಡ್ಲಿಯ ಸೆಟ್ ಇರಿಸಬೇಕು. ಇದಾದ ನಂತ್ರ ಈ ಸೆಟ್ ಮೇಲೆ ಬಿರಿಯಾನಿ ಪ್ಲೇಟ್ ಇರಿಸಿ ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಬೇಕು. ಹಬೆಯಿಂದಲೇ ಬಿಸಿಯಾದ ಬಿರಿಯಾನಿಯ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.
ತಣ್ಣಗಾಗಿರುವ ಬಿರಿಯಾನಿಯನ್ನು ಬಾಳೆಎಲೆಯಲ್ಲಿ ಸುತ್ತಿ ಕಡುಬು ಮಾಡುವ ರೀತಿ ಹಬೆಯಲ್ಲಿ ಬಿಸಿ ಮಾಡಿಕೊಳ್ಳಬಹುದು ಅಥವಾ ಕಾಟನ್ ಬಟ್ಟೆಯಲ್ಲಿ ಬಿರಿಯಾನಿ ಹಾಕಿ, ಅದನ್ನು ಬಿಗಿಯಾಗಿ ಕಟ್ಟಿ ಇಡ್ಲಿ ಕುಕ್ಕರ್‌ನಲ್ಲಿ ಸುಲಭವಾಗಿ ಬಿಸಿ ಮಾಡಿಕೊಳ್ಳಬಹುದು. ಈ ಎರಡು ವಿಧಾನಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆ ಮಾಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.