ಸಮಯ ಕಡಿಮೆ ಇದ್ದಾಗ ಮಾಡ್ಕೊಳ್ಳಿ ಸೋಂಬೇರಿ ರೈಸ್‌ ಬಾತ್; ಕಡಿಮೆ ಮಸಾಲೆ, ಹದವಾದ ಅಡುಗೆ

Published : Sep 14, 2026, 09:06 AM IST

ಕೆಲವೊಮ್ಮೆ ಅಡುಗೆ ಮಾಡಲು ಸಮಯವಿಲ್ಲದಿದ್ದಾಗ, ಕೇವಲ 10-15 ನಿಮಿಷಗಳಲ್ಲಿ ರುಚಿಕರವಾದ ಅಡುಗೆ ಮಾಡಬಹುದು. ಈ ಸೋಂಬೇರಿ ರೈಸ್‌ಬಾತ್ ರೆಸಿಪಿಯು ಬ್ಯಾಚುಲರ್‌ಗಳಿಗೆ ಮತ್ತು ಕಡಿಮೆ ಸಮಯದಲ್ಲಿ ಅಡುಗೆ ಮಾಡಲು ಬಯಸುವವರಿಗೆ ಸೂಕ್ತವಾಗಿದೆ. ಕುಕ್ಕರ್ ಬಳಸಿ ಸುಲಭವಾಗಿ ಇದನ್ನು ತಯಾರಿಸಬಹುದು.

PREV
15
ಸೋಂಬೇರಿ ರೈಸ್‌ಬಾತ್ ರೆಸಿಪಿ

ಕೆಲವೊಮ್ಮೆ ಅಡುಗೆ ಮಾಡಲು ಮನಸ್ಸಿದ್ದರೂ ಸಮಯ ಇರಲ್ಲ. ಕಡಿಮೆ ಸಮಯದಲ್ಲಿಯೇ ಕೆಲವೊಂದು ಅಡುಗೆಗಳನ್ನು ಮಾಡಬಹುದು. ಇಂದು ನಾವು ನಿಮಗೆ 10 ರಿಂದ 15 ನಿಮಿಷದಲ್ಲಿ ತಯಾರಿಸಬಹುದಾದ ಅದರಲ್ಲಿಯೂ ಬ್ಯಾಚೂಲರ್‌ಗಳ ಮಾಡುವ ಸೋಂಬೇರಿ ರೈಸ್‌ಬಾತ್ ರೆಸಿಪಿ ಹೇಳುತ್ತಿದ್ದೇವೆ.

25
ಸೋಂಬೇರಿ ರೈಸ್‌ಬಾತ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

ಅಕ್ಕಿ: ಒಂದು ಕಪ್, ಈರುಳ್ಳಿ: 1, ಟೊಮೆಟೋ: 1, ಹಸಿಮೆಣಸಿನಕಾಯಿ: 2, ಅಚ್ಚಖಾರದ ಪುಡಿ: ಅರ್ಧ ಟೀ ಸ್ಪೂನ್, ಗರಂ ಮಸಾಲೆ: ಅರ್ಧ ಟೀ ಸ್ಪೂನ್, ಹುಣಸೆಹಣ್ಣಿನ ರಸ: 2 ಟೀ ಸ್ಪೂನ್, ಬೆಳ್ಳುಳ್ಳಿ-ಶುಂಠಿ ಪೇಸ್ಟ್: 1 ಟೀ ಸ್ಪೂನ್, ಚಿಟಿಕೆಯಷ್ಟು ಅರಿಶಿನ, ಅಡುಗೆ ಎಣ್ಣೆ: 4 ಟೀ ಸ್ಪೂನ್, ಕೋತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀ ಸ್ಪೂನ್ ಜೀರಿಗೆ

35
ಸೋಂಬೇರಿ ರೈಸ್‌ಬಾತ್ ಮಾಡುವ ವಿಧಾನ

ಮೊದಲಿಗೆ ಈರುಳ್ಳಿ , ಟೊಮೆಟೋ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪನ್ನು ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ. ಈಗ ಮತ್ತೊಂದು ಬೌಲ್‌ನಲ್ಲಿ ಅಕ್ಕಿಯನ್ನು ನೀರಿನಲ್ಲಿ ಎರಡು ಬಾರಿ ತೊಳೆದಿಟ್ಟುಕೊಳ್ಳಿ. ಒಗ್ಗರಣೆ ಸಿದ್ಧವಾಗೋವರೆಗೂ ಅಕ್ಕಿ ನೀರಿನಲ್ಲಿ ಮೃದುವಾಗುತ್ತದೆ.

45
ಒಗ್ಗರಣೆ

ಈಗ ಒಲೆ ಆನ್ ಮಾಡ್ಕೊಂಡು ಕುಕ್ಕರ್ ಇಟ್ಕೊಳ್ಳಿ. ಈಗ ಅಡುಗೆಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ ಸೇರಿಸಿಕೊಳ್ಳಿ. ನಂತರ ಕತ್ತರಿಸಿಕೊಂಡಿರುವ ಈರುಳ್ಳಿ , ಟೊಮೆಟೋ, ಹಸಿಮೆಣಸಿನಕಾಯಿ ಸೇರಿಸಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅಚ್ಚಖಾರದ ಪುಡಿ, ಗರಂ ಮಸಾಲೆ, ಹುಣಸೆಹಣ್ಣಿನ ರಸ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಅರಿಶಿನ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

55
ಒಂದು ಕೂಗು ಸಾಕು

ಈಗ ತೊಳೆದಿಟ್ಟುಕೊಂಡಿರುವ ಅಕ್ಕಿ ಸೇರಿಸಿಕೊಳ್ಳಿ. ಅಂತಿಮವಾಗಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೋತಂಬರಿ ಸೊಪ್ಪು ಸೇರಿಸಿಕೊಂಡು ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ವಿಷಲ್ ಕೂಗಿಸಿಕೊಳ್ಳಿ. ನಂತರ ಐದು ನಿಮಿಷದ ನಂತರ ಮುಚ್ಚಳ ತೆಗೆದ್ರೆ ರುಚಿಯಾದ ಸೋಂಬೇರಿ ರೈಸ್‌ಬಾತ್ ಸವಿಯಲು ಸಿದ್ಧವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories