ಮನೇಲಿ ತರಕಾರಿ ಇಲ್ಲದಿರುವಾಗ ಮಾಡಿ ಘಮ ಘಮಿಸುವ ರುಚಿಯಾದ ಜೀರೋ ವೆಜಿಟೇಬಲ್ ಬಿರಿಯಾನಿ

Published : Apr 18, 2026, 06:03 PM IST

ಮನೇಲಿ ಯಾವುದೇ ತರಕಾರಿ ಇಲ್ಲದಿದ್ದಾಗಲೂ ಹೋಟೆಲ್ ಸ್ಟೈಲ್‌ನ ಘಮಘಮಿಸುವ ವೆಜಿಟೆಬಲ್ ಬಿರಿಯಾನಿ ಮಾಡಬಹುದು ಗೊತ್ತಾ? ಬ್ಯಾಚುಲರ್‌ಗಳಿಗೆ ಇದು ಬೆಸ್ಟ್ ಚಾಯ್ಸ್. ಸಮಯ ಇಲ್ಲದಿದ್ದಾಗ ಬೇಗನೆ ಅಡುಗೆ ಮುಗಿಸಬೇಕು ಅನ್ನೋರಿಗೆ ಇದು ಪರ್ಫೆಕ್ಟ್ ಆಯ್ಕೆ. ಇದನ್ನು ಮಾಡೋದು ಹೇಗೆ ಅಂತ ಇಲ್ಲಿ ನೋಡೋಣ ಬನ್ನಿ.

PREV
15
10 ನಿಮಿಷದಲ್ಲಿ ರೆಡಿಯಾಗುವ ವೆಜಿಟೆಬಲ್ ಬಿರಿಯಾನಿ

ಬ್ಯಾಚುಲರ್‌ಗಳು, ಆಫೀಸ್‌ಗೆ ಹೋಗೋರು ಪ್ರತಿದಿನ ತರಕಾರಿ ತರೋದು ಕಷ್ಟ. ವಾರಕ್ಕಾಗುವಷ್ಟು ತಂದರೂ ವೀಕೆಂಡ್ ಹೊತ್ತಿಗೆ ಖಾಲಿಯಾಗಿರುತ್ತೆ. ಆಗ ತಕ್ಷಣಕ್ಕೆ ತರಕಾರಿ ತರುವಷ್ಟು ಸಮಯ ಇರಲ್ಲ. ಈ ವೇಳೆ ಹೋಟೆಲ್ ಶೈಲಿಯ ಜೀರೋ ವೆಜ್ ಬಿರಿಯಾನಿ ಮಾಡಬಹುದು. ಇದಕ್ಕೆ ಹೆಚ್ಚು ಸಮಯ ಬೇಕಿಲ್ಲ, ಕೇವಲ 10 ನಿಮಿಷದಲ್ಲಿ ರೆಡಿಯಾಗುತ್ತೆ. ಪೂರ್ತಿ ರೆಸಿಪಿ ಇಲ್ಲಿದೆ ನೋಡಿ.

25
ಬೇಕಾಗುವ ಪದಾರ್ಥಗಳು
ಅಕ್ಕಿ: 2 ಕಪ್ (ಬಾಸುಮತಿ ಆದರೆ ಉತ್ತಮ) ಈರುಳ್ಳಿ: 2 ದೊಡ್ಡದು, ಉದ್ದಕ್ಕೆ ಹೆಚ್ಚಿದ್ದು ಹಸಿಮೆಣಸಿನಕಾಯಿ: 4 ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಒಂದು ಚಮಚ ಮೊಸರು: ಅರ್ಧ ಕಪ್ ಪುದೀನಾ, ಕೊತ್ತಂಬರಿ, ಕರಿಬೇವು: ಸ್ವಲ್ಪ ಸ್ವಲ್ಪ ಎಣ್ಣೆ + ತುಪ್ಪ: ನಿಮಗೆ ಬೇಕಾದಷ್ಟು ಬಿರಿಯಾನಿ ಮಸಾಲೆ ಪದಾರ್ಥಗಳು (ಚಕ್ಕೆ, ಲವಂಗ ಇತ್ಯಾದಿ) ಉಪ್ಪು: ರುಚಿಗೆ ತಕ್ಕಷ್ಟು
35
ತಯಾರಿಸುವ ವಿಧಾನ

ಮೊದಲು ಅಕ್ಕಿಯನ್ನು ತೊಳೆದು 20-30 ನಿಮಿಷ ನೆನೆಸಿಡಿ. ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿ ಮಾಡಿ. ನಂತರ ಬಿರಿಯಾನಿ ಮಸಾಲೆ ಪದಾರ್ಥಗಳನ್ನು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ, ಅವು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಇದರಲ್ಲೇ ಹಸಿಮೆಣಸಿನಕಾಯಿ ಕೂಡ ಹಾಕಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದ ನಂತರ, ಪುದೀನಾ, ಕೊತ್ತಂಬರಿ ಮತ್ತು ಕರಿಬೇವು ಸೇರಿಸಿ. ಈ ಮೂರನ್ನು ಪೇಸ್ಟ್ ಮಾಡಿಯೂ ಹಾಕಬಹುದು. ಆಮೇಲೆ ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

45
ಇದೇ ಈ ಬಿರಿಯಾನಿಗೆ ಅಸಲಿ ರುಚಿ

ನಂತರ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ ಮೊಸರು ಹಾಕಿ ಚೆನ್ನಾಗಿ ಕಲಸಿ. ಮೊಸರಿನಿಂದ ಎಣ್ಣೆ ಬೇರೆಯಾಗುವವರೆಗೆ ಬೇಯಿಸಿ. ಇದೇ ಈ ಬಿರಿಯಾನಿಗೆ ಅಸಲಿ ರುಚಿ ನೀಡುವುದು. 

2 ಕಪ್ ಅಕ್ಕಿಗೆ, ಸುಮಾರು 3 ರಿಂದ 3.5 ಕಪ್ ನೀರು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಕುದಿಯುವಾಗ ಉಪ್ಪು ನೋಡಿದರೆ, ನೀರು ಸ್ವಲ್ಪ ಉಪ್ಪಾಗಿರಬೇಕು. ನೀರು ಕುದಿಯಲು ಶುರುವಾದಾಗ ನೆನೆಸಿದ ಅಕ್ಕಿಯನ್ನು ಹಾಕಿ ಕಲಸಿ. 

ಕುಕ್ಕರ್ ಆದರೆ, ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ. ಸಾಮಾನ್ಯ ಪಾತ್ರೆಯಾದರೆ, ನೀರು ಆವಿಯಾಗುವವರೆಗೆ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.

ಇದನ್ನೂ ಓದಿ: Shivamogga: ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ

55
ರೈತಾ ಅಥವಾ ಮಿರ್ಚಿ ಕಾ ಸಾಲನ್ ಜೊತೆ ಸವಿದರೆ ಅದ್ಭುತ

ಒಂದು ವೇಳೆ ನಿಮ್ಮ ಮನೆಯಲ್ಲಿ ಆಲೂಗಡ್ಡೆ ಇದ್ದರೆ, ಅದನ್ನು ತುಂಡು ಮಾಡಿ ಒಗ್ಗರಣೆಗೆ ಹಾಕಿದರೆ ರುಚಿ ಹೆಚ್ಚುತ್ತದೆ. ಮೀಲ್ ಮೇಕರ್ ಇದ್ದರೆ, ಅವನ್ನು ಬಿಸಿ ನೀರಿನಲ್ಲಿ ನೆನೆಸಿ ಹಾಕಿ, ಆಗ ತರಕಾರಿಗಳ ಕೊರತೆ ಗೊತ್ತಾಗುವುದಿಲ್ಲ. 

ಈ ಬಿಸಿ ಬಿಸಿ ಬಿರಿಯಾನಿಯನ್ನು ಮೊಸರು ರೈತಾ ಅಥವಾ ಮಿರ್ಚಿ ಕಾ ಸಾಲನ್ ಜೊತೆ ತಿಂದರೆ ಅದ್ಭುತವಾಗಿರುತ್ತೆ. ಕಡಿಮೆ ಶ್ರಮದಲ್ಲಿಒಳ್ಳೆಯ ರುಚಿ ಸಿಗುತ್ತೆ. ಖಂಡಿತ ಟ್ರೈ ಮಾಡಿ ನೋಡಿ.

ಇದನ್ನೂ ಓದಿ: ಫ್ರೈ ಮಾಡುವಾಗ ಮಸಾಲೆ ಬೇರೆಯಾಗದಂತೆ ಕ್ರಿಸ್ಪಿ ಚಿಕನ್ 65ಗೆ ಮ್ಯಾರಿನೇಟ್ ಮಾಡುವ Authentic ವಿಧಾನ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories