Jaggery tea recipe: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಬೆಲ್ಲದ ಟೀ ರುಚಿಯಾಗಿರುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ ನಾವಿಂದು ಬೆಲ್ಲದ ಟೀ ತಯಾರಿಸಲು ಏನೆಲ್ಲಾ ಬೇಕು? ತಯಾರಿಸುವ ವಿಧಾನ ನೋಡೋಣ..
ಪ್ರಮಾಣವನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ತೆಗೆದುಕೊಳ್ಳಬಹುದು. ಬೆಲ್ಲದ ಟೀ ತಯಾರಿಸಲು ನಿಮಗೆ ಒಂದು ದೊಡ್ಡ ಕಪ್ ನೀರು, ಎರಡು ದೊಡ್ಡ ಕಪ್ ಕಾಯಿಸಿದ ಹಾಲು, ಎರಡು ಚಮಚ ಟೀ ಪುಡಿ, ಒಂದು ಇಂಚು ಶುಂಠಿ ತುಂಡು , ರುಚಿಗೆ ತಕ್ಕಷ್ಟು ಬೆಲ್ಲ, ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಅರ್ಧ ಚಮಚ ಹಸಿರು ಏಲಕ್ಕಿನ ಪುಡಿ ಬೇಕಾಗುತ್ತದೆ. ಈಗ ಬೆಲ್ಲದ ಚಹಾ ತಯಾರಿಸುವ ಅತ್ಯಂತ ಸುಲಭ ವಿಧಾನ ನೋಡೋಣ..
29
ಹಂತ-1
ಮೊದಲು ಟೀ ಪಾತ್ರೆಗೆ ನೀರು ಹಾಕಿ. ನೀರು ಬಿಸಿಯಾಗುತ್ತಿದ್ದಂತೆ ಬಿಸಿ ನೀರಿಗೆ ಏಲಕ್ಕಿ ಪುಡಿ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ.
39
ಹಂತ-2
ಆ ನಂತರ ಶುಂಠಿಯನ್ನು ತುರಿದು ಸೇರಿಸಿ. ನೀರು ಚೆನ್ನಾಗಿ ಕುದಿಯಲು ಬಿಡಿ.
ನೀರು ಕುದಿಯಲು ಪ್ರಾರಂಭಿಸಿದ ನಂತರ ಉರಿಯನ್ನು ಕಡಿಮೆ ಮಾಡಿ. ಇದಕ್ಕೆ ಟೀ ಪುಡಿ ಸೇರಿಸಿ.
59
ಹಂತ-4
ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ಇದರಿಂದ ಟೀ ಪುಡಿ ಬಣ್ಣ ಚೆನ್ನಾಗಿ ಹೀರಲ್ಪಡುತ್ತದೆ.
69
ಹಂತ-5
ಈಗ ಬೆಲ್ಲವನ್ನು ಸೇರಿಸುವ ಸಮಯ. ಮಿಶ್ರಣಕ್ಕೆ ಬೆಲ್ಲವನ್ನು ಸೇರಿಸಿ ಮತ್ತು ಅದು ಕರಗುವವರೆಗೆ ಕುದಿಸಿ.
79
ಹಂತ-6
ಬೆಲ್ಲ ಕರಗಿ ಟೀ ಕುದಿಯಲು ಬಂದಾಗ ನೀವು ಅದಕ್ಕೆ ಕಾಯಿಸಿದ ಹಾಲನ್ನು ಸೇರಿಸಬೇಕು.
89
ಹಂತ-7
ನೆನಪಿಡಿ..ಇದು ಮುಖ್ಯವಾದ ಟಿಪ್ಸ್. ಹಾಲು ಸೇರಿಸಿದ ನಂತರ ಬೆಲ್ಲದ ಟೀ ಹೆಚ್ಚು ಕುದಿಸಬಾರದು. ಇಲ್ಲದಿದ್ದರೆ ಟೀ ಮೊಸರಾಗಬಹುದು ಮತ್ತು ನಿಮ್ಮ ಎಲ್ಲಾ ಶ್ರಮ ವ್ಯರ್ಥವಾಗಬಹುದು.
99
ಹಂತ-8
ಹಾಲು ಬಿಸಿಯಾಗಿರುವುದು ಗೊತ್ತಾಗುತ್ತಿದ್ದಂತೆ ಮಧ್ಯಮ ಉರಿಯಲ್ಲಿ ಕುದಿಸಿ ನಂತರ ಸ್ಟೌವ್ ಆಫ್ ಮಾಡಿ.
ಕೇವಲ 5 ರಿಂದ 10 ನಿಮಿಷದಲ್ಲಿ ಪೌಷ್ಟಿಕಾಂಶಗಳಿಂದ ಕೂಡಿದ ಬೆಲ್ಲದ ಟೀ ರೆಡಿಯಾಗುತ್ತೆ. ಚಳಿಗಾಲದಲ್ಲಿ ನೀವು ಒಂದು ಕಪ್ ಬಿಸಿ ಬೆಲ್ಲದ ಟೀ ಎಂಜಾಯ್ ಮಾಡ್ಬೋದು. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಬೆಲ್ಲದ ಟೀ ರುಚಿ ಇಷ್ಟಪಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.