ಸಾಂಬಾರ್, ಪಲ್ಯಕ್ಕೆ ಹಸಿಮೆಣಸಿನಕಾಯಿ (Green Chilly) ಹಾಕಿದಾಗ ಅದರ ಬೀಜಗಳನ್ನು (Chilli Seeds) ತೆಗೆದು ಬಿಸಾಡಬೇಡಿ. ನೋಡೋಕೆ ಚಿಕ್ಕದಾಗಿದ್ರೂ ಈ ಬೀಜಗಳು ನಿಮ್ಮ ದೇಹಕ್ಕೆ ಬೇಕಾಗುವ ಅತ್ಯದ್ಭುತ ಪೋಷಕಾಂಶಗಳನ್ನು (health benefits proteins) ಕೊಡುತ್ತದೆ.
ನಮ್ಮಲ್ಲಿ ಹೆಚ್ಚಿನವರಿಗೆ ಊಟದ ಜೊತೆ ಹಸಿಮೆಣಸಿನಕಾಯಿ ತಿನ್ನುವ ಅಭ್ಯಾಸವಿದೆ. ಇದು ಖಾರವಾಗಿದ್ದರೂ, ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರ ಬೀಜಗಳು ವಿಟಮಿನ್ ಸಿ, ಬಿ6, ಎ, ಕಬ್ಬಿಣ, ತಾಮ್ರ, ಪೊಟ್ಯಾಶಿಯಂ, ನಿಯಾಸಿನ್, ಫೋಲೇಟ್‌ನಂತಹ ಪೋಷಕಾಂಶಗಳಿಂದ ತುಂಬಿರುತ್ತವೆ.
26
ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರ ಬೀಜಗಳು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತವೆ. ಊಟದ ಜೊತೆ ಹಸಿಯಾಗಿ ತಿಂದರೆ, ಈ ಬೀಜಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.
ಮೆಣಸಿನಕಾಯಿಯ ತಿರುಳಿಗಿಂತ ಅದರ ಬೀಜಗಳಲ್ಲೇ ಹೆಚ್ಚು ಖಾರವಿರುತ್ತದೆ. ಈ ಬೀಜಗಳು ಆರೋಗ್ಯಕ್ಕೆ ನೀಡುವ ಕೆಲವು ಪ್ರಮುಖ ಪ್ರಯೋಜನಗಳು ಇಲ್ಲಿವೆ.
36
ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ದೇಹದ ಉಷ್ಣತೆ ಮತ್ತು ಹೃದಯ ಬಡಿತವನ್ನು ಹೆಚ್ಚಿಸಿ, ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ, ಜೀರ್ಣಾಂಗ ವ್ಯವಸ್ಥೆಯನ್ನು ವೇಗಗೊಳಿಸಿ ತೂಕ ಇಳಿಕೆಗೆ ನೆರವಾಗುತ್ತದೆ.
ಹಸಿಮೆಣಸಿನ ಬೀಜಗಳನ್ನು ತಿನ್ನುವುದರಿಂದ ಜೊಲ್ಲು ರಸ ಉತ್ಪತ್ತಿಯಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ಬಹಳ ಮುಖ್ಯ. ಇತರ ಆಹಾರಗಳೊಂದಿಗೆ ಇದನ್ನು ಹಸಿಯಾಗಿ ತಿಂದರೆ ಜೀರ್ಣಕ್ರಿಯೆ ಪ್ರಕ್ರಿಯೆಯು ಉತ್ತೇಜಿಸಲ್ಪಡುತ್ತದೆ.
ಮೆಣಸಿನ ಬೀಜಗಳಲ್ಲಿ ಫೈಟೊಸ್ಟೆರಾಲ್ ಎಂಬ ಪೋಷಕಾಂಶವಿದೆ. ಇದು ದೇಹಕ್ಕೆ ಒಳ್ಳೆಯ ಕೊಬ್ಬಿನಂತೆ ಕೆಲಸ ಮಾಡಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳಲ್ಲಿನ ಪ್ಲೇಕ್ ತೆಗೆದುಹಾಕಿ, ಹೃದಯವನ್ನು ಆರೋಗ್ಯವಾಗಿಡುತ್ತದೆ.
56
ಮೆಣಸಿನ ಬೀಜಗಳಲ್ಲಿರುವ ವಿಟಮಿನ್ ಸಿ, ಇ, ಕೆ, ಫೈಟೊಸ್ಟೆರಾಲ್, ಬೀಟಾ-ಕ್ಯಾರೋಟಿನ್‌ನಂತಹ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ. ಇದು ದೇಹವನ್ನು ಆರೋಗ್ಯವಾಗಿಟ್ಟು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹಸಿಮೆಣಸಿನ ಬೀಜಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇವು ಚರ್ಮದ ಸಮಸ್ಯೆಗಳು ಮತ್ತು ಇತರ ಸೋಂಕುಗಳನ್ನು ದೂರವಿಡಲು ಸಹಾಯ ಮಾಡುತ್ತವೆ.
66
ನೆಗಡಿ, ಜ್ವರ ಮತ್ತು ಕೆಮ್ಮಿನಂತಹ ಫ್ಲೂ ಲಕ್ಷಣಗಳಿದ್ದಾಗ, ಮೆಣಸಿನ ಬೀಜಗಳಂತಹ ಖಾರದ ಆಹಾರ ಸೇವಿಸಿದರೆ ಬೆವರು ಹೆಚ್ಚುತ್ತದೆ. ಇದು ಸೈನಸಿಟಿಸ್ ಮತ್ತು ಇತರ ಫ್ಲೂ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಹಸಿಮೆಣಸಿನ ತಿರುಳು ಮಾತ್ರವಲ್ಲ, ಅದರ ಬೀಜಗಳೂ ಆರೋಗ್ಯಕರ. ಹಾಗಾಗಿ ಇನ್ನು ಮುಂದೆ ಬೀಜಗಳನ್ನು ಬಿಸಾಡಬೇಡಿ. ಆದರೆ, ಇವು ದೇಹದಲ್ಲಿ ಉಷ್ಣತೆ ಹೆಚ್ಚಿಸುವುದರಿಂದ ಅತಿಯಾಗಿ ಸೇವಿಸಬೇಡಿ. ಗಮನಿಸಿ: ಏಷ್ಯಾನೆಟ್ ನ್ಯೂಸ್ ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.