ನೈಸರ್ಗಿಕ ಆಹಾರದ ಲಾಭಗಳೇನು?
ಕೃತಕ ಪ್ರೋಟೀನ್ ಪೌಡರ್‌ಗಳಲ್ಲಿ ಕೇವಲ ಪ್ರೋಟೀನ್ ಇರಬಹುದು. ಆದರೆ ನೈಸರ್ಗಿಕ ಆಹಾರಗಳನ್ನು ಸೇವಿಸುವುದರಿಂದ ಪ್ರೋಟೀನ್ ಜೊತೆಗೆ ದೇಹಕ್ಕೆ ಅಗತ್ಯವಾದ ಫೈಬರ್ (ನಾರಿನಂಶ), ಖನಿಜಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಸಿಗುತ್ತವೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ದೀರ್ಘಕಾಲದವರೆಗೆ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ.
ಆದ್ದರಿಂದ, ಬಾಡಿ ಬಿಲ್ಡಿಂಗ್ ಹೆಸರಿನಲ್ಲಿ ದುಬಾರಿ ಸಪ್ಲಿಮೆಂಟ್‌ಗಳ ಹಿಂದೆ ಬೀಳುವ ಬದಲು, ನಿಮ್ಮ ಮನೆಯ ಆಹಾರದ ಮೇಲೆ ನಂಬಿಕೆ ಇಡಿ. ಉತ್ತಮ ಊಟ, ಸರಿಯಾದ ನಿದ್ರೆ ಮತ್ತು ಕ್ರಮಬದ್ಧ ವ್ಯಾಯಾಮ - ಈ ಮೂರು ಸೂತ್ರಗಳೇ ನಿಮ್ಮ ದಷ್ಟಪುಷ್ಟ ದೇಹದ ರಹಸ್ಯ!