ಸಕ್ಕರೆ ಡಬ್ಬದಲ್ಲಿ ಈ ವಸ್ತು ಇಟ್ಟರೆ ಇರುವೆ ಬರೋದೇ ಇಲ್ಲ, ಇರುವೆ ಓಡಿಸೋಕೆ ಐಡಿಯಾ

Published : Sep 25, 2026, 08:33 PM IST

ಸಕ್ಕರೆ ನಿತ್ಯ ಬಳಸುತ್ತೇವೆ. ಮನೆಯಲ್ಲಿ ಸಕ್ಕರೆ ಬಳಸದ ದಿನಗಳೇ ಇಲ್ಲ. ಕಾಫಿ, ಟೀ, ಜ್ಯೂಸ್, ಸಿಹಿ ಪದಾರ್ಥ, ಸಾಂಬಾರ್ ಸೇರಿದಂತೆ ಅನೇಕ ಆಹಾರ ಪದಾರ್ಥಗಳಿಗೆ ಬಳಸುತ್ತೇವೆ. ದಿನಾ ಬಳಸೋದ್ರಿಂದ ಒದ್ದೆಯಾಗಿ, ಜಿಗುಟಾಗಿ ಬಿಡುತ್ತದೆ. ಅಲ್ಲದೇ ಇರುವೆೆಗಳು, ಹುಡುಕಿಕೊಂಡು ಬರುತ್ತವೆ. ಇದಕ್ಕೆ ಉಪಾಯ ಇಲ್ಲಿದೆ.

PREV
16
ಸಕ್ಕರೆ ಡಬ್ಬಿಯ ಜಿಗುಟು ತಡೆಯಲು ಐಡಿಯಾ

ಸಕ್ಕರೆ ಡಬ್ಬಕ್ಕೆ ಪದೇ ಪದೇ ಕೈಹೋಗುತ್ತಿರುತ್ತದೆ. ಇದರಿಂದ ಅದು ಜಿಗುಟಾಗೋದು ಕಾಮನ್. ಕೆಲವೊಮ್ಮೆ ಅದು ಧಾನ್ಯಗಳಿಗೂ ಅಂಟಿಕೊಳ್ಳುತ್ತದೆ. ತೇವಾಂಶ ಕೂಡ ಆಗಿ ನೀರೂರುತ್ತೆ.ಇದಕ್ಕೆಲ್ಲ ಸರಿಯಾದ ಸಂಗ್ರಹಣೆ ತುಂಬಾ ಮುಖ್ಯ. ಸಕ್ಕರೆ ಡಬ್ಬಿಗೆ ಗಾಳಿ ಹೋಗದಂತೆ ನೋಡಿಕೊಳ್ಳಿ. ಸರಿಯಾದ ಪತ್ರೆಯಲ್ಲಿ ಸಂಗ್ರಹಿಸಡಬೇಕು. ನೀವು ತೆರೆದ ಡಬ್ಬದಲ್ಲಿ ಇಟ್ಟರೆ ಅದು ಕಮಟು ವಾಸನೆ ಬರುತ್ತದೆ.

26
ಸಕ್ಕರೆ ಡಬ್ಬಿ ಏಕೆ ಒದ್ದೆಯಾಗುತ್ತದೆ?

ಸಕ್ಕರೆ ಬೇಗ ತೇವಾಂಶಕ್ಕೆ ಒಡ್ಡಿಕೊಳ್ಳುವುದು. ಅದನ್ನು ಸರಿಯಾಗಿ ಮುಚ್ಚಿಡದಿದ್ದರೆ, ಸರಿಯಾದ ಚಮಚ ಬಳಸದಿದ್ದರೆ ಅದು ತೇವಾಂಶವನ್ನು ಹೀರಿಕೊಳ್ಳುತ್ತದೆ. ಒದ್ದೆ ಆಗಿರುವ ಚಮಚವನ್ನೂ ಬಳಸಿ ಸಕ್ಕರೆಯ ಗುಣಮಟ್ಟವನ್ನು ಹಾಳು ಮಾಡ್ತೇವೆ. ಅದಕ್ಕೆ ಸಕ್ಕರೆ ತೆಗೆಯಲು ಒಣಗಿದ ಚಮಚ ಬಳಸಬೇಕು.

36
ಹೇಗೆ ಸಂಗ್ರಹಿಸಡಬೇಕು?
  • ಸ್ವಚ್ಛವಾದ, ಒಣಗಿದ ಗಾಜಿನ ಜಾರ್ ಬಳಸಿ.
  • ಸಕ್ಕರೆ ತುಂಬುವ ಮೊದಲು ಒಣ ಬಟ್ಟೆಯಿಂದ ಒರೆಸಿಕೊಳ್ಳಿ
  • ನೀರು, ತೇವಾಂಶ ಇದ್ದರೆ ಬಿಸಿಲಲ್ಲಿ ಇಟ್ಟು ತುಂಬಿ
  • ದೈನಂದಿನ ಸಕ್ಕರೆಗಾಗಿ ಪ್ರತ್ಯೇಕ ಡಬ್ಬ ಬಳಸಿ
46
ಅಕ್ಕಿಯಲ್ಲಿದೆ ಮ್ಯಾಜಿಕ್

ಸಕ್ಕರೆಯನ್ನು ತೇವಾಂಶದಿಂದ ರಕ್ಷಿಸಲು ಕೆಲವು ಅಕ್ಕಿ ಕಾಳುಗಳನ್ನು ಪಾತ್ರೆಯಲ್ಲಿ ಇಡಬಹುದು. ಅಕ್ಕಿ ಹೆಚ್ಚುವರಿ ತೇವಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸಕ್ಕರೆ ಕಾಳುಗಳು ಒಣಗಲು ಸಹಾಯ ಮಾಡುತ್ತದೆ. ಅಕ್ಕಿಯನ್ನು ನೇರವಾಗಿ ಸಕ್ಕರೆಯಲ್ಲಿ ಇಡೋದಾದ್ರೆ ಸ್ವಚ್ಛವಾದ ಬಟ್ಟೆಯ ಬಂಡಲ್‌ನಲ್ಲಿ ಇರಿಸಿ ಪಾತ್ರೆಯಲ್ಲಿ ಇಡಬಹುದು.

56
ಲವಂಗ ಕೂಡ ಹೆಲ್ಪ್ ಮಾಡುತ್ತೆ

ಸಕ್ಕರೆ ಡಬ್ಬಿಯಲ್ಲಿ 4 ರಿಂದ 5 ಲವಂಗಗಳನ್ನು ಇಟ್ಟು ನೋಡಿ. ಲವಂಗದ ವಾಸನೆಯು ಇರುವೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ತೇವಾಂಶದಿಂದ ರಕ್ಷಿಸುವಲ್ಲೂ ಪ್ರಯೋಜನಕಾರಿ. ಹಾಗಿದ್ದೂ ಸಕ್ಕರೆ ಪಾತ್ರೆಯನ್ನು ಬಿಗಿಯಾಗಿ ಮುಚ್ಚಿ ಒಣ ಸ್ಥಳದಲ್ಲಿ ಇಡುವುದು ಹೆಚ್ಚು ಮುಖ್ಯ.

66
ಬ್ಲಾಟಿಂಗ್ ಪೇಪರ್ ಬಳಸಬಹುದು

ಸಕ್ಕರೆ ತುಂಬುವ ಮೊದಲು ಕೆಳಭಾಗದಲ್ಲಿ ಒಂದು ಕ್ಲೀನ್ ಬ್ಲಾಟಿಂಗ್ ಪೇಪರ್ ಇಡಬಹುದು. ಇದು ತೇವಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಕ್ಕರೆ ಒಣಗಲು ಸಹಾಯ ಮಾಡುತ್ತದೆ. ಸಕ್ಕರೆಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ ಮತ್ತು ಇರುವೆಗಳಿಂದ ರಕ್ಷಿಸಲು ಬಯಸಿದರೆ.. ನೀವು 2 ರಿಂದ 3 ದಾಲ್ಚಿನ್ನಿ ತುಂಡುಗಳನ್ನು ಪಾತ್ರೆಯಲ್ಲಿ ಇಡಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories