ಮೊಸರು ಕಲಸುವಾಗ ಉಪ್ಪು ಹಾಕಬಾರದು ಎಂದು ಅಜ್ಜಿಯರು ಪದೇ ಪದ ಹೇಳುತ್ತಾರೆ. ಇದರ ಹಿಂದೆ ವೈಜ್ಞಾನಿಕ ಕಾರಣ ಒಂದಿದೆ. ಇದು ಸಂಪ್ರದಾಯಲ್ಲ, ಆರೋಗ್ಯದ ಕಾರಣದಿಂದ ಉತ್ತಮ. ಅಜ್ಜಿ ಸೀಕ್ರೆಟ್ ಹಿಂದಿನ ಕಾರಣ ಇಲ್ಲಿದೆ.
ಹಾಲಿಗೆ ಹೆಪ್ಪು ಹಾಕಿದ ಬಳಿಕ ಮೊಸರು ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಮೊಸರು ಹುಳಿಯಾಗುವ ಪ್ರಕ್ರಿಯೆ ವೇಳೆ ಉಪ್ಪು ಹಾಕಬಾರದು ಎಂದು ಅಜ್ಜಿಯರು ಹೇಳುತ್ತಾರೆ. ಹಾಲಿಗೆ ಹೆಪ್ಪು ಹಾಕಿದ ಬಳಿಕ ಈ ಮಿಶ್ರಣದಲ್ಲಿನ ಲ್ಯಾಕ್ಟಿಕ್ ಆ್ಯಸಿಡ್ ಬ್ಯಾಕ್ಟೀರಿಯಾ ಅತ್ಯಂತ ಮುಖ್ಯ. ಈ ಬ್ಯಾಕ್ಟಿರಿಯಾ ಹಾಲಿನಲ್ಲಿರುವ ಲ್ಯಾಕ್ಟೋಸ್‌ಗಳನ್ನು ಲ್ಯಾಕ್ಟಿಕ್ ಆ್ಯಸಿಡ್ ಆಗಿ ಪರಿವರ್ತಿಸುತ್ತದೆ.
25
ಉಪ್ಪು ಸೇರಿಸಿದರೆ ಬ್ಯಾಕ್ಟಿರಿಯಾ ಬೆಳವಣಿಗೆ ಕುಂಠಿತ
ಈ ಪ್ರಕ್ರಿಯೆಯಲ್ಲಿ ಉಪ್ಪು ಸೇರಿಸಿದರೆ ಉತ್ತಮ ಬ್ಯಾಕ್ಟಿರಿಯಾಗಳು ಸತ್ತು ಹೋಗಲಿದೆ ಅಥವಾ ಬೆಳವಣಿಗೆ ಅರ್ಧಕ್ಕೆ ನಿಲ್ಲಲಿದೆ. ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟಿರಿಯಾಗಳು ಆರೋಗ್ಯಕ್ಕೆ ಉತ್ತಮ. ಪ್ರಮುಖವಾಗಿ ಮೊಸರು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಆಹಾರಗಳು ಜೀರ್ಣವಾಗಲು ಬ್ಯಾಕ್ಟಿರಿಯಾಗಳ ಅವಶ್ಯಕತೆ ಇದೆ. ಮೊಸರು ಇದಕ್ಕೆ ನೆರವಾಗುತ್ತದೆ.
35
ಮಡಕೆಯಲ್ಲಿ ಹೆಪ್ಪು ಹಾಕಿದರೆ ಉತ್ತಮ
ಹಾಲಿಗೆ ಹೆಪ್ಪು ಹಾಕಲು ಮಡಕೆ ಪಾತ್ರೆ ಬಳಸಿದರೆ ಉತ್ತಮ ಎಂದು ಅಜ್ಜಿಯಂದಿರು ಹೇಳುತ್ತಾರೆ. ಇದರಿಂದ ಗಟ್ಟಿ ಮೊಸರು ಮಾತ್ರವಲ್ಲ, ರುಚಿಕರವಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಪಾತ್ರೆಯಲ್ಲಿನ ಸಣ್ಣ ರಂಧ್ರಗಳು ತೇವಾಂಶ ಹೀರಿಕೊಳ್ಳುತ್ತದೆ. ಇದು ಮೊಸರನ್ನು ದಪ್ಪವಾಗಲು ನೆರವು ನೀಡುತ್ತದೆ. ಮಡಕೆ ತಾಪಮಾನವನ್ನು ಸ್ಥಿರವಾಗಿಡುವಂತೆ ಸಹಾಯ ಮಾಡುತದೆ. ಇದರಿಂದ ಮೊಸರು ಪ್ರಕ್ರಿಯೆಗೆ ಅತ್ಯುತ್ತಮ ಪಾತ್ರೆಯಾಗಿದೆ.
ಹಾಲಿಗೆ ಹೆಪ್ಪು ಹಾಕಿದ ಬಳಿಕ ಮುಚ್ಚಿಡಬೇಕು, ತೆರೆದು ನೋಡಬಾರದು, ಜೊತೆಗೆ ಅಲುಗಾಡಿಸಬಾರದು. ಮುಚ್ಚಳ ತೆರೆದರೆ ನೊಣ, ಕೀಟಗಳು ಬೇಗನೆ ಆಕರ್ಷಣೆಗೊಳ್ಳುತ್ತದೆ, ಪಾತ್ರೆಯೊಳಗೆ ಬೀಳುತ್ತದೆ. ಇನ್ನು ಸರಿಯಾದ ಮೊಸರು ಪ್ರಕ್ರಿಯೆಗೂ ಸಮಸ್ಯೆಯಾಗಲಿದೆ. ಪದೇ ಪದೇ ತೆರೆಯುವುದರಿಂದ ತಾಪಮಾನ ಬದಲಾಗುತ್ತದೆ. ಬ್ಯಾಕ್ಟಿರಿಯಾ ಪ್ರಕ್ರಿಯೆಗೂ ಸಮಸ್ಯೆಯಾಗಲಿದೆ.
55
ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿನ ವ್ಯತ್ಯಾಸ
ಚಳಿಗಾಲದ ಸಮಯದಲ್ಲಿ ತಾಪಮಾನ ತಂಪಾಗಿರುವ ಕಾರಣ ಹೆಪ್ಪು ಹಾಕಿದ ಬಳಿಕ ಮೊಸರು ಆಗುವ ಪ್ರಕ್ರಿಯೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.ಹೀಗಾಗಿ ಚಳಿಗಾಲದಲ್ಲಿ ಬೆಚ್ಚಿನ ಸ್ಥಳದಲ್ಲಿ ಇಡುವುದು ಉತ್ತಮ. ಇನ್ನು ತೀವ್ರ ಬೇಸಿಗೆಯಲ್ಲಿ ನೆರಳಿನಲ್ಲಿ ಇಡುವುದು ಉತ್ತಮ. ಮೊಸರು ಹುಳಿಯಾದ ಬಳಿಕ ರೆಫ್ರಿಜರೇಟರ್‌ನಲ್ಲಿ ಇಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.