ತಿಂಗಳು ವೈಟ್ ರೈಸ್ ತಿನ್ನೋದೇ ಬಿಟ್ರೆ ದೇಹದಲ್ಲಿ ಏನ್ ಚೇಂಜಸ್ ಆಗುತ್ತೆ ಗೊತ್ತಾ?

First Published | Oct 18, 2024, 2:00 PM IST

ನಮ್ಮಲ್ಲಿ ಅನೇಕರು ಮೂರು ಹೊತ್ತು ಅನ್ನವನ್ನೇ ತಿಂತಾರೆ. ಆದ್ರೆ ಒಂದು ತಿಂಗಳ ಕಾಲ ಅನ್ನವನ್ನೇ ತಿನ್ನದಿದ್ರೆ ಏನಾಗುತ್ತೆ ಅಂತ ಎಂದಾದ್ರೂ ಯೋಚಿಸಿದ್ದೀರಾ?

ದಕ್ಷಿಣ ಭಾರತೀಯರು ಸಿಕ್ಕಾಪಟ್ಟೆ ಅನ್ನು ತಿಂತೇವೆ. ಮೂರು ಹೊತ್ತೂ ಅಕ್ಕಿಯಿಂದ ಮಾಡಿದ ಆಹಾರವನ್ನೇ ಸೇವಿಸುತ್ತೇವೆ. ಅನ್ನ ಇಲ್ಲದೆ ಒಂದು ಹೊತ್ರೂ ಇರುವುದೂ ಕಷ್ಟ. ಆದ್ರೆ ಬಿಳಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿರುತ್ತೆ. ಇದನ್ನ ತಿಂದ್ರೆ ತೂಕ ಹೆಚ್ಚಾಗುತ್ತೆ ಅಂತ ಹಲವರು ಅನ್ನ ತಿನ್ನೋದನ್ನ ಕಡಿಮೆ ಮಾಡಿದ್ದಾರೆ. ಒಂದು ತಿಂಗಳು ಅನ್ನ ತಿನ್ನದೆ ಇದ್ರೆ ನಿಮ್ಮ ಶರೀರದಲ್ಲಿ ಏನೇಲ್ಲಾ ಬದಲಾವಣೆಗಳಾಗುತ್ತೆ ಅಂತ ಈಗ ನೋಡೋಣ ಬನ್ನಿ. 
 

ಬಿಳಿ ಅಕ್ಕಿ ಬಳಸಿ ಹಲವು ಬಗೆ ತಿಂಡಿಗಳನ್ನು ಮಾಡ್ತಾರೆ. ಆದ್ರೆ ಇತ್ತೀಚೆಗೆ ಬಿಳಿ ಅಕ್ಕಿ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತೆ ಅಂತ ಚರ್ಚೆ ನಡೀತಿದೆ. ಹಲವರು ಬಿಳಿ ಅಕ್ಕಿ ಬಿಟ್ಟು, ತಮ್ಮ ಆರೋಗ್ಯಕ್ಕೆ ಒಳ್ಳೆಯದೆಂದು ಬೇರೆ ಧಾನ್ಯಗಳನ್ನ ತಿನ್ನೋಕೆ ಇಷ್ಟ ಪಡ್ತಾರೆ. 

ಬಿಳಿ ಅಕ್ಕಿ ಯಾಕೆ ಆರೋಗ್ಯಕರ ಅಲ್ಲ?
ಕಂದು ಅಕ್ಕಿಯನ್ನ ಪಾಲಿಶ್ ಮಾಡಿ ಬಿಳಿ ಅಕ್ಕಿ ಮಾಡ್ತಾರೆ. ಈ ಪ್ರಕ್ರಿಯೆಯಲ್ಲಿ ಅಕ್ಕಿ ಕಾಳಿನ ಹೊರಭಾಗ ಮಾತ್ರ ತೆಗೆಯೋದಲ್ಲ, ಅದರಲ್ಲಿರೋ ಹಲವು ಪೋಷಕಾಂಶಗಳು ಕೂಡ ತೆಗೆದು ಹೋಗುತ್ತೆ. ಹೊರ ಭಾಗದಲ್ಲಿ ವಿಟಮಿನ್‌ಗಳು, ಫೈಬರ್, ಖನಿಜಾಂಶಗಳು ಹೇರಳವಾಗಿರುತ್ತೆ. ಆದ್ರೆ ಇವೆಲ್ಲ ಪಾಲಿಶಿಂಗ್‌ನಲ್ಲಿ ಹೊರಗೆ ಹೋಗುತ್ತೆ. ಅಂದ್ರೆ ಈ ಬಿಳಿ ಅಕ್ಕಿ ನಮಗೆ ಯಾವುದೇ ಆರೋಗ್ಯ ಪ್ರಯೋಜನಗಳನ್ನ ತಂದುಕೊಡಲ್ಲ.
 

Tap to resize

ತೂಕ ಇಳಿಸಿಕೊಳ್ಳೋಕೆ ಸಹಾಯ ಮಾಡುತ್ತೆ:
ಹೌದು, ಒಂದು ತಿಂಗಳು ಬಿಳಿ ಅಕ್ಕಿ ತಿನ್ನೋದನ್ನ ಬಿಟ್ಟರೆ ನೀವು ತೂಕ ಇಳಿಸಿಕೊಳ್ಳಬಹುದು. ಯಾಕಂದ್ರೆ ಬಿಳಿ ಅಕ್ಕಿಯಲ್ಲಿ ಫೈಬರ್ ಕಡಿಮೆ ಇರುತ್ತೆ. ಹಾಗಾಗಿ ಬಿಳಿ ಅಕ್ಕಿ ಬೇಗ ಜೀರ್ಣ ಆಗುತ್ತೆ. ಬೇಗ ಹಸಿವಾಗುತ್ತೆ. ಬೇರೆ ಧಾನ್ಯಗಳಲ್ಲಿ ಫೈಬರ್ ಹೆಚ್ಚಿರುತ್ತೆ. ಇದು ನಿಮ್ಮ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವಂತೆ ಮಾಡುತ್ತೆ. ನಿಮ್ಮ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತೆ. ನೀವು ಬಿಳಿ ಅಕ್ಕಿ ತಿಂದ್ರೆ ಬೇಗ ತೂಕ ಹೆಚ್ಚಾಗುತ್ತೆ. 

ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತೆ:  ಬಿಳಿ ಅಕ್ಕಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಜಾಸ್ತಿ ಇರುತ್ತೆ. ಅಂದ್ರೆ ಇದನ್ನ ತಿಂದ್ರೆ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಬೇಗ ಹೆಚ್ಚಾಗುತ್ತೆ. ಹಾಗಾಗಿ ಮಧುಮೇಹಿಗಳು ಇದನ್ನ ತಿನ್ನಬಾರದು ಅಂತ ವೈದ್ಯರು, ಆರೋಗ್ಯ ತಜ್ಞರು ಹೇಳ್ತಾರೆ. 

ಜೀರ್ಣಕ್ರಿಯೆ ಸುಧಾರಿಸುತ್ತೆ:  ಬಿಳಿ ಅಕ್ಕಿಯಲ್ಲಿ ಫೈಬರ್ ಇರಲ್ಲ. ಹಾಗಾಗಿ ಇದನ್ನ ತಿಂದ್ರೆ ಮಲಬದ್ಧತೆ, ಜೀರ್ಣ ಸಮಸ್ಯೆ ಹೆಚ್ಚಾಗುತ್ತೆ. ಆದ್ರೆ ಬೇರೆ ಧಾನ್ಯಗಳಲ್ಲಿರೋ ಫೈಬರ್ ನಿಮ್ಮ ಜೀರ್ಣ ವ್ಯವಸ್ಥೆಯನ್ನ ಆರೋಗ್ಯವಾಗಿಡೋಕೆ ಸಹಾಯ ಮಾಡುತ್ತೆ.
 

ಹೃದಯದ ಆರೋಗ್ಯ:  ಬಿಳಿ ಅಕ್ಕಿಯಲ್ಲಿ ಹೆಚ್ಚು ಪ್ರಮಾಣದ ಪಿಷ್ಟ ಇರುತ್ತೆ. ಇದು ಶರೀರದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನ ಹೆಚ್ಚಿಸುತ್ತೆ. ಹೃದ್ರೋಗಕ್ಕೆ ಕೊಲೆಸ್ಟ್ರಾಲ್ ಪ್ರಮುಖ ಕಾರಣ. ಹಾಗಾಗಿ ಒಂದು ತಿಂಗಳು ಬಿಳಿ ಅಕ್ಕಿ ತಿನ್ನೋದನ್ನ ಬಿಟ್ಟರೆ ನಿಮ್ಮ ಹೃದಯ ಆರೋಗ್ಯವಾಗಿರುತ್ತೆ.

ಬಿಳಿ ಅಕ್ಕಿ ತಿಂದ್ರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಬೇಗ ಹೆಚ್ಚಾಗುತ್ತೆ.  ಆಮೇಲೆ ಅದು ಬೇಗ ಇಳಿಯುತ್ತೆ. ಹಾಗಾಗಿ ಆಲಸ್ಯ, ಸುಸ್ತು ವಾಂತಿ ಸಮಸ್ಯೆಗಳು ಬರುತ್ತೆ. ಬೇರೆ ಧಾನ್ಯಗಳಲ್ಲಿರೋ ಕಾರ್ಬೋಹೈಡ್ರೇಟ್ಸ್ ನಿಧಾನವಾಗಿ ಜೀರ್ಣ ಆಗುತ್ತೆ. ಹಾಗೇ ಶರೀರದಲ್ಲಿ ಶಕ್ತಿಯನ್ನ ಸ್ಥಿರವಾಗಿಡುತ್ತೆ.
 

ಏನೆಲ್ಲಾ ನೆನಪಿಟ್ಟುಕೊಳ್ಳಬೇಕು?
ಸಮತೋಲಿತ ಆಹಾರ:
ಹಾಗಂತ ಅನ್ನವನ್ನು ಸಂಪೂರ್ಣ ಬಿಡೋದು ಒಳ್ಳೆಯದಲ್ಲ. ಆದ್ರೆ ಕಂದು ಅಕ್ಕಿ, ಬಾರ್ಲಿ, ಸಿರಿಧಾನ್ಯ, ಓಟ್ಸ್‌ನಂಥ ಬೇರೆ ಧಾನ್ಯಗಳನ್ನ ತಿನ್ನಬಹುದು. ಇವು ನಿಮ್ಮನ್ನ ಆರೋಗ್ಯವಾಗಿಡುತ್ತೆ.

ಪೌಷ್ಟಿಕಾಂಶ ಪೂರಕಗಳು:  ಬೇರೆ ಆಹಾರ ಪದಾರ್ಥಗಳ ಜೊತೆಗೆ ಬಿಳಿ ಅಕ್ಕಿಯಲ್ಲಿರೋ ಪೋಷಕಾಂಶಗಳ ಕೊರತೆ ಕೂಡ ನೀಗಿಸಿಕೊಳ್ಳಬೇಕು.

ವೈಯಕ್ತಿಕ ಅವಶ್ಯಕತೆಗಳು: ಪ್ರತಿಯೊಬ್ಬರ ಪೌಷ್ಟಿಕಾಂಶದ ಅವಶ್ಯಕತೆಗಳು ಬೇರೆ ಬೇರೆ ಇರುತ್ತೆ. ಹಾಗಾಗಿ ಏನನ್ನೂ ಶುರು ಮಾಡೋ ಮುಂಚೆ ವೈದ್ಯರನ್ನ ಖಂಡಿತ ಸಂಪರ್ಕಿಸಿ. 

Latest Videos

click me!