High protein lunch : ಬೆಳಗಿನ ಅರ್ಜೆಂಟ್ ನಲ್ಲಿ ದೋಸೆ, ಪರಾಠ ಅಂತ ಗ್ಯಾಸ್ ಉರಿಸಿ, ಒಂದಿಷ್ಟು ಟೈಂ ಸ್ಪೆಂಡ್ ಮಾಡಿದ್ರೂ ಸರಿಯಾದ ಪ್ರೊಟೀನ್ ಸಿಗೋದಿಲ್ಲ. ಮಧ್ಯಾಹ್ನ ಆಯ್ಲಿಫುಡ್ ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ. ನೀವು ಆರೋಗ್ಯಕರ, ಪ್ರೊಟೀನ್ ಆಹಾರ ಗ್ಯಾಸ್ ಇಲ್ದೆ ತಯಾರಿಸಬಹುದು.
ಓಟ್ಸ್ ತೆಗೆದುಕೊಳ್ಳಿ . ಅದಕ್ಕೆ ಸೋಯಾ ಹಾಲು ಅಥವಾ ಬಾದಾಮಿ ಹಾಲು ಸೇರಿಸಿ. ಸ್ವಲ್ಪ ಚಿಯಾ ಬೀಜ ಅಥವಾ ಎಳ್ಳು ಹಾಕಬೇಕು. ಇದನ್ನೆಲ್ಲಾ ಒಂದು ಡಬ್ಬದಲ್ಲಿ ಹಾಕಿ ರಾತ್ರಿ ಪೂರ್ತಿ ನೆನೆಸಿಡಿ. ಇದ್ರಿಂದ ಓಟ್ಸ್ ಸಾಫ್ಟ್ ಆಗುತ್ತದೆ. ಇದ್ರಲ್ಲಿ ಪ್ರೊಟೀನ್ ಮತ್ತು ಫೈಬರ್ ಎರಡೂ ಹೆಚ್ಚಿನ ಪ್ರಮಾಣದಲ್ಲಿದೆ. ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಮಧ್ಯಾಹ್ನದ ನಂತ್ರ ಅತ್ಯುತ್ಸಾಹದಿಂದ ಕೆಲ್ಸ ಮಾಡಬಹುದು.
25
ಮೊಳಕೆಯೊಡೆದ ಹಸಿರುಕಾಳು – ಕಡಲೆಕಾಯಿ ಚಾಟ್
ಮೊಳಕೆಯೊಡೆದ ಹೆಸರುಕಾಳು ಪ್ರೋಟೀನ್ನ ನಿಧಿಯಾಗಿದೆ. ಇದನ್ನು ಹಸಿಯಾಗಿ ತಿನ್ನುವುದು ಒಳ್ಳೆಯದು. ಇದ್ರಲ್ಲಿರುವ ಕಿಣ್ವ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೊಳಕೆಯೊಡೆದ ಹೆಸರುಕಾಳಿನ ಜೊತೆ ಹುಡಿದ ಕಡಲೆ ಹಾಗೂ ಈರುಳ್ಳಿ, ಟೊಮೊಟೊ ಬೆರೆಸಿ ಸೇವನೆ ಮಾಡಿ. ರುಚಿಯಾದ ಹಾಗೂ ಆರೋಗ್ಯಕರ ಈ ಆಹಾರ ದಿನವಿಡಿ ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ.
35
ಕ್ಯಾನ್ ಟ್ಯೂನಾ
ಕ್ಯಾನ್ನಲ್ಲಿ ಸಿಗುವ ಟ್ಯೂನಾ (ಮೀನು) ಅಥವಾ ಮುಂಚಿತವಾಗಿ ಬೇಯಿಸಿದ ಕಡಲೆ ತುಂಬಾ ಸುಲಭವಾದ ಪ್ರೋಟೀನ್ ಊಟ. ಕ್ಯಾನ್ ತೆರೆದು ನೀರನ್ನು ಹೊರಹಾಕಿ. ಅದಕ್ಕೆ ಸ್ವಲ್ಪ ಮಸ್ಟರ್ಡ್ ಸಾಸ್ ಅಥವಾ ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಲೆಟ್ಯೂಸ್ ಎಲೆಗಳಲ್ಲಿ ಹಾಕಿ ತಿನ್ನಬಹುದು.
ಪ್ರೊಟೀನ್ ಹೆಸರು ಬಂದಾಗ ಸತ್ತು ಅಂದ್ರೆ ಹುರಿಗಡಲೆ ಪಾನೀಯ ಲೀಸ್ಟ್ ನಲ್ಲಿ ಮಿಸ್ ಆಗೋದಿಲ್ಲ. ಲಂಚ್ ತಯಾರಿಸೋಕೆ ಟೈಂ ಇಲ್ಲ ಎನ್ನುವವರು ಇದನ್ನು ತಯಾರಿಸಬಹುದು. ಸತ್ತು ತೆಗೆದುಕೊಳ್ಳಿ. ಅದಕ್ಕೆ ತಣ್ಣೀರು ಸೇರಿಸಿ. ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ , ಸ್ವಲ್ಪ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ದೇಹವನ್ನು ತಂಪಾಗಿರಿಸುತ್ತದೆ. ಇದು ಹೊಟ್ಟೆ ಫುಲ್ ಆದ ಅನುಭವ ನೀಡುತ್ತದೆ. ತಕ್ಷಣ ನಿಮಗೆ ಎನರ್ಜಿ ನೀಡುತ್ತದೆ.
55
ಮೇಸರ್ ಜಾರ್ ಸಲಾಡ್
ಸಸ್ಯಹಾರಿಗಳು ಮತ್ತು ಡಯಟ್ ಮೇಲೆ ಪ್ರೀತಿ ಹೊಂದಿರುವವರಿಗೆ ಟೋಪು ಮತ್ತು ಎಳ್ಳಿನ ಮೇಸನ್ ಜಾರ್ ಸಲಾಡ್ ಒಳ್ಳೆಯದು. ಇದು ಕೇಳೋಕೆ ವಿಚಿತ್ರವಾಗಿದೆ. ಆದ್ರೆ ತಯಾರಿಸೋದು ಹಾಗೂ ತಿನ್ನೋದು ಬಹಳ ಸುಲಭ. ಇದಕ್ಕೆ ಸೋಯಾ ಹಾಗೂ ಪನ್ನೀರಿನಿಂದ ಮಾಡಿದ ಟೋಪು, ಎಡಾಮಾಮೆ ಬೀಜ ಅಂದ್ರೆ ಬೇಳೆ, ಕಡಲೆ ಕಾಳು, ಹಸಿರು ಸೊಪ್ಪು, ಎಳ್ಳಿನ ಪೌಡರ್ ಅಗತ್ಯವಿದೆ. ನೀವು ಮೊದಲು ಒಂದು ಮೇಸನ್ ಜಾರ್ ತೆಗೆದುಕೊಳ್ಳಿ. ಅದಕ್ಕೆ ಮೊದಲು ನಿಂಬೆ ರಸ, ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಕಿ. ಆ ನಂತ್ರ ಟೋಪು, ಯಾವುದಾದ್ರೂ ನೆನೆಸಿಟ್ಟ ಬೇಳೆ ಇಲ್ಲ ಕಡಲೆ, ಹಸಿರು ಸೊಪ್ಪು ಹಾಗೂ ಎಳ್ಳಿನ ಪುಡಿ ಹಾಕಿ ಮಿಕ್ಸ್ ಮಾಡಿ ತಿನ್ನಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.