ಮೊಟ್ಟೆಯ ತರಹೇವಾರಿ ರೆಸಿಪಿಗಳನ್ನು ಮಾಡೋದೇನೋ ಚೆನ್ನಾಗಿರುತ್ತದೆ. ಆದ್ರೆ ಅಡುಗೆಯಾದ್ಮೇಲೆ ಪಾತ್ರೆಯಿಂದ ಮೊಟ್ಟೆಯ ವಾಸನೆ ತೆಗೆಯೋದು ದೊಡ್ಡ ತಲೆನೋವಿನ ಕೆಲಸ. ಆ ವಾಸನೆ ಉಳಿದ ಆಹಾರಗಳ ವಾಸನೆಯನ್ನೂ ಹಾಳು ಮಾಡಿಬಿಡುತ್ತದೆ.
ಪರಿಮಳಯುಕ್ತ ದ್ರವ ಸೋಪುಗಳಿಂದ ತೊಳೆಯುವ ನಂತರವೂ ಮೊಟ್ಟೆಯ ವಾಸನೆಯನ್ನು ತೊಡೆದುಹಾಕಲು ಕಷ್ಟವಾಗುತ್ತದೆ. ಹಾಗಿದ್ರೆ ಪಾತ್ರೆಯಿಂದ ಮೊಟ್ಟೆ ವಾಸನೆ ತೆಗೆಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್.
ನಿಂಬೆ ರಸ
ಮೊಟ್ಟೆಯ ಅಡುಗೆ ಮಾಡಿದ ಪಾತ್ರೆಯನ್ನು ಸ್ವಚ್ಛಗೊಳಿಸಲು ನಿಂಬೆ ರಸವನ್ನು ಬಳಸಬಹುದು ಅಥವಾ ನಿಂಬೆಯ ಸಿಪ್ಪೆಯನ್ನು ಸಹ ಬಳಸಿಕೊಳ್ಳಬಹುದು. ನಿಂಬೆ ರಸವನ್ನು ಬಳಸುವಾಗ, ಅದನ್ನು ಬಟ್ಟೆಯ ತುಂಡಿನ ಸಹಾಯದಿಂದ ಅನ್ವಯಿಸಿ ಮತ್ತು ನಂತರ ದ್ರವ ಸೋಪಿನಿಂದ ತೊಳೆಯಿರಿ.
ಹಿಟ್ಟು
ಮೊದಲನೆಯದಾಗಿ, ಪಾತ್ರೆಗಳನ್ನು ಸ್ಪಲ್ಪ ಹಿಟ್ಟಿನೊಂದಿಗೆ ಉಜ್ಜಿಕೊಳ್ಳಿ. ಸುಮಾರು 5-7 ನಿಮಿಷಗಳ ಕಾಲ ಪಾತ್ರೆಯಲ್ಲಿ ಹಾಗೆಯೇ ಬಿಟ್ಬಿಡಿ. ಈಗ, ನೀರಿನಿಂದ ಪಾತ್ರೆಯನ್ನು ತೊಳೆಯಿರಿ. ತಜ್ಞರ ಪ್ರಕಾರ, ಬೇಳೆ ಹಿಟ್ಟು ಎಲ್ಲಾ ಕೆಟ್ಟ ವಾಸನೆಯನ್ನು ಹೀರಿಕೊಳ್ಳುತ್ತದೆ ಮತ್ತು ಪಾತ್ರೆಗೆ ಆಹ್ಲಾದಕರ ಪರಿಮಳವನ್ನು ನೀಡುತ್ತದೆ.
ವಿನೇಗರ್
ಮೊದಲನೆಯದಾಗಿ, ಸಾಮಾನ್ಯ ದ್ರವ ಸೋಪಿನಿಂದ ಪಾತ್ರೆಗಳನ್ನು ತೊಳೆಯಿರಿ. ನಂತರ, ವಿನೇಗರ್‌ನ್ನು ಪಾತ್ರೆಗೆ ಹಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ನಂತರ ಅದನ್ನು ಹರಿಯುವ ನೀರಿನಿಂದ ತೊಳೆಯಿರಿ.
ಕಾಫಿ ಪುಡಿ
ಪಾತ್ರೆಯಿಂದ ಮೊಟ್ಟೆಯ ವಾಸನೆಯನ್ನು ತೆಗೆದುಹಾಕಲು ಕಾಫಿ ಪುಡಿಯನ್ನು ಸಹ ಬಳಸಬಹುದು. ಮೊದಲಿಗೆ ಕಾಫಿ ಪುಡಿಯನ್ನು 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಮಿಶ್ರಣವನ್ನು ಪಾತ್ರೆಗಳ ಮೇಲೆ ಹರಡಿ ಮತ್ತು ಅವುಗಳನ್ನು ಸ್ಕ್ರಬ್ ಮಾಡಿ. ತಣ್ಣೀರಿನಿಂದ ತೊಳೆಯಿರಿ. ಈಗ ಪಾತ್ರೆಯಿಂದ ಮೊಟ್ಟೆ ವಾಸನೆ ಹೋಗಿರುತ್ತದೆ.
ವಿನೇಗರ್ ಸ್ಪ್ರೇ
ಮೊಟ್ಟೆಯ ವಾಸನೆಯನ್ನು ತೊಡೆದುಹಾಕಲು ಈ ಮೇಲಿನ ಸಿಂಪಲ್ ಪರಿಹಾರಗಳು ನಿಮಗೆ ಇಷ್ಟವಾಗದಿದ್ದರೆ ಮಾರುಕಟ್ಟೆಯಲ್ಲಿ ಸಿಗೋ ರೆಡಿಮೇಡ್ ಸ್ಪ್ರೇಗಳನ್ನು ಬಳಸಿಕೊಳ್ಳಬಹುದು. ಬಳಸಿದ ಪಾತ್ರೆಗಳ ಮೇಲೆ ಮಿಶ್ರಣವನ್ನು ಸಿಂಪಡಿಸಿ ಮತ್ತು ಅವುಗಳನ್ನು 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸಾಬೂನಿನಿಂದ ತೊಳೆಯಿರಿ.
ಅಡುಗೆ ಸೋಡಾ
ಅಡುಗೆ ಸೋಡಾವನ್ನು ಮೊಟ್ಟೆಯ ವಾಸನೆಯನ್ನು ತೊಡೆದುಹಾಕಲು ಬಳಸಬಹುದು. 2 ಟೇಬಲ್ ಸ್ಪೂನ್ ಅಡುಗೆ ಸೋಡಾ ಜೊತೆಗೆ ನೀರು ಸೇರಿಸಿ. ಈಗ, ಬಳಸಿದ ಪಾತ್ರೆಗಳನ್ನು ಈ ನೀರಿನಲ್ಲಿ ಅದ್ದಿ ಮತ್ತು 15 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ನಂತರ ಸೋಪಿನಿಂದ ತೊಳೆದು ಒಣಗಿಸಿದರೆ ಪಾತ್ರೆಯಿಂದ ಮೊಟ್ಟೆಯ ವಾಸನೆ ಹೋಗಿರುತ್ತದೆ.