ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು, ಅವರಿಗೆ ಸರಿಯಾದ ಪೋಷಣೆ ಸಿಗಬೇಕಾದುದು ಬಹಳ ಮುಖ್ಯ. ಹಸಿವಿನ ಕೊರತೆ ಮತ್ತು ಕಡಿಮೆ ತಿನ್ನುವುದು ಮಕ್ಕಳ ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ. ಹಾಗಿದ್ರೆ ಮಕ್ಕಳ ತೂಕ ಹೆಚ್ಚಿಸಲು ಎಂಥಾ ಆಹಾರ ಕೊಡ್ಬೇಕು?
ಆಲೂಗಡ್ಡೆ
ಮಕ್ಕಳು ಖಂಡಿತವಾಗಿಯೂ ಆಲೂಗಡ್ಡೆಯನ್ನು ತುಂಬಾ ಇಷ್ಟಪಡುತ್ತಾರೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯಲ್ಲಿ ಹೆಚ್ಚಿನ ಕ್ಯಾಲೋರಿಗಳು, ಅಮೈನೋ ಆಮ್ಲಗಳು ಮತ್ತು ಆಹಾರದ ಫೈಬರ್ ಇರುತ್ತದೆ. ಈ ಕಾರಣದಿಂದಾಗಿ. ಮಕ್ಕಳ ತೂಕ ಬೇಗ ಹೆಚ್ಚಾಗುತ್ತದೆ.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಶಕ್ತಿ ನೀಡುವ ಪೋಷಕಾಂಶಗಳಿವೆ. ಇದು 105 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದನ್ನು ಕಚ್ಚಾ ರೂಪದಲ್ಲಿ, ಮಿಲ್ಕ್‌ಶೇಕ್ ಅಥವಾ ಜ್ಯೂಸ್ ಮಾಡಿ ಮಕ್ಕಳಿಗೆ ಕೊಡಬಹುದು.
ಮೊಟ್ಟೆಗಳು
ಮೊಟ್ಟೆಯಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್, ವಿಟಮಿನ್ ಮತ್ತು ಪೋಷಕಾಂಶಗಳಿರುತ್ತದೆ. ಇದು ಬೆಳೆಯುವ ಶಿಶುಗಳಿಗೆ ಅಗತ್ಯವಾಗಿವೆ. ಮಾತ್ರವಲ್ಲ ಮಕ್ಕಳು ತಮ್ಮ ವಯಸ್ಸಿಗೆ ಸೂಕ್ತವಾದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಬೇಯಿಸಿದ ಮೊಟ್ಟೆಗಳನ್ನು ಮಕ್ಕಳಿಗೆ ನೀಡುವುದು ಒಳ್ಳೆಯದು.
ಬೀಜಗಳು
ಒಣ ಹಣ್ಣುಗಳು ಮತ್ತು ಬೀಜಗಳು ಮಕ್ಕಳ ತೂಕವನ್ನು ಹೆಚ್ಚಿಸಲು ತುಂಬಾ ಸಹಾಯಕವಾಗಿವೆ. ಇದು ಉತ್ತಮ ಪ್ರಮಾಣದ ಪೋಷಕಾಂಶಗಳು, ಸಕ್ಕರೆ ಮತ್ತು ಶಕ್ತಿಯನ್ನು ಹೊಂದಿರುತ್ತದೆ. ಇದು ಮಕ್ಕಳಿಗೆ ಉತ್ತಮ ಆಯ್ಕೆಯಾಗಿದೆ.
ಡೈರಿ ಉತ್ಪನ್ನಗಳು
ಬೆಳೆಯುತ್ತಿರುವ ಮಕ್ಕಳ ಆಹಾರದಲ್ಲಿ ಹಾಲು, ಚೀಸ್, ಬೆಣ್ಣೆಯಂತಹ ಡೈರಿ ಉತ್ಪನ್ನಗಳು ಇರಬೇಕು. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೆಣ್ಣೆಯು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
ಚಿಕನ್
ಕೋಳಿ ಮಾಂಸವು ಪ್ರೋಟೀನ್ ಮತ್ತು ಕ್ಯಾಲೋರಿಗಳ ಉತ್ತಮ ಮೂಲವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಮಕ್ಕಳ ತೂಕವನ್ನು ಹೆಚ್ಚು ಆರೋಗ್ಯಕರವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಡಲೆಕಾಯಿ ಬೆಣ್ಣೆ
ಕಡಲೆಕಾಯಿ ಬೆಣ್ಣೆಯಸೇವನೆಯು ಬೆಳೆಯುತ್ತಿರುವ ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ತುಪ್ಪದಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಇದನ್ನು ತರಕಾರಿಗಳು ಅಥವಾ ಹಣ್ಣುಗಳೊಂದಿಗೆ ಸೇವಿಸಬೇಕು. ಅದರೆ ಇದನ್ನು ಅತಿಯಾಗಿ ಸೇವಿಸುವುದು ಸಹ ಒಳ್ಳೆಯದಲ್ಲ.