ಭಾರತೀಯರು ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ಅಷ್ಟಾಗಿ ಗಮನ ಕೊಡೋದಿಲ್ಲ. ಆದರೆ, ನಮ್ಮ ಆರೋಗ್ಯ ಉತ್ತಮವಾಗಿರಬೇಕೆಂದರೆ ಅಡುಗೆಗೆ ನಾವು ಬಳಸುವ ಎಣ್ಣೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಎಣ್ಣೆಗಳನ್ನೂ ಬಳಸಲು ಆರಂಭಿಸಿದರೆ, ಆರೋಗ್ಯ ಕೈಕೊಡುವುದು ಗ್ಯಾರಂಟಿ. ಹಾಗಾಗಿ ಅಡುಗೆ ಮಾಡಲು ಉತ್ತಮ ಎಣ್ಣೆ ಯಾವುದು ಅನ್ನೋದರ ವಿವರ ಇಲ್ಲಿದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಏರಿಕೆಗೆ ನಾವು ಅಡುಗೆಯಲ್ಲಿ ಬಳಸುವ ಎಣ್ಣೆಯೂ ಒಂದೂ ಕಾರಣ. ಕೊಲೆಸ್ಟ್ರಾಲ್‌ನಿಂದ ನೇರ ಅಪಾಯಕ್ಕೆ ಈಡಾಗುವುದು ಹೃದಯ. ತಿನ್ನುವ ಪದಾರ್ಥಗಳಲ್ಲಿ ಎಣ್ಣೆಯನ್ನು ಕಡಿಮೆ ಬಳಸುವ ಆಹಾರವನ್ನು ಆಯ್ಕೆ ಮಾಡುವ ಕ್ರೇಜ್ ಕೂಡ ಜಾಸ್ತಿಯಾಗುತ್ತಿದೆ. ಆದರೆ, ಕೆಲವರಿಗೆ ಕರಿದ ಆಹಾರವಿಲ್ಲದೆ ಎಣ್ಣೆ ಬಳಸದ ಅಡುಗೆ ತಿನ್ನದೇ ದಿನ ಪೂರ್ತಿ ಆಗೋದೇ ಇಲ್ಲ.
ಕೆಲವೊಂದು ಅಡುಗೆ ಎಣ್ಣೆಯಿಂದ ತಯಾರಿಸಿದ ಆಹಾರ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ, ಇದರ ಪ್ರಮಾಣ ಸರಿಯಾದ ರೀತಿಯಲ್ಲಿರಬೇಕು. ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವೂ ಇದರಲ್ಲಿ ಕಡಿಮೆ ಇರುತ್ತದೆ. ಪ್ರಸಿದ್ಧ ಪೌಷ್ಟಿಕತಜ್ಞರಾದ ಭವೇಶ್ ಗುಪ್ತಾ ಇದರ ಬಗ್ಗೆ ಕೆಲವು ವಿಚಾರ ತಿಳಿಸಿದ್ದು, ಭಾರತೀಯರಿಗೆ ಅಡುಗೆ ಮಾಡಲು ಯಾವ ಎಣ್ಣೆ ಬೆಸ್ಟ್ ಎಂದೂ ತಿಳಿಸಿದ್ದಾರೆ.
ಈ ಎಣ್ಣೆಗಳಿಂದ ತಯಾರಿಸಿದ ಆಹಾರ ರುಚಿಕರವಾಗಿರುವುದು ಮಾತ್ರವಲ್ಲ, ಪರಿಮಳಯುಕ್ತವಾಗಿಯೂ ಇರುತ್ತದೆ ಎಂದು ಹೇಳಿದ್ದಾರೆ. ವಿವಿಧ ದೇಶಗಳಲ್ಲಿ ಅವರು ಕೆಲಸ ಮಾಡುವ ವಿಧಾನ, ಅಡುಗೆ ಶೈಲಿ, ವ್ಯಾಯಾಮ ಇದರಲ್ಲಿ ವ್ಯತ್ಯಾಸಗಳಿವೆ. ವಿದೇಶದ ಜನರು ಬಳಕೆ ಮಾಡುವ ಎಣ್ಣೆ ಭಾರತೀಯರಿಗೆ ಅಷ್ಟಾಗಿ ಒಳ್ಳೆಯದಲ್ಲ.
ಭಾರತದಲ್ಲಿ ಅಡುಗೆ ಮಾಡಲು ಸಾಸಿವೆ ಎಣ್ಣೆ ಹಾಗೂ ತೆಂಗಿನ ಎಣ್ಣೆ ಅತ್ಯಂತ ಉತ್ತಮ ಎಂದು ಹೇಳಿದ್ದಾರೆ. ಅದಕ್ಕೆ ಕೆಲವು ಕಾರಣಗಳನ್ನೂ ಅವರು ನೀಡಿದ್ದಾರೆ.
ಭಾರತೀಯರು ಅಡುಗೆ ಮಾಡಲು ಸಾಸಿವೆ ಎಣ್ಣೆ ಹಾಗೂ ತೆಂಗಿನ ಎಣ್ಣೆ ಬಳಸಬಹುದು. ಇವುಗಳು ಬೇಗನೆ ಸುಡೋದಿಲ್ಲ. ಇದರ ಉಷ್ಣತೆ ಸುಮಾರು 200 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇವುಗಳಿಂದ ಪೂರಿ, ಪಕೋಡ, ಪರಾಠ ಮುಂತಾದ ಆಹಾರಗಳನ್ನು ಕರಿಯಲು ಬಳಸಬಹುದು.
ತುಪ್ಪದ ಅತಿಯಾದ ಬಳಕೆ ಬೇಡ: ಅಡುಗೆಗೆ ತುಪ್ಪವನ್ನು ಬಳಸುವ ಅಭ್ಯಾಸ ನಿಮ್ಮಲ್ಲಿದ್ದರೆ ಅದನ್ನು ನಿಲ್ಲಿಸಿ. ತುಪ್ಪ ಮಾತ್ರವಲ್ಲ ಬೆಣ್ಣೆ ಕೂಡ ಹೆಚ್ಚಾದಷ್ಟು ದೇಹಕ್ಕೆ ಅಪಾಯಕಾರಿ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಏರಿಕೆಗೆ ಕಾರಣವಾಗುತ್ತದೆ.
ತೈಲ ಆಕ್ಸಿಡೀಕರಣದಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಅಪಾಯ ಏರುತ್ತದೆ. ಸಾಸಿವೆ ಮತ್ತು ತೆಂಗಿನ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ಬಿಸಿ ಮಾಡುವಾಗ ಆಕ್ಸಿಡೀಕರಣಗೊಳ್ಳಲು ಆಗೋದಿಲ್ಲ. ಎನ್‌ಸಿಬಿಐನಲ್ಲಿ ಲಭ್ಯವಿರುವ ಸಂಶೋಧನೆಯು ಆಕ್ಸಿಡೀಕರಣ, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳಿಂದಾಗಿ ಲಿಪಿಡ್ ಪ್ರೊಫೈಲ್ ವೇಗವಾಗಿ ಹೆಚ್ಚಾಗುತ್ತದೆ ಎಂದು ತಿಳಿಸುತ್ತದೆ
ಅಮೆರಿಕ ಅಥವಾ ಪಾಶ್ಚಿಮಾತ್ಯ ದೇಶಗಳಲ್ಲಿ ಆಹಾರ ಪದಾರ್ಥವನ್ನು ಹುರಿಯುವ ಅಭ್ಯಾಸವಿಲ್ಲ. ಅಲ್ಲಿನ ಜನರು ಸಲಾಡ್, ಮಾಂಸ ಅಥವಾ ತರಕಾರಿಗಳಿಗೆ ಎಣ್ಣೆ ಸುರಿದು ಹಾಗೆಯೇ ತಿನ್ನಲು ಇಷ್ಟಪಡುತ್ತಾರೆ. ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಆಲಿವ್ ಎಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಅನ್ನದ ಬದಲು ಇವುಗಳನ್ನು ತಿನ್ನಿ, ತೂಕ ಇಳಿಸೋಕೆ ಬೆಸ್ಟ್!