ಈರುಳ್ಳಿ ಮೇಲೆ ಕಪ್ಪು ಚುಕ್ಕೆ ಇದ್ಯಾ? ಇದನ್ನು ಅಪ್ಪಿತಪ್ಪಿಯೂ ಅಡುಗೆಗೆ ಬಳಸ್ಬೇಡಿ

First Published | Feb 21, 2023, 1:13 PM IST

ಭಾರತೀಯ ಅಡುಗೆ ಈರುಳ್ಳಿಗಳಿಲ್ಲದೆ ಪರಿಪೂರ್ಣವಾಗುವುದೇ ಇಲ್ಲ. ಆದರೆ ಈರುಳ್ಳಿಯನ್ನು ಖರೀದಿಸುವಾಗ ಗಮನಿಸಿಕೊಳ್ಳಬೇಕು. ಯಾಕೆಂದರೆ ಕೆಲವು ಈರುಳ್ಳಿಗಳಲ್ಲಿ ಕಪ್ಪುಚುಕ್ಕೆಯಿರುತ್ತದೆ. ಇಂಥಾ ಈರುಳ್ಳಿ ತಿಂದ್ರೆ ಏನಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ. 

ಭಾರತೀಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಈರುಳ್ಳಿ ಇಲ್ಲದೇ ಅಡುಗೆಯೇ ಆಗುವುದಿಲ್ಲ. ಈರುಳ್ಳಿ, ಭಾರತೀಯ ಮನೆಗಳಲ್ಲಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಆದರೆ ಈರುಳ್ಳಿಯನ್ನು ಸರಿಯಾಗಿ ಆಯ್ದುಕೊಳ್ಳಲು ತಿಳಿದಿರಬೇಕು. ಈರುಳ್ಳಿ ಸರಿಯಾಗಿಲ್ಲದಿದ್ದರೆ, ಅಡುಗೆ ರುಚಿಯಾಗಿ ಸರಿಯಾಗಿ ಬರದು.

ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುವುದು ತುಂಬಾ ಒಳ್ಳೆಯದು. ಯಾಕೆಂದರೆ, ಈರುಳ್ಳಿಯಲ್ಲಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಮನುಷ್ಯನ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತಹ ಶಕ್ತಿ ಈರುಳ್ಳಿಗಿದೆ.

Tap to resize

ದೇಹದಲ್ಲಿ ಎದುರಾಗುವ ಕೆಲವೊಂದು ಅಲರ್ಜಿ ಸಮಸ್ಯೆಗಳು ಎಂದರೆ ಕಣ್ಣಿನ ಕೆರೆತ, ಗಂಟಲು ಕೆರೆತ ಮತ್ತು ಮೂಗು ಸೋರುವುದು ಅಂದರೆ ನೆಗಡಿ ಇಂತಹ ಹಲವು ಸಮಸ್ಯೆಗಳಿಗೆ ಈರುಳ್ಳಿ ಪರಿಹಾರವಾಗಿದೆ.

ಆದ್ರೆ ಆರೋಗ್ಯಕರ ಎಂದ ಮಾತ್ರಕ್ಕೆ ಎಲ್ಲಾ ಈರುಳ್ಳಿಗಳಲ್ಲೂ ಈ ಗುಣ ಇರುವುದಿಲ್ಲ. ಹೀಗಾಗಿ ಈರುಳ್ಳಿಯನ್ನು ಆಯ್ದುಕೊಳ್ಳುವಾಗ ಗಮನಿಸಿಕೊಳ್ಳಬೇಕು. ಈರುಳ್ಳಿಗಳಲ್ಲಿ ಹಲವು ವಿಧಗಳಿರುತ್ತವೆ. ಪುಟ್ಟ ಈರುಳ್ಳಿ, ದೊಡ್ಡ ಗಾತ್ರದ ಈರುಳ್ಳಿ ಮೊದಲಾದವು. ಇನ್ನು ಕೆಲವು ಈರುಳ್ಳಿ ತುಂಬಾ ಗಟ್ಟಿಯಾಗಿರುತ್ತವೆ, ಕೆಲವು ತುಂಬಾ ಮೆತ್ತಗಿರುತ್ತವೆ. ಇದರಲ್ಲಿ ಅಡುಗೆಗೆ, ಆರೋಗ್ಯಕ್ಕೆ ಯಾವುದು ಸೂಕ್ತ ಎಂದು ತಿಳಿದುಕೊಳ್ಳಬೇಕು.

ಈರುಳ್ಳಿ ಸಿಪ್ಪೆಯನ್ನು ತೆಗೆಯುವಾಗ ಕೆಲವು ಈರುಳ್ಳಿಗಳಲ್ಲಿ ಕಪ್ಪು ಕಲೆಗಳು ಇರುವುದನ್ನು ನೀವು ಗಮನಿಸಿರಬಹುದು. ಇದು ಮೇಲ್ನೋಟಕ್ಕೆ ಸಾಮಾನ್ಯ ಈರುಳ್ಳಿಯಂತೆ ಅನಿಸಬಹುದು. ಆದರೆ ಇಂತಹ ಈರುಳ್ಳಿಯನ್ನು ನೀವು ತಿನ್ನಬೇಕೇ ಇಲ್ಲವೇ ಎಂಬ ಬಗ್ಗೆ ತಜ್ಞರು ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕಪ್ಪು ಶಿಲೀಂಧ್ರವನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಇದು ಮ್ಯೂಕೋರ್ಮೈಕೋಸಿಸ್ ಅಲ್ಲ. ಈರುಳ್ಳಿ ಬಿಟ್ಟರೆ, ಫ್ರಿಜ್ ಅನ್ನು ಹಲವಾರು ದಿನಗಳವರೆಗೆ ಸ್ವಚ್ಛಗೊಳಿಸದಿದ್ದರೆ ಇದನ್ನು ನೋಡಬಹುದು.

ಕಪ್ಪು ಚುಕ್ಕೆಯಿರುವ ಈರುಳ್ಳಿಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಬಹುದು. ಹೀಗಾಗಿ ಯಾವಾಗಲೂ ಇಂಥಾ ಈರುಳ್ಳಿಯನ್ನು ಖರೀದಿಸೋದು ಒಳ್ಳೆಯದಲ್ಲ. ಬದಲಾಗಿ ಸರಳವಾಗಿರುವ ಸಾದಾ ಈರುಳ್ಳಿಯನ್ನು ಖರೀದಿಸಿ.

Latest Videos

click me!