ಸ್ಟೀಮರ್ ಅನ್ನು ಓವರ್ ಫಿಲ್ ಮಾಡಬೇಡಿ
ಅನೇಕ ಬಾರಿ ನಾವು ಆಹಾರವನ್ನು ಬೇಗನೆ ಬೇಯಿಸಲು ಬಯಸುತ್ತೇವೆ, ಹಾಗಾಗಿ ಸಾಕಷ್ಟು ತರಕಾರಿಗಳನ್ನು ಒಂದೇ ಸಲಕ್ಕೆ ಸ್ಟೀಮರ್ನಲ್ಲಿ (steamer) ಹಾಕುತ್ತೇವೆ. ಆದರೆ, ನೀವು ಹಾಗೆ ಮಾಡುವುದನ್ನು ತಪ್ಪಿಸಬೇಕು. ಸ್ಟೀಮ್ ಸಮಯದಲ್ಲಿ ಮುಚ್ಚಳವು ಚೆನ್ನಾಗಿ ಮುಚ್ಚಿರದೇ ಇದ್ದರೆ, ಆಹಾರ ಸರಿಯಾಗಿ ಬೇಯುವುದಿಲ್ಲ, ಜೊತೆಗೆ ರುಚಿ ಕೂಡ ಇರೋದಿಲ್ಲ. ಅದಕ್ಕಾಗಿ ಆಹಾರವನ್ನು ಹಬೆಯಲ್ಲಿ ಚೆನ್ನಾಗಿ ಬೇಯಿಸಲು ಅದರಲ್ಲಿ ಸ್ವಲ್ಪ ಸ್ಥಳ ಇರಬೇಕು. ಆಹಾರ ಮತ್ತು ಮುಚ್ಚಳದ ನಡುವೆ ಸ್ವಲ್ಪ ಜಾಗವಿರಬೇಕು ಇದರಿಂದ ಹಬೆ ಅದರ ಸುತ್ತಲೂ ಚಲಿಸುತ್ತದೆ. ಇದು ಆಹಾರವನ್ನು ಸರಿಯಾಗಿ ಬೇಯಿಸುತ್ತದೆ.