Evening Snacks: ಸಂಜೆಯ ಹಸಿವು ನೀಗಿಸಲು ಈ ಹೆಲ್ದಿ ಆಹಾರ ಸೇವಿಸಿ

First Published | Feb 19, 2023, 12:19 PM IST

ಮಧ್ಯಾಹ್ನ ಊಟದ ನಂತರ ಸಂಜೆಯವರೆಗೂ ಏನೂ ತಿನ್ನದೇ ಇರೋದರಿಂದ ಸಂಜೆಯ ಹೊತ್ತಿದೆ, ಏನಾದರು ತಿನ್ನುವ ಕಡು ಬಯಕೆ ಉಂಟಾಗುತ್ತೆ. ಆವಾಗ ಹೆಚ್ಚಿನ, ಜನರು ಚಹಾದೊಂದಿಗೆ ಕರಿದ ಆಹಾರವನ್ನು ಬಯಸುತ್ತಾರೆ. ಆದರೆ ನೀವು ತಿಂಡಿಗಳಲ್ಲಿ ಆರೋಗ್ಯಕರ ಮತ್ತು ಹಗುರವಾದ ಆಹಾರಗಳನ್ನು ಸಹ ಆಯ್ಕೆ ಮಾಡಬಹುದು. ಇದು ಆರೋಗ್ಯಕ್ಕೂ ಉತ್ತಮವಾಗಿರುತ್ತೆ.
 

ಸಂಜೆ ಹಸಿವಾದಾಗ ಸಾಮಾನ್ಯವಾಗಿ ನಾವು  ಹುರಿದ ಮತ್ತು ಎಣ್ಣೆಯಲ್ಲಿ ಕರಿದ ಆಹಾರ (Evening Snacks) ತಿನ್ನುತ್ತೇವೆ. ಆದರೆ ಇದರಿಂದಾಗಿ ಬೊಜ್ಜು, ಜೀರ್ಣಕಾರಿ ಮತ್ತು ಇತರ ಕಾಯಿಲೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ, ಸಂಜೆ ತಿಂಡಿಗಳಲ್ಲಿ ಆರೋಗ್ಯಯುತ ಆಹಾರಗಳನ್ನು ಸೇವಿಸೊದು ಮುಖ್ಯ. ಇದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ ಮತ್ತು ತಿನ್ನಲು ರುಚಿಕರವಾಗಿದೆ.

ಮಖಾನಾ (Makhana): ಮಖಾನಾ ಪೋಷಕಾಂಶಗಳ ನಿಧಿಯಾಗಿದೆ. ಇದು ಕ್ಯಾಲ್ಸಿಯಂ, ಪ್ರೋಟೀನ್, ಮೆಗ್ನೀಸಿಯಮ್ ಮತ್ತು ಇತರ ಅಂಶಗಳಿಂದ ಸಮೃದ್ಧವಾಗಿದೆ. ಇದು ಗ್ಲುಟೆನ್ ಮುಕ್ತವೂ ಆಗಿದೆ. ನೀವು ಸಂಜೆ ಉಪಾಹಾರದಲ್ಲಿ ಹುರಿದ ಮಖಾನಾ ಸೇರಿಸಬಹುದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

Tap to resize

ಮಂಡಕ್ಕಿ: ಸಂಜೆ ಉಪಾಹಾರಕ್ಕೆ ಮಂಡಕ್ಕಿ ಅತ್ಯುತ್ತಮ ಆಯ್ಕೆ ಅನ್ನೋದು ಗೊತ್ತಾ?. ಮಕ್ಕಳು, ವಯಸ್ಕರು ಎಲ್ಲರೂ ಇದನ್ನು ತಿನ್ನಲು ಇಷ್ಟಪಡುತ್ತಾರೆ. ನೀವು ಭೇಲ್ಪುರಿ, ಚಿಕ್ಕಿ ಮುಂತಾದ ವಿವಿಧ ಭಕ್ಷ್ಯಗಳನ್ನು ತಿಂಡಿಗಳಿಗಾಗಿ ತಯಾರಿಸಬಹುದು. ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ.

ರಾಗಿ ಕುಕೀಸ್ (Millet Cookies): ರಾಗಿ ಪೋಷಕಾಂಶಗಳ ನಿಧಿಯಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಆಹಾರದ ಫೈಬರ್ ಸಮೃದ್ಧವಾಗಿದೆ. ನೀವು ಬಯಸಿದರೆ, ಸಂಜೆ ಉಪಾಹಾರದಲ್ಲಿ ರಾಗಿಯಿಂದ ತಯಾರಿಸಿದ ಕುಕೀಗಳನ್ನು ಸೇರಿಸಬಹುದು. ಅವು ಸಾಕಷ್ಟು ರುಚಿಕರವಾಗಿವೆ.
 

ಬೇಯಿಸಿದ ಮೊಟ್ಟೆ: ಸಂಜೆ, ನಿಮಗೆ ಆಹಾರ ತಿನ್ನೋ ಬಯಕೆ ಹೆಚ್ಚಾದ್ರೆ, ನೀವು ಬೇಯಿಸಿದ ಮೊಟ್ಟೆಗಳನ್ನು (boiled egg) ಸೇವಿಸಬಹುದು. ಇದರಲ್ಲಿ ವಿಟಮಿನ್-ಎ, ವಿಟಮಿನ್-ಡಿ, ಕಬ್ಬಿಣ, ಪ್ರೋಟೀನ್ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ.

ತಿಂಡಿಗಳಲ್ಲಿ ಓಟ್ಸ್ ಸೇರಿಸಿ: ಓಟ್ಸ್ ಅನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತೆ. ಅವು ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿವೆ. ಜೊತೆಗೆ ರುಚಿಕರವಾಗಿವೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ನೋಡಿಕೊಳ್ಳುತ್ತೆ. ಸಂಜೆ ಉಪಾಹಾರಕ್ಕಾಗಿ ನೀವು ಅಕ್ಕಿ ಅಥವಾ ಉದ್ದಿನ ಇಡ್ಲಿ ಬದಲು ಓಟ್ಸ್ ಇಡ್ಲಿಯನ್ನು (oats idli) ತಿನ್ನಬಹುದು.

ಒಣ ಹಣ್ಣುಗಳನ್ನು ಸೇವಿಸಿ (Dry Fruits): ಸಂಜೆಯ ಕಡುಬಯಕೆಯನ್ನು ಕಡಿಮೆ ಮಾಡಲು ನೀವು ಒಣ ಹಣ್ಣುಗಳನ್ನು (dry fruits) ಸಹ ತಿನ್ನಬಹುದು. ನಿಮ್ಮ ಸಣ್ಣ ಹಸಿವನ್ನು ಪೂರೈಸಲು ಇದು ಉತ್ತಮ ಆಯ್ಕೆಯಾಗಿದೆ. ನೀವು ಬಯಸಿದರೆ, ಸಂಜೆ ಉಪಾಹಾರದಲ್ಲಿ ಬಾದಾಮಿ, ಗೋಡಂಬಿ, ಪಿಸ್ತಾ ಮುಂತಾದ ವಸ್ತುಗಳನ್ನು ನೀವು ಆಯ್ಕೆ ಮಾಡಬಹುದು. 
 

Latest Videos

click me!