ಖಾಲಿ ಹೊಟ್ಟೇಲಿ 2 ಚಮಚ ಇದನ್ನ ಸೇವಿಸುವುದೇಕೆ? ಕಾರಣ ತಿಳಿದರೆ ನೀವೂ ಟ್ರೈ ಮಾಡಬಹುದು!

Published : Jul 13, 2026, 12:03 PM IST

ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಶುಂಠಿ, ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ನೀಡುವ ಪದಾರ್ಥವಷ್ಟೇ ಅಲ್ಲ. ಅದೊಂದು ಆರೋಗ್ಯದ ಗಣಿ, ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಮನೆಮದ್ದು. ಶುಂಠಿ ನೀರಿನ ಸೇವನೆಯಿಂದಾಗ ಪ್ರಯೋಜನಗಳೇನು? ಇಲ್ಲಿ ತಿಳಿಯೋಣ.

PREV
17
ಶುಂಠಿ ನೀರು ಕುಡಿಯುವುದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?

ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಶುಂಠಿ, ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ನೀಡುವ ಪದಾರ್ಥವಷ್ಟೇ ಅಲ್ಲ. ಅದೊಂದು ಆರೋಗ್ಯದ ಗಣಿ, ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವ ಮನೆಮದ್ದು.

27
ಪ್ರತಿದಿನ ಬೆಳಗ್ಗೆ ಶುಂಠಿ ನೀರು ಕುಡಿದರೆ ಏನಾಗುತ್ತೆ?

ಪ್ರತಿದಿನ ಬೆಳಗ್ಗೆ ಶುಂಠಿ ರಸವನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಎನ್ನುತ್ತಾರೆ ತಜ್ಞರು. ಶುಂಠಿ ರಸದ ಸೇವನೆಯಿಂದ ಜೀರ್ಣಕ್ರಯೆ ವ್ಯವಸ್ಥೆ ಚುರುಕುಗೊಳ್ಳುತ್ತದೆ.

37
ಗ್ಯಾಸ್ಟ್ರಿಕ್ ಸಮಸ್ಯೆಗೆ ರಾಮಬಾಣ ಶುಂಠಿ!

ಅಜೀರ್ಣ, ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಅತ್ಯುತ್ತಮ ಪರಿಹಾರ ನೀಡುತ್ತದೆ. ಇದಲ್ಲದೆ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಯೂ ಶುಂಠಿ ಪ್ರಮುಖ ಪಾತ್ರ ವಹಿಸುತ್ತದೆ.

47
ಬೆಳಗ್ಗೆ ಖಾಲಿ ಹೊಟ್ಟೇಲಿ ಶುಂಠಿರಸ ಏಕೆ ಕುಡಿಯಬೇಕು?

ನೆಗಡಿ, ಕೆಮ್ಮು ಮತ್ತು ಗಂಟಲು ನೋವಿನಂತಹ ಸಾಮಾನ್ಯ ಸಮಸ್ಯೆಗಳಿಗೆ ಶುಂಠಿ ರಸ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಉರಿಯೂತ ಶಮನಕಾರಿ ಗುಣಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಹೀಗಾಗಿ, ಹವಾಮಾನ ಬದಲಾದಾಗ ಬರುವ ಸಣ್ಣಪುಟ್ಟ ಕಾಯಿಲೆಗಳಿಂದ ದೂರವಿರಲು ಇದು ಸಹಕಾರಿ.

57
ರಕ್ತದಲ್ಲಿನ ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್ ನಿಯಂತ್ರಿಸುತ್ತೆ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಶುಂಠಿ ರಸ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಲ್ಲೂ ಇದರ ಪಾತ್ರ ಮಹತ್ವದ್ದು.

67
ಹೃದಯದ ಆರೋಗ್ಯಕ್ಕೂ ಶುಂಠಿ ಸೇವನೆ ಒಳ್ಳೆಯದು

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪರೋಕ್ಷವಾಗಿ ನೆರವಾಗುತ್ತದೆ. ಇಷ್ಟೇ ಅಲ್ಲ, ಕೀಲುನೋವಿನಿಂದ ಬಳಲುತ್ತಿರುವವರಿಗೆ ಶುಂಠಿ ರಸವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಿ, ಜ್ಞಾಪಕಶಕ್ತಿಯನ್ನು ಚುರುಕುಗೊಳಿಸುವ ಗುಣವನ್ನೂ ಇದು ಹೊಂದಿದೆ

77
ಬೆಳಗ್ಗೆ ಶುಂಠಿ ಸೇವನೆ ಯಾಕೆ ಮುಖ್ಯ?

ಹಾಗೆ ನೋಡಿದರೆ, ನಮ್ಮ ಅಡುಗೆಮನೆಯ ಒಂದು ಮೂಲೆಯಲ್ಲಿರುವ ಸಾಮಾನ್ಯ ಶುಂಠಿ, ಎಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿದೆ ಅನ್ನೋದು ಅಚ್ಚರಿಯೇ ಸರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories