ಪರಾಠ ತಯಾರಿಸುವಾಗ ತುಪ್ಪ, ಬೆಣ್ಣೆ- ಎಣ್ಣೆಯಲ್ಲಿ ಯಾವುದು ಹಾಕಿದ್ರೆ ಆರೋಗ್ಯಕ್ಕೆ ಬೆಸ್ಟ್ ?

Published : Oct 05, 2026, 01:35 PM IST

ದಕ್ಷಿಣ ಭಾರತದ ಮನೆಗಳಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳ ಲಂಚ್ ಬಾಕ್ಸ್, ಇಲ್ಲ ಬೆಳಗ್ಗಿನ ಬ್ರೇಕ್‌ ಫಾಸ್ಟ್‌ ಗೆ ಬಿಸಿಬಿಸಿ ಪರಾಠ ಉತ್ತಮ ಆಯ್ಕೆಯಾಗಿದೆ. ಆದರೆ ಪರಾಠ ಮಾಡುವಾಗ ಅದನ್ನು ಹೇಗೆ ಬೇಯಿಸ್ಬೇಕು ಎನ್ನುವ ಕನ್ಫ್ಯೂಸ್‌ ಅನೇಕರಿಗೆ. ಅದಕ್ಕೆ ಉತ್ತರ ಇಲ್ಲಿದೆ.

PREV
14
ಪರಾಠಗೆ ದೇಸಿ ತುಪ್ಪ ಬಳಸಬಹುದಾ?

ಬಹುತೇಕ ಮನೆಗಳಲ್ಲಿ ಪರಾಠ ಬೇಯಿಸಲು ದೇಸಿ ತುಪ್ಪ ಬಳಸುತ್ತಾರೆ. ತುಪ್ಪ ಹಾಕಿ ಬೇಯಿಸಿದ ಪರಾಠಗೆ ಒಳ್ಳೆಯ ಫ್ಲೇವರ್, ರುಚಿ ಮತ್ತು ಕ್ರಿಸ್ಪಿ ಟೆಕ್ಸ್ಚರ್ ಬರುತ್ತೆ. ತುಪ್ಪದಲ್ಲಿ ಫ್ಯಾಟ್ ಸೊಲ್ಯೂಬಲ್ ವಿಟಮಿನ್ಗಳಾದ ಎ, ಡಿ, ಇ ಮತ್ತು ಕೆ ಇರುತ್ತವೆ. ಜೊತೆಗೆ ಇದರಲ್ಲಿ ಬ್ಯುಟಿರೇಟ್ ಕೂಡ ಇದ್ದು, ಇದು ಗಟ್ ಹೆಲ್ತ್ಗೆ ಸಪೋರ್ಟ್ ಮಾಡುತ್ತದೆ. ತುಪ್ಪದ ಸ್ಮೋಕಿಂಗ್ ಪಾಯಿಂಟ್ ಕೂಡ ಹೆಚ್ಚಿರುವುದರಿಂದ ಹೆಚ್ಚಿನ ಟೆಂಪರೇಚರ್ನಲ್ಲಿ ಅಡುಗೆ ಮಾಡಲು ಇದನ್ನು ಬಳಸಬಹುದು. ಆದರೆ ತುಪ್ಪದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದಲ್ಲ.ವಿಶೇಷವಾಗಿ ಕೊಲೆಸ್ಟ್ರಾಲ್ ಹೆಚ್ಚಾಗಿರುವವರು ತುಪ್ಪದ ಪ್ರಮಾಣದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅಗತ್ಯವಿದ್ದರೆ ಡಾಕ್ಟರ್ ಸಲಹೆ ಪಡೆಯುವುದು ಉತ್ತಮ.

24
ಪರಾಠಗೆ ಎಣ್ಣೆ ಬಳಸುವುದು ಹೇಗೆ?

ಪರಾಠ ಮಾಡಲು ಎಣ್ಣೆಯನ್ನೂ ಬಳಸಬಹುದು. ಆದರೆ ಪ್ರತಿದಿನ ರಿಫೈನ್ಡ್ ಆಯಿಲ್ ಬಳಸುವ ಬದಲು ಅನ್ಸ್ಯಾಚುರೇಟೆಡ್ ಫ್ಯಾಟ್ ಹೊಂದಿರುವ ಎಣ್ಣೆಗಳನ್ನು ಆಯ್ಕೆ ಮಾಡುವುದು ಉತ್ತಮ. ಸಾಸಿವೆ ಎಣ್ಣೆ, ಸೋಯಾಬೀನ್ ಎಣ್ಣೆ, ಆಲಿವ್ ಆಯಿಲ್ ಅಥವಾ ಕ್ಯಾನೋಲಾ ಆಯಿಲ್ ಬಳಸಬಹುದು. ಆದರೆ ಎಣ್ಣೆ ಕೂಡ ಕ್ಯಾಲೊರಿಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಎಣ್ಣೆ ಎಷ್ಟೇ ಹೆಲ್ದಿ ಆಗಿದ್ದರೂ ಹೆಚ್ಚು ಪ್ರಮಾಣದಲ್ಲಿ ಬಳಸುವುದು ಸೂಕ್ತವಲ್ಲ. ಪರಾಠಗೆ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆ ಹಚ್ಚಿ ಬೇಯಿಸುವುದು ಉತ್ತಮ ಆಯ್ಕೆ.

34
ಪರಾಠಗೆ ಬೆಣ್ಣೆ

ಪರಾಠಗೆ ಬೆಣ್ಣೆ ಹಾಕಿದರೆ ಅದರ ರುಚಿಯೇ ಬೇರೆ. ಬೆಣ್ಣೆಯಲ್ಲಿ ಕೆಲವು ವಿಟಮಿನ್ಗಳು ಮತ್ತು ಶಾರ್ಟ್ ಚೈನ್ ಫ್ಯಾಟಿ ಆಸಿಡ್ಗಳು ಇರುತ್ತವೆ. ಇವು ಎನರ್ಜಿ ಮೆಟಾಬಾಲಿಸಂಗೆ ಸಪೋರ್ಟ್ ಮಾಡುತ್ತವೆ. ಆದರೆ ಬೆಣ್ಣೆಯಲ್ಲೂ ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ಹೆಚ್ಚು ಪ್ರಮಾಣದಲ್ಲಿ ಅಥವಾ ಪ್ರತಿದಿನ ಬೆಣ್ಣೆ ಹಾಕಿಕೊಂಡು ಪರಾಠ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಒಮ್ಮೊಮ್ಮೆ ಪರಾಠಾ ತಿನ್ನುವಾಗ ರುಚಿಗಾಗಿ ಸ್ವಲ್ಪ ಬೆಣ್ಣೆ ಬಳಸಬಹುದು. ಆದರೆ ಪ್ರಮಾಣದ ಮೇಲೆ ಕಂಟ್ರೋಲ್ ಇರಬೇಕು.

44
ಯಾವುದು ಬೆಸ್ಟ್?

ಪರಾಠ ಮಾಡಲು ತುಪ್ಪ ಅಥವಾ ಎಣ್ಣೆ ಉತ್ತಮ ಆಯ್ಕೆಗಳಾಗಬಹುದು. ಆದರೆ ಯಾವುದೇ ಫ್ಯಾಟ್ ಬಳಸಿದರೂ ಪ್ರಮಾಣ ಕಡಿಮೆ ಇಡುವುದು ಮುಖ್ಯ. ನಿಮಗೆ ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ಸ್ಯಾಚುರೇಟೆಡ್ ಫ್ಯಾಟ್ ಇರುವ ತುಪ್ಪ ಮತ್ತು ಬೆಣ್ಣೆಯನ್ನು ಹೆಚ್ಚು ಬಳಸಬಾರದು. ಎಣ್ಣೆಯನ್ನೂ ಅಗತ್ಯಕ್ಕಿಂತ ಹೆಚ್ಚು ಹಾಕಬಾರದು. ನೀವು ಪರಾಠಾವನ್ನು ಅಪರೂಪಕ್ಕೆ ಮಾತ್ರ ತಿನ್ನುತ್ತಿದ್ದರೆ, ರುಚಿಗಾಗಿ ಸ್ವಲ್ಪ ಬೆಣ್ಣೆ ಬಳಸಬಹುದು. ಆದರೆ ಪ್ರತಿದಿನ ಪರಾಠ ತಿನ್ನುವ ಅಭ್ಯಾಸವಿದ್ದರೆ, ಕಡಿಮೆ ಪ್ರಮಾಣದ ಎಣ್ಣೆ ಅಥವಾ ತುಪ್ಪ ಬಳಸಿ ಬೇಯಿಸುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories