Kannada

ಊಟದ ನಂತರ ಸ್ವಲ್ಪ ಸೋಂಪು ಕಾಳು ತಿನ್ನಿ

ಊಟದ ನಂತರ ಸ್ವಲ್ಪ ಸೋಂಪು ಕಾಳು ಜಗಿದು ತಿನ್ನುವ ಅಭ್ಯಾಸ ನಿಮಗಿದೆಯಾ? ಹಾಗಾದರೆ ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಎಂದು ಇಲ್ಲಿ ತಿಳಿಯಿರಿ.

Kannada

ಜೀರ್ಣಕ್ರಿಯೆ ಚುರುಕಾಗುತ್ತದೆ

ಊಟದ ನಂತರ ಸ್ವಲ್ಪ ಸೋಂಪು ಕಾಳು ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆ ವೇಗವಾಗುತ್ತದೆ. ಜೊತೆಗೆ ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ದೂರವಾಗುತ್ತವೆ.

Image credits: Social Media
Kannada

ಬಾಯಿ ದುರ್ವಾಸನೆ ದೂರ

ಸೋಂಪು ಕಾಳಿನಲ್ಲಿರುವ ಆಂಟಿ-ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಬಾಯಿಯ ದುರ್ವಾಸನೆಯನ್ನು ತಡೆಯಲು ಅದ್ಭುತವಾಗಿ ಕೆಲಸ ಮಾಡುತ್ತವೆ.

Image credits: Social Media
Kannada

ತೂಕ ಇಳಿಕೆಗೆ ಸಹಕಾರಿ

ಒಂದು ಚಮಚ ಸೋಂಪು ಕಾಳನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ಕುಡಿಯುವುದರಿಂದ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.

Image credits: Social media
Kannada

ರೋಗನಿರೋಧಕ ಶಕ್ತಿ ಹೆಚ್ಚಳ

ಸೋಂಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಜೀವಕೋಶಗಳ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.

Image credits: social media
Kannada

ಅತಿಯಾದ ಹಸಿವು ನಿಯಂತ್ರಣ

ಸೋಂಪು ಕಾಳಿನಲ್ಲಿರುವ ನಾರಿನಾಂಶವು (ಫೈಬರ್) ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದು ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಬಹುದು.

Image credits: Getty
Kannada

ಹೇಗೆ ಸೇವಿಸಬೇಕು?

ಊಟದ ನಂತರ ಅರ್ಧ ಚಮಚ ಸೋಂಪು ಕಾಳನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಜಗಿದು ತಿನ್ನಿ. ಅಥವಾ ಸೋಂಪು ಹಾಕಿ ಕುದಿಸಿದ ನೀರನ್ನು ಕೂಡ ನೀವು ಕುಡಿಯಬಹುದು.

Image credits: Getty

Kids Brain Food: ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಈ 7 ಆಹಾರಗಳನ್ನು ತಪ್ಪದೇ ಕೊಡಿ

ಕಣ್ಣಿನ ಆರೋಗ್ಯ ಕಾಪಾಡಲು ಈ 6 ಆಹಾರಗಳನ್ನು ತಿನ್ನಿ!

ಮಾನಸಿಕ ಆರೋಗ್ಯ ಸುಧಾರಿಸಲು ಈ ಆಹಾರಗಳನ್ನು ಸೇವಿಸಿ

Chicken During Fever: ಜ್ವರ ಬಂದಾಗ ಚಿಕನ್ ತಿನ್ನಬಹುದಾ? ಅಪ್ಪಿ-ತಪ್ಪಿ ತಿಂದ್ರೆ ಏನಾಗುತ್ತೆ?