ವಿಶ್ವದ ಬೆಸ್ಟ್ ಫುಡ್‌ ಸಿಟಿ ಲಿಸ್ಟ್‌ನಲ್ಲಿ ಭಾರತದ ಈ ಐದು ನಗರಗಳಿಗೆ ಸಿಕ್ತು ಸ್ಥಾನ

First Published | Jan 18, 2024, 4:10 PM IST

ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳಿರೋ ಹಾಗೆಯೇ ಆಹಾರಪದ್ಧತಿಯೂ ವಿಭಿನ್ನವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ವಿಶ್ವದ ಬೆಸ್ಟ್ ಫುಡ್‌ ಸಿಟಿ ಲಿಸ್ಟ್‌ನಲ್ಲಿ ಭಾರತದ ಈ ಐದು ನಗರಗಳಿಗೆ ಸ್ಥಾನ ಸಿಕ್ಕಿದೆ.

ಭಾರತವು ಮತ್ತೊಮ್ಮೆ ಜಾಗತಿಕ ಪಾಕಶಾಲೆಯ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದೆ. ದೇಶದ ಐದು  ನಗರಗಳು ಇತ್ತೀಚೆಗೆ 'ವಿಶ್ವದ ಅತ್ಯುತ್ತಮ ಆಹಾರ ನಗರಗಳೆಂಬ ಖ್ಯಾತಿ ಪಡೆದಿವೆ. ಟೇಸ್ಟ್ ಅಟ್ಲಾಸ್ ನಡೆಸಿದ ಸರ್ವೇಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.

ಭಾರತೀಯ ಪಾಕಪದ್ಧತಿಯನ್ನು ಸುಂದರವಾದ ಆಹಾರವನ್ನು ಉಣಬಡಿಸುವ ನಗರಗಳ ಪಟ್ಟಿಯಲ್ಲಿ ಮುಂಬೈ, ಹೈದರಾಬಾದ್, ಲಕ್ನೋ, ದೆಹಲಿ, ಚೆನ್ನೈ ಸೇರಿವೆ. ಇಲ್ಲಿನ ಯಾವ ಆಹಾರ ಹೆಚ್ಚು ಫೇಮಸ್ ಆಗಿದೆ ತಿಳಿಯೋಣ.

Latest Videos


ಮುಂಬೈ
ಮುಂಬೈ ಆಹಾರಗಳ ನಗರವಾಗಿದೆ. ಬೀದಿ ಬದಿಯ ಸ್ಟಾಲ್‌ಗಳಿಂದ ಹಬೆಯಾಡುವ ವಡಾ ಪಾವ್ ಮತ್ತು ಮಸಾಲೆಯುಕ್ತ ಪಾನಿ ಪುರಿ ಜನರಿಗೆ ಹೆಚ್ಚು ಪ್ರಿಯವಾಗಿದೆ. ಸಮುದ್ರಾಹಾರ ಥಾಲಿಗಳು, ಬಾಯಲ್ಲಿ ಕರಗುವ ಇರಾನಿ ಚಾಯ್ ಸವಿಯಲೇಬೇಕು. 

ಹೈದರಾಬಾದ್
ಹೈದರಾಬಾದ್,ಇಲ್ಲಿನ ಸ್ಪೆಷಲ್‌ ಬಿರಿಯಾನಿಯಿಂದಾನೇ ಹೆಚ್ಚು ಫೇಮಸ್ ಆಗಿದೆ. ಲೇಯರ್ಡ್ ರೈಸ್, ಆರೊಮ್ಯಾಟಿಕ್ ಮಸಾಲೆಗಳು ಮತ್ತು ಮಾಂಸದ ಈ ಪರಿಮಳಯುಕ್ತ ಖ್ಯಾತ ಎಂಥವರ ಮನಸ್ಸನ್ನೂ ಸೂರೆಗೊಳಿಸುತ್ತದೆ. ಆಂಧ್ರ-ಶೈಲಿಯ ಮೇಲೋಗರಗಳು ಸಹ ಇಲ್ಲಿ ಹೆಚ್ಚು ರುಚಿಕರವಾಗಿದೆ.

ದೆಹಲಿ
ಭಾರತದ ರಾಜಧಾನಿ ದೆಹಲಿಯು ಇತಿಹಾಸ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಹಾಗೆಯೇ ಇಲ್ಲಿನ ಆಹಾರವು ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಕ್ರಿಸ್ಪೀ ಕಬಾಬ್‌ಗಳು, ಕೂರ್ಮಾಗಳು, ಸುವಾಸನೆಯ ಬಿರಿಯಾನಿಗಳೊಂದಿಗೆ ಮುಘಲಾಯಿ ಪಾಕಪದ್ಧತಿಯು ಎಂಥವರನ್ನೂ ಸೆಳೆಯುತ್ತದೆ.

ಚೆನ್ನೈ
ದಕ್ಷಿಣ ಭಾರತದ ಸಾಂಸ್ಕೃತಿಕ ರಾಜ್ಯವಾಗಿರುವ ಚೆನ್ನೈನಲ್ಲಿ ದೋಸೆ ಜನಪ್ರಿಯವಾಗಿದೆ. ಗರಿಗರಿಯಾದ ದೋಸೆಯನ್ನು ವಿವಿಧ ಚಟ್ನಿಗಳು ಮತ್ತು ಸಾಂಬಾರ್‌ಗಳೊಂದಿಗೆ ಬಡಿಸಲಾಗುತ್ತದೆ, ಮಾತ್ರವಲ್ಲ ಚೆಟ್ಟಿನಾಡ್ ಪಾಕಪದ್ಧತಿಯು ಎಲ್ಲರಿಯೂ ಮೆಚ್ಚಿನದ್ದಾಗಿ. ಫಿಲ್ಟರ್ ಕಾಫಿಗಳು ಸಹ ಇಲ್ಲಿ ವಿಭಿನ್ನವಾಗಿದೆ.

ಲಕ್ನೋ 
ನವಾಬರ ನಗರ ಲಕ್ನೋ, ರಾಜಮನೆತನದ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಸೂಕ್ಷ್ಮವಾದ ಮಸಾಲೆಗಳು, ನಿಧಾನವಾಗಿ ಬೇಯಿಸಿದ ಮಾಂಸಗಳು ಮತ್ತು ಪರಿಮಳಯುಕ್ತ ಬಿರಿಯಾನಿಗಳು ಈ ಪಾಕಶಾಲೆಯ ಸಂಪ್ರದಾಯದ ವಿಶಿಷ್ಟ ಲಕ್ಷಣಗಳಾಗಿವೆ. 

click me!