ಸಖತ್ ಟೇಸ್ಟಿಯಾಗಿರುತ್ತಂತೆ ಎಗ್, ಚಿಕನ್ ಕುಲ್ಫಿ; ಏನಿದು ನಾನ್ ವೆಜ್ ಕುಲ್ಫಿ?

First Published | Jan 18, 2024, 12:42 PM IST

ನೀವು ಯಾವೆಲ್ಲಾ ಕುಲ್ಫಿ ತಿಂದಿದ್ದೀರಿ? ಮಲೈ ಕುಲ್ಫಿ, ಬಾದಾಮ್ ಕುಲ್ಫಿ, ಕೇಸರ್ ಕುಲ್ಫಿ ಇತ್ಯಾದಿ… ಅಲ್ಪಾ? ಆದ್ರೆ ಯಾವತ್ತಾದ್ರೂ ಎಗ್ ಕುಲ್ಫಿ ತಿಂದಿದ್ದೀರಾ? ಏನು ಮೊಟ್ಟೆಯ ಕುಲ್ಫಿಯೆ ಎಂದು ಶಾಖ್ ಆಗ್ಬೇಡಿ, ಇದೇನಿದು ತಿಳಿಯಲು ಮುಂದೆ ಓದಿ. 

ನಮ್ಮ ದೇಶದ ಪ್ರತಿಯೊಂದು ಪ್ರದೇಶವು ತನ್ನದೇ ಆದ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಒಂದೊಂದು ಊರಿನ ಭಕ್ಷ್ಯಗಳು ಆಯಾಯ ಜಾಗದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವುಗಳನ್ನು ನೀವು ಸುಲಭವಾಗಿ ಎಲ್ಲೆಡೆಯೂ ತಿನ್ನಬಹುದು. ಆದರೆ, ಅನೇಕ ಸ್ಥಳಗಳಲ್ಲಿ, ಜನರು ವಿಶೇಷ ಪ್ರಯೋಗ ಮಾಡೊದಕ್ಕೆ ಹೋಗ್ತಾರೆ. ಆಹಾರಗಳಲ್ಲಿನ ವಿಚಿತ್ರ ಪ್ರಯೋಗ ಹೆಚ್ಚಿನ ಸಮಯ ಫ್ಲಾಪ್ ಆಗೋದೆ ಹೆಚ್ಚು.  ಆದರೆ ನಾನ್ ವೆಜ್ ಕುಲ್ಫಿ (non veg kulfi) ಮಾಡಿ ಯಶಸ್ವಿಯಾಗಿರೋದರ ಬಗ್ಗೆ ಗೊತ್ತಿದ್ಯಾ?

ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಐಸ್ ಕ್ರೀಮ್ ಕುಲ್ಫಿಗಳು (ice cream kulfi) ಲಭ್ಯವಿದೆ. ಐಸ್ ಕ್ರೀಮ್ ಪ್ರಿಯರು ಸಹ ಬೇರೆ ಬೇರೆ ಕುಲ್ಫಿಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟು ತಿಂತಾರೆ. ಆದರೆ ದೇಶದ ಕೆಲವೆಡೆ ವಿಭಿನ್ನ ರೀತಿಯ ಕುಲ್ಫಿ ಲಭ್ಯವಿದೆ. ನಾನ್ ವೆಜ್ ಆಹಾರ ಪ್ರಿಯರಿಗೆ, ಇದು ಖಂಡಿತಾ ಇಷ್ಟವಾಗಲಿದೆ. ಯಾಕಂದ್ರೆ ಅದು ಮೊಟ್ಟೆ , ಚಿಕನ್ ನಿಂದ ಮಾಡಲಾದಂತಹ ಕುಲ್ಫಿ. 

Tap to resize

ದೇಶದ ವಿವಿದೆಡೆ ಜನರು ಮೊಟ್ಟೆ ಕುಲ್ಫಿ ಮತ್ತು ಚಿಕನ್ ಎಗ್ ಕುಲ್ಫಿಯ ಹೊಸ ಖಾದ್ಯವನ್ನು ಎಂಜಾಯ್ ಮಾಡ್ತಿದ್ದಾರೆ. ದೇಶದ ಹಲವೆಡೆ ಈ ಕುಲ್ಫಿಗಳು ಲಭ್ಯವಿದೆ, ಅಷ್ಟೇ ಯಾಕೆ ಜನರಂತೂ ಸಿಕ್ಕಾಪಟ್ಟೆ ಇಷ್ಟ ಪಟ್ಟು ಇದನ್ನು ತಿಂತಿದ್ದಾರೆ. ನಮ್ಮ ಬೆಂಗಳೂರಲ್ಲೂ ಈ ಕುಲ್ಫಿ ಲಭ್ಯವಿದೆ. 

ಏನಿದು ಎಗ್ ಕುಲ್ಫಿ?: ಅಯ್ಯಯ್ಯೋ ಏನ್ ಕಾಲ ಬಂತು ಮೊಟ್ಟೆ, ಕೋಳಿಯಿಂದಲೂ ಕುಲ್ಫಿ (chicken egg kulfi) ಮಾಡ್ಕೊಂಡು ತಿಂತಾರ, ಅದು ಹೇಗಿರಬಹುದು ಎಂದು ಯೋಚ್ನೆ ಮಾಡ್ಬೇಡಿ. ಯಾಕಂದ್ರೆ, ಇದು ನೀವು ತಿನ್ನೋ ಐಸ್ ಕ್ರೀಮ್ ಕುಲ್ಫಿ ಅಲ್ಲ. ಎಗ್ ರೋಲ್ ನ್ನು ಕುಲ್ಫಿ ಆಕಾರದಲ್ಲಿ ಕಾಯಿಸೋದಕ್ಕೆ ಅಂಡಾ ಕುಲ್ಫಿ ಎಂದು ಹೆಸರಿಸಿದ್ದಾರೆ. 

ಮೊಟ್ಟೆ ಕುಲ್ಫಿ ತಯಾರಿಸುವಾಗ, ಹಸಿ ಮೊಟ್ಟೆಗಳನ್ನು ಒಡೆದು ಮಷಿನ್ ನಲ್ಲಿರುವ ಕುಲ್ಫಿ ಮೇಕರ್ ಆಕಾರದ ಅಚ್ಚಿನಲ್ಲಿ ಹಾಕಲಾಗುತ್ತದೆ . ಅದಕ್ಕೆ ಬೇಕಾದ ಉಪ್ಪು, ಖಾರವೂ ಸ್ವಲ್ಪ ಸೇರಿಸಲಾಗುತ್ತೆ. ಮೊಟ್ಟೆಯ ಹಿಟ್ಟು ಸ್ವಲ್ಪ ದಪ್ಪವಾದಾಗ, ಕುಲ್ಫಿ ಸ್ಟಿಕ್ ಅನ್ನು ಅದಕ್ಕೆ ಸಿಕ್ಕಿಸಲಾಗುತ್ತೆ.  
 

ಈ ಎಲೆಕ್ಟ್ರಿಕ್ ಯಂತ್ರದಲ್ಲಿ, ಕುಲ್ಫಿ ಕೇವಲ ಐದರಿಂದ ಏಳು ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಚಿಕನ್ ಎಗ್ ಕುಲ್ಫಿ ತಯಾರಿಸುವಾಗ, ಚಿಕನ್ ಸಾಸೇಜ್ ಅನ್ನು ಮೊದಲು ಕೋಲಿನ ಮೇಲೆ ಬಳಸಲಾಗುತ್ತದೆ. ನಂತರ ಇದನ್ನು ತೆಗೆದ ಮೇಲೆ ಅದಕ್ಕೆ ಚೀಸ್, ಸಾಸ್, ಪೆಪ್ಪರ್, ಏನು ಬೇಕೋ ಅದನ್ನು ಹಾಕಿ ನೀಡಲಾಗುತ್ತೆ. 
 

ಇನ್ನು ಈ ಮೊಟ್ಟೆ ಕುಲ್ಫಿ ತಯಾರಿಸಲು ವಿಶೇಷ ಯಂತ್ರದ ಅಗತ್ಯವಿದೆ. ಈ ಸಂಪೂರ್ಣ ವಿದ್ಯುತ್ ಯಂತ್ರವು ಒಮ್ಮೆಗೆ 10 ಕುಲ್ಫಿಗಳನ್ನು ತಯಾರಿಸಬಲ್ಲದು. ಪ್ರತಿ ಕುಲ್ಫಿ ಅಚ್ಚಿಗೆ ಪ್ರತ್ಯೇಕ ಬಟನ್ ಸಹ ಇದೆ. 
 

ಇನ್ನು ನೀವು ಬೇರೆ ಬೇರೆ ರೀತಿಯ ಎಗ್ ಕುಲ್ಫಿ ಟ್ರೈ ಮಾಡಲೂ ಬಹುದು, ಮೊಟ್ಟೆ ಕುಲ್ಫಿ, ಮೊಟ್ಟೆ ಪನೀರ್ ಕುಲ್ಫಿ, ಚಿಕನ್ ಎಗ್ ಕುಲ್ಫಿ, ಚಿಕನ್ ಎಗ್ ಮತ್ತು ಪನೀರ್ ಕುಲ್ಫಿ. ಹೀಗೆ ಕಡಿಮೆ ದರದಲ್ಲಿ ನೀವು ಟೇಸ್ಟಿಯಾದ ನಾನ್ ವೆಜ್ ಕುಲ್ಫಿ ಟ್ರೈ ಮಾಡಬಹುದು. 
 

Latest Videos

click me!