ನಾಟಿ ಕೋಳಿ ಮಾಂಸ ಬೇಯಲು ತುಂಬಾ ಸಮಯ ತಗೊಳ್ಳುತ್ತೆ ಅಂತ ಬೇಸರವೇ? ಈ ಚಿಕ್ಕ ಟ್ರಿಕ್ಸ್ ಫಾಲೋ ಮಾಡಿ, ಮಾಂಸ ಮೆತ್ತಗೆ ಚೆನ್ನಾಗಿ ಬೇಯುತ್ತೆ.
ಮಾಂಸಕ್ಕೆ ಸ್ವಲ್ಪ ಉಪ್ಪು, ಅರಿಶಿನ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ. ಇದರಿಂದ ಮಾಂಸ ಬೇಗನೆ ಮೆತ್ತಗಾಗುತ್ತದೆ.
ಬೇಯಿಸುವಾಗ 2 ಚಮಚ ಮೊಸರು ಅಥವಾ ಲಿಂಬೆ ರಸ ಸೇರಿಸಿ. ಇದು ಮಾಂಸವನ್ನು ಸಾಫ್ಟ್ ಆಗಿಸಲು ಸಹಾಯ ಮಾಡುತ್ತದೆ.
ಪಾತ್ರೆಗಿಂತ ಪ್ರೆಶರ್ ಕುಕ್ಕರ್ ಬಳಸುವುದು ಉತ್ತಮ. 3 ರಿಂದ 5 ವಿಶಲ್ ಕೂಗಿಸಿದರೆ ನಾಟಿ ಕೋಳಿ ಚೆನ್ನಾಗಿ ಬೇಯುತ್ತದೆ.
ಮಾಂಸದ ತುಂಡುಗಳು ಸಣ್ಣದಾಗಿರಲಿ. ದೊಡ್ಡ ತುಂಡುಗಳಾದರೆ ಬೇಯಲು ತುಂಬಾ ಸಮಯ ಬೇಕಾಗುತ್ತದೆ ಮತ್ತು ಮಸಾಲೆ ಸರಿಯಾಗಿ ಹಿಡಿಯುವುದಿಲ್ಲ.
ಅಡುಗೆ ಮಾಡುವಾಗ ಮಧ್ಯದಲ್ಲಿ ನೀರು ಬೇಕಿದ್ದರೆ ಬಿಸಿ ನೀರನ್ನೇ ಹಾಕಿ. ತಣ್ಣೀರು ಹಾಕಿದರೆ ಮಾಂಸ ಗಟ್ಟಿಯಾಗುತ್ತದೆ ಮತ್ತು ಬೇಯಲು ಇನ್ನು ತಡವಾಗುತ್ತದೆ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಈ 7 ಹಣ್ಣುಗಳನ್ನು ತಪ್ಪದೇ ತಿನ್ನಿ
ಹಣ್ಣುಗಳ ಮೇಲೆ ಈ ಸ್ಟಿಕ್ಕರ್, ನಂಬರ್ ಯಾಕಿರುತ್ತೆ? ಯೋಚಿಸಿದ್ದೀರಾ?
ಪ್ರತಿದಿನ ಮೊಸರು ತಿಂದರೆ ಹೊಟ್ಟೆಗೆ ಏನಾಗುತ್ತೆ? ದೇಹದಲ್ಲಾಗುವ ಬದಲಾವಣೆಗಳೇನು?
ಹಲ್ಲುಗಳನ್ನು ಬಲಿಷ್ಠಗೊಳಿಸಲು ತಿನ್ನಲೇಬೇಕಾದ ಕ್ಯಾಲ್ಸಿಯಂಯುಕ್ತ 7 ಆಹಾರಗಳಿವು!