ಸಿಕ್ಕಾಪಟ್ಟೆ ಟೀ ಕುಡಿಯೋ ಅಭ್ಯಾಸನಾ ? ಸ್ಪಲ್ಪ ಕಪ್‌ ಬಗ್ಗೆನೂ ಗಮನ ಇರ್ಲಿ

First Published | Nov 13, 2022, 12:59 PM IST

ಪ್ಲಾಸ್ಟಿಕ್ ಕಪ್‌ಗಳಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಇಲ್ಲಸಲ್ಲದ ಕಾಯಿಲೆಗಳು ಬರುವ ಅಪಾಯವಿದೆ. ಆದರೆ, ಜೇಡಿಮಣ್ಣಿನ ಲೋಟಗಳಲ್ಲಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ ಎನ್ನುತ್ತಾರೆ ತಜ್ಞರು. ಆ ಬಗ್ಗೆ ತಿಳಿಯೋಣ.

ಜೇಡಿಮಣ್ಣಿನಿಂದ ತಯಾರಿಸಿದ ಟೀ ಕಪ್‌ಗಳು ನಮ್ಮ ದೇಶದ ವಿವಿಧ ಭಾಗಗಳಲ್ಲಿ ಲಭ್ಯವಿದೆ. ಮಣ್ಣಿನ ಲೋಟದಲ್ಲಿ (Clay cup) ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಣ್ಣಿನ ಲೋಟಗಳಲ್ಲಿ ಟೀ ಕುಡಿದರೆ ತುಂಬಾ ಟೇಸ್ಟಿ ಕೂಡಾ ಹೌದು. ಜೇಡಿಮಣ್ಣಿನ ಲೋಟಗಳಲ್ಲಿ ಚಹಾವನ್ನು (Tea) ಕುಡಿಯುವುದನ್ನು ಉತ್ತರ ಭಾರತದಲ್ಲಿ 'ಕುಲ್ಹಾದ್' ಎಂದು ಕರೆಯಲಾಗುತ್ತದೆ. 

ಜೇಡಿಮಣ್ಣಿನಿಂದ ತಯಾರಿಸಿದ ಟೀ ಕಪ್‌ಗಳು ನಮ್ಮ ದೇಶದ ವಿವಿಧ ಭಾಗಗಳಲ್ಲಿ ಲಭ್ಯವಿದೆ. ಮಣ್ಣಿನ ಲೋಟದಲ್ಲಿ ಟೀ ಕುಡಿಯುವುದು ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ಮಣ್ಣಿನ ಲೋಟಗಳಲ್ಲಿ ಟೀ ಕುಡಿದರೆ ತುಂಬಾ ಟೇಸ್ಟಿ ಕೂಡಾ ಹೌದು. ಜೇಡಿಮಣ್ಣಿನ ಲೋಟಗಳಲ್ಲಿ ಚಹಾವನ್ನು ಕುಡಿಯುವುದನ್ನು ಉತ್ತರ ಭಾರತದಲ್ಲಿ 'ಕುಲ್ಹಾದ್' ಎಂದು ಕರೆಯಲಾಗುತ್ತದೆ. 

Latest Videos


ಮಣ್ಣಿನ ಲೋಟದಲ್ಲಿ ಚಹಾ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಈ ಕಪ್‌ಗಳು ತುಂಬಾ ಸ್ವಚ್ಛ (Clean)ವಾಗಿರುತ್ತದೆ. ಸೆರಾಮಿಕ್ ಪಾತ್ರೆಗಳನ್ನು ತೊಳೆದು ಮತ್ತೆ ಮತ್ತೆ ಬಳಸುತ್ತಾರೆ. ಆದ್ರೆ ಮಣ್ಣಿನ ಪಾತ್ರೆಯನ್ನು ಒಂದು ಅಥವಾ ಎರಡು ಬಾರಿ ಮಾತ್ರ ಬಳಸಲಾಗುತ್ತದೆ. ಅದರ ನಂತರ ಅದನ್ನು ಮತ್ತೆ ಕರಗಿಸಿ ಮಣ್ಣಿನ ಬಟ್ಟಲು ತಯಾರಿಸಬಹುದು. ಈ ಮಣ್ಣಿನ ಮಡಕೆಯಲ್ಲಿ ಟೀ ಕುಡಿಯುವುದರಿಂದ ದೇಹಕ್ಕೆ (Body) ಯಾವುದೇ ಹಾನಿಯಾಗುವುದಿಲ್ಲ. ಇದರಿಂದ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ. ಅದಲ್ಲದೆ ಮಣ್ಣಿನ ಲೋಟದಲ್ಲಿ ಟೀ ಕುಡಿಯುವುದರಿಂದ ಮತ್ತೇನು ಪ್ರಯೋಜನವಿದೆ ತಿಳಿಯಿರಿ.

ಆಮ್ಲೀಯತೆಯನ್ನು ನಿವಾರಿಸುತ್ತದೆ: ಸಾಮಾನ್ಯವಾಗಿ ಮಣ್ಣಿನ ಮಡಕೆಗಳಲ್ಲಿ ನೈಸರ್ಗಿಕ ಆಲ್ಕೇನ್ ಇರುತ್ತದೆ. ಹೀಗಾಗಿ ಇದರಲ್ಲಿ ಚಹಾವನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ (stomach) ಆಮ್ಲ ರಚನೆಯನ್ನು ತಡೆಯಬಹುದು. ಟೀ ಕುಡಿದ ತಕ್ಷಣ ಅನೇಕರು ಅಸಿಡಿಟಿ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಜೇಡಿಮಣ್ಣಿನ ಲೋಟದಲ್ಲಿ ಟೀ ಕುಡಿದರೆ ಹುಳಿ ರುಚಿ, ಅಸಿಡಿಟಿ, ಜೀರ್ಣಕ್ರಿಯೆ ಸಮಸ್ಯೆಗಳು ಬರುವ ಸಾಧ್ಯತೆ ಇರುವುದಿಲ್ಲ.

ಸೋಂಕಿನಿಂದ ರಕ್ಷಿಸುತ್ತದೆ: ನೀವು ರಸ್ತೆಗಳಲ್ಲಿ ಮತ್ತು ರಸ್ತೆ ಬದಿಯ ಟೀ ಸ್ಟಾಲ್‌ಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಗ್ಲಾಸ್‌ಗಳಲ್ಲಿ ಚಹಾವನ್ನು ನೀಡುವುದನ್ನು ಕಾಣಬಹುದು. ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಪ್ಲಾಸ್ಟಿಕ್ ಕಪ್‌ಗಳು ಅನೇಕ ರೀತಿಯ ರಾಸಾಯನಿಕಗಳನ್ನು (Chemical) ಹೊಂದಿರುತ್ತವೆ. ಅಲ್ಲದೆ ಗಾಜಿನ ಸಾಮಾನುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಇವುಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಆದರೆ ಮಣ್ಣಿನ ಕಪ್‌ಗಲ್ಲಿ ಚಹಾ ಕುಡಿಯುವುದರಿಂದ ಸೋಂಕು ಹರಡುವ ಭಯವಿಲ್ಲ.

ಪೇಪರ್ ಕಪ್‌ಗಳನ್ನು ಬಳಸದಿರಿ: ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಕಪ್‌ಗಳ ಬದಲಿಗೆ ಪೇಪರ್‌ ಕಪ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಸ್ಟೈರೋಫೊಮ್ ಎಂದು ಕರೆಯಲಾಗುತ್ತದೆ. ಆದರೆ ಇವುಗಳನ್ನು ನಿಜವಾಗಿಯೂ ಕಾಗದದಿಂದ ಮಾಡಲಾಗಿಲ್ಲ. ಇದನ್ನು ತಯಾರಿಸಲು ಪಾಲಿಸ್ಟೈರೀನ್ ಎಂಬ ವಸ್ತುವನ್ನು ಬಳಸಲಾಗುತ್ತದೆ. ಇವುಗಳಲ್ಲಿ ಟೀ ಅಥವಾ ಇನ್ನಾವುದೇ ಜ್ಯೂಸ್ ಕುಡಿಯುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೆ, ಈ ಕಪ್‌ನಲ್ಲಿರುವ ಯಾವುದನ್ನಾದರೂ ತಿನ್ನುವುದರಿಂದ ಹಾರ್ಮೋನುಗಳ ಅಸ್ವಸ್ಥತೆಗಳು, ಏಕಾಗ್ರತೆಯ ಕೊರತೆ, ಶೀತ ಸಮಸ್ಯೆಗಳು ಮತ್ತು ಎದೆಯುರಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಮಣ್ಣಿನ ಲೋಟದಲ್ಲಿ ಟೀ ಕುಡಿಯುವುದರಿಂದ ಇಂತಹ ಸಮಸ್ಯೆಗಳು ಬರುವುದಿಲ್ಲ.

ಸಣ್ಣ ಉದ್ಯಮಗಳು ಬೆಳೆಯುತ್ತವೆ: ಮಣ್ಣಿನ ಪಾತ್ರೆಗಳು ಮತ್ತು ಪಾತ್ರೆಗಳನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ತಯಾರಿಸಲಾಗುತ್ತದೆ. ಅದರಲ್ಲೂ ಕೆಲವು ಕುಟುಂಬಗಳಿಗೆ ಅದರ ತಯಾರಿಯೇ ಜೀವನಾಧಾರ. ಹಾಗಾಗಿ ಮಣ್ಣಿನ ಲೋಟಗಳಲ್ಲಿ ಟೀ ಕುಡಿಯುವುದರಿಂದ, ಅವುಗಳ ಬಳಕೆಯಿಂದ ಈ ಉದ್ಯಮವನ್ನೇ ನೆಚ್ಚಿಕೊಂಡಿರುವವರ ಜೀವನ ಸುಧಾರಿಸುತ್ತದೆ. 

click me!