ಈ ಅದ್ಭುತ ಹ್ಯಾಕ್ ಟ್ರೈ ಮಾಡಿ ಜೇನು ತುಪ್ಪವನ್ನು ಇರುವೆಗಳಿಂದ ರಕ್ಷಿಸಿ

First Published | Nov 9, 2022, 2:08 PM IST

ಮನೆಯಲ್ಲಿ ಇರುವೆ ಕಾಟದಿಂದ ಬೇಸತ್ತು ಹೋಗಿದ್ದೀರಾ? ಏನೇ ವಸ್ತುಗಳನ್ನಿಟ್ಟರೂ ಸಹ ಇರುವೆ ಮುತ್ತಿಕೊಂಡು ಬಿಡುತ್ತದೆ ಅಲ್ವಾ? ಕೆಲವೊಮ್ಮೆ ಇರುವೆಗಳು ಜೇನಿನ ಡಬ್ಬಿಯಲ್ಲಿ ಸಹ ಕಂಡುಬರುತ್ತವೆ. ಜೇನಿನಲ್ಲಿ ಇರುವೆ ತುಂಬಿಕೊಂಡರೆ ಅವುಗಳನ್ನು ನಿವಾರಣೆ ಮಾಡೋದು ಸುಲಭವಾಗಿರೋದಿಲ್ಲ. ಹಾಗಾದ್ರೆ ಅದಕ್ಕೇನು ಮಾಡೋದು? ಜೇನಿಗೆ ಇರುವೆ ಬಾರದಂತೆ ಕಾಪಾಡೋದು ಹೇಗೆ ನೋಡೋಣ.
 

ಕೆಲವೊಮ್ಮೆ ಸಿಹಿ ವಸ್ತುಗಳನ್ನು ಇಟ್ಟಕೂಡಲೇ ಇರುವೆಗಳು ಮುತ್ತಿಗೆ ಹಾಕಿ ಬಿಡುತ್ತವೆ. ಕೆಲವೊಮ್ಮೆ ಅವುಗಳ ಮೂಲವನ್ನು ಹುಡುಕಿ ತೊಡೆದು ಹಾಕುವುದು ಸಹ ಕಷ್ಟವಾಗಿರುತ್ತೆ. ಆದಾಗ್ಯೂ, ಅಡುಗೆಮನೆಯಲ್ಲಿ ಇರುವೆಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ, ವಿಶೇಷವಾಗಿ ಜೇನುತುಪ್ಪ ಮತ್ತು ಸಕ್ಕರೆ ಡಬ್ಬಿಗಳಲ್ಲಿ ಇರುವೆ ಕಂಡು ಬರೋದು ಸಾಮಾನ್ಯ.. 

ನಾವು ಸಕ್ಕರೆಯಿಂದ ಇರುವೆಗಳನ್ನು ಸುಲಭವಾಗಿ ತೆಗೆದುಹಾಕಬಹುದು (get rid of ants), ಆದರೆ ಜೇನುತುಪ್ಪದಿಂದ ತೆಗೆಯೋದು ಕಷ್ಟ. ಏಕೆಂದರೆ ಜೇನುತುಪ್ಪ ಒದ್ದೆಯಾಗಿರುತ್ತೆ, ಇದರಲ್ಲಿ ಅನೇಕ ಇರುವೆಗಳು ಸತ್ತು ಬಿದ್ದಿರುತ್ತೆ ಅಥವಾ ಅದನ್ನು ಹಾಳು ಮಾಡುತ್ತೆ. ಇದರಿಂದ ಜೇನು ತುಪ್ಪವನ್ನು ಎಸೆಯಬೇಕಾಗಿ ಬರುತ್ತೆ. ಜೇನುತುಪ್ಪದಲ್ಲಿರುವ ಇರುವೆಗಳಿಂದ ನಿಮಗೂ ತೊಂದರೆಯಾದರೆ, ಇಂದು ನಾವು ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಿದ್ದೇವೆ.

Tap to resize

ಎಲ್ಲಾ ರೀತಿಯ ಇರುವೆಗಳನ್ನು ದೂರವಿಡಲು ನೀವು ಕೆಲವು ಮನೆಮದ್ದುಗಳನ್ನು (home remedies) ಟ್ರೈ ಮಾಡಬಹುದು.  ಈ ಮನೆಮದ್ದುಗಳು ತುಂಬಾ ಪ್ರಯೋಜನಕಾರಿಯಾಗಿರುತ್ತವೆ, ಇದರ ಸಹಾಯದಿಂದ ನೀವು ಜೇನುತುಪ್ಪವನ್ನು ಇರುವೆಗಳಿಂದ ದೂರವಿಡಬಹುದು. ಹಾಗಿದ್ರೆ ಬನ್ನಿ ಇರುವೆಗಳನ್ನು ದೂರವಿಡಲು ಈ ಹ್ಯಾಕ್ (kitchen hacks) ಟ್ರೈ ಮಾಡಿ.

ಜಾರ್ ಸ್ವಚ್ಛವಾಗಿಡಿ 
ಜೇನುತುಪ್ಪವನ್ನು ಬಳಸುವಾಗ, ಅನೇಕ ಬಾರಿ ಜೇನುತುಪ್ಪ ಜಾರ್ ನ (honey box) ಹೊರ ಮೇಲ್ಮೈ ಮೇಲೆ ಸಹ ಬರುತ್ತದೆ, ಇದರಿಂದಾಗಿ ಇರುವೆಗಳು ಜಾರಿಗೆ ಮುತ್ತಿಗೆ ಹಾಕುತ್ತವೆ.  ಏಕೆಂದರೆ ತೆರೆದ ಜೇನುತುಪ್ಪವು ಇರುವೆಗಳನ್ನು ಆಕರ್ಷಿಸಲು ಕೆಲಸ ಮಾಡುತ್ತದೆ. ಆದ್ದರಿಂದ, ಜೇನುತುಪ್ಪವನ್ನು ಬಳಸಿದ ನಂತರ, ಒದ್ದೆ ಬಟ್ಟೆಯಿಂದ ಮೊದಲು ಜಾರ್ ಅಥವಾ ಪೆಟ್ಟಿಗೆಯನ್ನು ಸ್ವಚ್ಛಗೊಳಿಸಿ ಮತ್ತು ನಂತರ ಅದನ್ನು ಸ್ವಚ್ಛವಾದ ಸ್ಥಳದಲ್ಲಿ ಸಂಗ್ರಹಿಸಿಡುವುದು ಉತ್ತಮ.  

ಸ್ವಚ್ಛಗೊಳಿಸುವುದು ಹೇಗೆ?  
ಇದಕ್ಕಾಗಿ, ಕಾಗದದ ಟವೆಲ್ ಅನ್ನು ಒದ್ದೆ ಮಾಡಿ. 
ನಂತರ ಒಂದು ಬೌಲ್ ನಲ್ಲಿ ಡಿಶ್ ಸೋಪನ್ನು ಹಾಕಿ.
ಈಗ ಜಾರ್ ನ ಮೇಲ್ಭಾಗವನ್ನು ಪೇಪರ್ ಟವೆಲ್ (paper towel) ನಿಂದ ಸ್ವಚ್ಛಗೊಳಿಸಿ.
ಸ್ವಲ್ಪ ಜೇನು ಕೂಡ ಹೊರಗೆ ಉಳಿದುಕೊಳ್ಳದಂತೆ ನೋಡಿ. ಜೊತೆಗೆ ಅದನ್ನು ಸೇಫ್ ಆದ ಜಾಗದಲ್ಲಿ ತೆಗೆದಿರಿಸಿ.

ಜಾರ್ ಅನ್ನು ಬಿಗಿಯಾಗಿ ಮುಚ್ಚಿ
ಜೇನುತುಪ್ಪ ಬಳಸಿದ ನಂತರ, ಇರುವೆಗಳು ಕಂಪಾರ್ಟ್ ಮೆಂಟ್ ಒಳಗೆ ಹೋಗದಂತೆ ನೀವು ಜಾರ್ ಅನ್ನು ಬಿಗಿಯಾಗಿ ಮುಚ್ಚೋದನ್ನು ಮರಿಯಬೇಡಿ. ಇದಕ್ಕಾಗಿ, ನೀವು ಗಾಳಿಯಾಡದ ಕಂಟೇನರ್ ಅಥವಾ ಜಾರ್ ಬಳಸಬೇಕು. ಅದೇ ಸಮಯದಲ್ಲಿ, ನೀವು ಪ್ಲಾಸ್ಟಿಕ್ ಡಬ್ಬಿ ಬಳಸುವುದನ್ನು ತಪ್ಪಿಸಬೇಕು ಏಕೆಂದರೆ ಅದರಲ್ಲಿರುವ ಜೇನುತುಪ್ಪವು ಬೇಗನೆ ಹಾಳಾಗುತ್ತದೆ.  

ಇರುವೆಗಳನ್ನು ಜೇನು ತುಪ್ಪದಿಂದ ದೂರವಿರಿಸಲು ನೀವು ಸ್ವಚ್ಛ ಮತ್ತು ಉತ್ತಮ ಸ್ಥಳ ಆಯ್ಕೆ ಮಾಡಿ. ಇರುವೆಗಳು ಬರುವ ಸಾಧ್ಯತೆ ಕಡಿಮೆ ಇರುವಲ್ಲಿ ಜೇನುತುಪ್ಪ ಇಡಲು ಪ್ರಯತ್ನಿಸಿ, ಉದಾಹರಣೆಗೆ ನೀವು ಜೇನುತುಪ್ಪವನ್ನು ಗಾಜಿನ ಕಪಾಟಿನಲ್ಲಿ ಇಡಬಹುದು.  

ಅಲ್ಲದೆ, ತಾಪಮಾನದ ಬಗ್ಗೆ ಕಾಳಜಿ ವಹಿಸಿ. ಜೇನುತುಪ್ಪವನ್ನು 70-80 ಡಿಗ್ರಿ ಫ್ಯಾರನ್ ಹೀಟ್ ಅಥವಾ ಸೂರ್ಯನ ಬೆಳಕಿನಿಂದ (sun light) ದೂರವಿಡಬೇಕು ಎಂದು ಹೇಳಲಾಗುತ್ತದೆ. ಜೇನುತುಪ್ಪಕ್ಕೆ ಸರಿಯಾದ ತಾಪಮಾನ ಸಿಕ್ಕರೆ, ಇರುವೆ ಮುತ್ತಿಗೆ ಹಾಕೋದಿಲ್ಲ ಮತ್ತು ಅದು ದೀರ್ಘಕಾಲದವರೆಗೆ ತಾಜಾವಾಗಿ ಉಳಿಯುತ್ತದೆ. 

ಈ ಹ್ಯಾಕ್ಸ್ ಟ್ರೈ ಮಾಡಿ
ಇರುವೆಗಳನ್ನು ಜೇನುತುಪ್ಪದ ಡಬ್ಬಿಗಳಿಂದ ದೂರವಿರಲು ನೀವು ಬಯಸಿದರೆ, ನಿಮ್ಮ ಉಗ್ರಾಣ ಅಥವಾ ಡಬ್ಬಿಗಳ ಸುತ್ತಲೂ ಬೆಳ್ಳುಳ್ಳಿಯನ್ನು ನೇತುಹಾಕಿ. ಇರುವೆಗಳು ಬೆಳ್ಳುಳ್ಳಿಯ ವಾಸನೆಯಿಂದ (garlic smell) ಓಡಿಹೋಗುತ್ತವೆ ಮತ್ತು ಕಂಪಾರ್ಟ್ ಮೆಂಟ್ ನ ಬಳಿಯೂ ಬರುವುದಿಲ್ಲ ಎಂದು ಹೇಳಲಾಗುತ್ತದೆ.  

ಇರುವೆಗಳು ಬೇವಿನ ಪರಿಮಳದಿಂದ ಓಡಿಹೋಗುವುದರಿಂದ ನೀವು ಜೇನು ಡಬ್ಬಿಯ ಸುತ್ತಲೂ ಬೇವಿನ ಎಲೆಗಳನ್ನು ಸಹ ಇಡಬಹುದು. ಜೇನುತುಪ್ಪದ ಸುತ್ತಲಿನ ಪ್ರದೇಶದ ಮೇಲೆ ನೀವು ಬೇವಿನ ಎಣ್ಣೆಯನ್ನು (neem oil) ಚಿಮುಕಿಸಬಹುದು. ಇದರ ಗಾಢ ಪರಿಮಳಕ್ಕೆ ಇರುವೆಗಳು ದೂರ ಓಡುತ್ತವೆ.

ಇರುವೆಗಳು ಕಾಫಿಯ ವಾಸನೆ ಮತ್ತು ಆಮ್ಲೀಯತೆಯನ್ನು ದ್ವೇಷಿಸುತ್ತವೆ ಎಂದು ತಿಳಿದರೆ ನೀವು ಅಚ್ಚರಿ ಪಡುತ್ತೀರಿ ಅಲ್ವಾ?  ನೀವು ಜೇನುತುಪ್ಪದ ಪೆಟ್ಟಿಗೆಯನ್ನು ಇಡುವ ಸ್ಥಳದಲ್ಲಿ ಕಾಫಿ ಪುಡಿಯನ್ನು ಹರಡಿ. ಇದರ ಹತ್ತಿರ ಕೂಡ ಇರುವೆಗಳು ಸುಳಿದಾಡೋದಿಲ್ಲ. ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಜೇನಿನ ಡಬ್ಬಿಯನ್ನು ಇರುವೆಗಳಿಂದ ದೂರವಿಡಬಹುದು. 

Latest Videos

click me!