ಚಳಿಗಾಲದಲ್ಲಿ ದಿನಕ್ಕೊಂದು ಕಿತ್ತಳೆ ತಿಂದ್ರೆ ಅಜೀರ್ಣದ ಸಮಸ್ಯೆ ಕಾಡಲ್ಲ

First Published | Nov 10, 2022, 3:46 PM IST

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆರೋಗ್ಯ ಚೆನ್ನಾಗಿರಬೇಕಾದರೆ ತಿನ್ನೋ ಆಹಾರದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ ಈ ಸೀಸನ್ ನಲ್ಲಿ ಪ್ರತಿದಿನ ಒಂದು ಕಿತ್ತಳೆ ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆ ಬಗ್ಗೆ ತಿಳಿಯೋಣ.

ಕಿತ್ತಳೆ ರಸವನ್ನು (Orange juice) ತೆಗೆದುಕೊಳ್ಳುವುದರಿಂದ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ಸುಕ್ಕುಗಳಿಲ್ಲದೆ ಚರ್ಮವನ್ನು ಬಿಗಿಯಾಗಿ ಇಡುತ್ತದೆ. ಮುಖದ ಮೇಲೆ ವಯಸ್ಸಾದ ಚರ್ಮವನ್ನು (Skin) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಡವೆಗಳು (Pimple) ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಟೋನ್ ಅನ್ನು ಹೆಚ್ಚಿಸುತ್ತದೆ.

ಚಳಿಗಾಲದಲ್ಲಿ ಕೆಮ್ಮು (Cough), ಜ್ವರ, ನೆಗಡಿ, ವೈರಲ್ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಬರುವುದು ಸರ್ವೇಸಾಮಾನ್ಯ. ವಿಶೇಷವಾಗಿ ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಾದರೆ, ಅನೇಕ ರೋಗಗಳು ಮತ್ತು ಇತರ ಸೋಂಕುಗಳ ಅಪಾಯವು ಹೆಚ್ಚಾಗುತ್ತದೆ. ಅದಕ್ಕಾಗಿಯೇ ನೀವು ರೋಗನಿರೋಧಕ ಶಕ್ತಿಯನ್ನು (Immunity power) ಹೆಚ್ಚಿಸುವ ಆಹಾರವನ್ನು ಹೆಚ್ಚು ಸೇವಿಸಬೇಕು. ಈ ಋತುವಿನಲ್ಲಿ ಪ್ರತಿದಿನ ಒಂದು ಕಿತ್ತಳೆ ತಿನ್ನುವುದು ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು (Health benefits) ನೀಡುತ್ತದೆ.

Tap to resize

ಕಿತ್ತಳೆ ಹಣ್ಣು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಕಿತ್ತಳೆಯಲ್ಲಿ ಫೈಬರ್ ಅಂಶವೂ ಸಮೃದ್ಧವಾಗಿದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಮಲಬದ್ಧತೆಯಿಂದ (Constipation) ಬಳಲುತ್ತಿರುವವರಿಗೆ ಕಿತ್ತಳೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.

ಕಿತ್ತಳೆ ಇದು ಹೊಟ್ಟೆಯ ಕೊಬ್ಬನ್ನು (Fat) ವೇಗವಾಗಿ ಕರಗಿಸುತ್ತದೆ. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಹಣ್ಣು. ಇದರಲ್ಲಿರುವ ನಾರಿನಂಶವು ಹೊಟ್ಟೆಯನ್ನು ಹೆಚ್ಚು ಕಾಲ ತುಂಬುವಂತೆ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದು ಆರೋಗ್ಯಕರ ರೀತಿಯಲ್ಲಿ ತೂಕ (Weight)ವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಕಿತ್ತಳೆ ಹೃದಯ ಸಂಬಂಧಿ ಕಾಯಿಲೆಗಳನ್ನು (Heart disease) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಹೃದಯ ಸಂಬಂಧಿ ಕಾಯಿಲೆಗಳ ವಿರುದ್ಧ ಕೆಲಸ ಮಾಡುತ್ತವೆ. ಕಿತ್ತಳೆಯಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದೆ. ಇದು ನಿಮ್ಮ ಹಲ್ಲುಗಳು ಮತ್ತು ಮೂಳೆಗಳನ್ನು (Bone) ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಕೊರತೆಯಾದರೆ..ಮೂಳೆ, ಹಲ್ಲು ದುರ್ಬಲವಾಗುತ್ತದೆ. ಕೂದಲು ಉದುರುವ ಅಪಾಯವೂ ಇದೆ.

ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಚರ್ಮದ ಸಮಸ್ಯೆ (Skin problem)ಗಳನ್ನು ಕಡಿಮೆ ಮಾಡಬಹುದು. ವಾಸ್ತವವಾಗಿ, ಕಿತ್ತಳೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕಿತ್ತಳೆ ತಿನ್ನುವುದರಿಂದ ಮೊಡವೆಗಳನ್ನು ಕಡಿಮೆ ಮಾಡಬಹುದು. ಕಲೆಗಳು ಮಾಯವಾಗುತ್ತವೆ. ಮುಖ ಸುಂದರವಾಗಿ ಹೊಳೆಯುತ್ತದೆ. ಉಗುರುಗಳು ಆರೋಗ್ಯಕರವಾಗಿರುತ್ತವೆ. ನಿಮ್ಮ ಮುಖವನ್ನು ಸುಂದರವಾಗಿ..ನಯವಾಗಿಸಲು ಕಿತ್ತಳೆ ಸಿಪ್ಪೆಯನ್ನು ಬಳಸಬಹುದು.

ಕಿತ್ತಳೆ ಹಣ್ಣು ಮೂತ್ರಪಿಂಡದ ಕಲ್ಲುಗಳನ್ನೂ ಕರಗಿಸುತ್ತದೆ. ಈ ಹಣ್ಣು ಮೂತ್ರದಲ್ಲಿ ಸಿಟ್ರೇಟ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ಕಡಿಮೆ ಮಾಡುತ್ತದೆ.

Latest Videos

click me!