ಇಟಲಿಯ ರಾಷ್ಟ್ರೀಯ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ ಸಂಶೋಧಕರ ಪ್ರಕಾರ, ಜಾಸ್ತಿ ಕೋಳಿ ಮಾಂಸ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ. ವಾರಕ್ಕೆ 300 ಗ್ರಾಂ ಗಿಂತ ಹೆಚ್ಚು ಕೋಳಿ ಮಾಂಸ ತಿನ್ನುವವರಿಗೆ ಹೊಟ್ಟೆ, ಕರುಳಿನ ಸಮಸ್ಯೆ ಜೊತೆಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.
ಇಲ್ಲಿಯವರೆಗೆ ತಜ್ಞರು ರೆಡ್ ಮೀಟ್ ಕ್ಯಾನ್ಸರ್‌ಗೆ ಕಾರಣ ಅಂತ, ಕೋಳಿ ಮಾಂಸ ಒಳ್ಳೆಯದು ಅಂತ ಹೇಳುತ್ತಿದ್ದರು. ಆದರೆ, ಹೊಸ ಸಂಶೋಧನೆಯಲ್ಲಿ ಕೋಳಿ ಮಾಂಸ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ಹೇಳುತ್ತಿದ್ದಾರೆ.