ಜಸ್ಟ್ 2 ನಿಮಿಷದಲ್ಲಿ ಕ್ರಿಸ್ಪಿಯಾಗಿ ಬೇಲ್‌ಪುರಿ ತಯಾರಿಸುವ ಸೀಕ್ರೆಟ್ ವಿಧಾನಗಳು

Published : Apr 27, 2025, 02:22 PM ISTUpdated : Apr 27, 2025, 02:45 PM IST

How to Make Crispy Bhelpuri in Just 2 Minute: ಭೇಲ್‌ಪುರಿ ಬೇಗ ತುಂಬಾ ಮೆತ್ತಗೆ ಆಗುತ್ತಾ? ಗರಿಗರಿಯಾದ ಭೇಲ್‌ಗೆ ಈ ಸುಲಭ ಸಲಹೆಗಳನ್ನು ಪಾಲಿಸಿ. 

PREV
17
ಜಸ್ಟ್ 2 ನಿಮಿಷದಲ್ಲಿ ಕ್ರಿಸ್ಪಿಯಾಗಿ ಬೇಲ್‌ಪುರಿ ತಯಾರಿಸುವ ಸೀಕ್ರೆಟ್ ವಿಧಾನಗಳು
ಭೇಲ್‌ಪುರಿ ಯಾಕೆ ಮೆತ್ತಗಾಗುತ್ತೆ?

ಬೇಲ್‌ಪುರಿಯಲ್ಲಿ ಬಳಸುವ ಮಂಡಕ್ಕಿ  ಅಥವಾ ಚುರುಮುರಿ ತುಂಬಾ ಹಗುರವಾಗಿರುತ್ತದೆ. ಇದಕ್ಕೆ ಚಟ್ನಿ ಅಥವಾ ಮೊಸರು ಹಾಕಿದಾಗ ಬೇಗನೆ ಮೆತ್ತಗಾಗುತ್ತದೆ. ನೀವು ಮಾಡಿದ ಬೇಲ್‌ಪುರಿ ಕ್ರಿಸ್ಪಿಯಾಗಿರಬೇಕಾದ್ರೆ ಈ ವಿಧಾನಗಳಲ್ಲಿ ತಯಾರಿಸಿ. ಇದರಿಂದ ನಿಮ್ಮ ಬೇಲ್‌ಪುರಿ ತುಂಬಾ ಸಮಯದವರೆಗೆ ಗರಿಗರಿಯಾಗಿರುತ್ತದೆ.

27
ಗರಿಗರಿ ಭೇಲ್‌ಪುರಿ ಮಾಡುವ ವಿಧಾನ

ಮೊದಲು ಒಂದು ಪಾತ್ರೆ ಒಲೆ ಮೇಲಿಟ್ಟುಕೊಂಡು ಎಣ್ಣೆ ಹಾಕಿ.ಎಣ್ಣೆ ಬಿಸಿಯಾಗುತ್ತಿದ್ದಂತೆ ಚಿಟಿಕೆ ಅರಿಶಿನ ಸೇರಿಸಬೇಕು. ನಂತರ ಇದಕ್ಕೆ ಮಂಡಕ್ಕಿ ಸೇರಿಸಿ ಮೂರರಿಂದ ನಾಲ್ಕು ನಿಮಿಷ  ಬಿಸಿ ಮಾಡಿಕೊಳ್ಳಿ. ಇದರಿಂದ ನಿಮ್ಮ ಮಂಡಕ್ಕಿ  ಮತ್ತಷ್ಟು ಗರಿಗರಿಯಾಗುತ್ತದೆ. 

37
ಕೊನೆಯಲ್ಲಿ ಚಟ್ನಿ ಹಾಕಿ

ದೀರ್ಘಕಾಲ ಗರಿಗರಿಯಾದ ಭೇಲ್‌ಪುರಿ ಬೇಕೆಂದರೆ ಹಸಿರು ಚಟ್ನಿ, ಕೆಂಪು ಚಟ್ನಿ ಮತ್ತು ಮೊಸರನ್ನು ಕೊನೆಯಲ್ಲಿ ಹಾಕಿ ಮಿಕ್ಸ್  ಮಾಡಬೇಕು ಅಥವಾ ತಿನ್ನುವ ಕೆಲವೇ ನಿಮಿಷಗಳ  ಮುಂಚೆ ಸೇರಿಸಬೇಕು. ಈ ಮೂರು ಪದಾರ್ಥಗಳು ನಿಮ್ಮ ಮಂಡಕ್ಕಿಯನ್ನು ಸಾಫ್ಟ್ ಮಾಡುತ್ತವೆ. ಹಾಗಾಗಿ ಇವುಗಳನ್ನು ಕೊನೆಯಲ್ಲಿ ಸೇರಿಸಬೇಕು.

47
ಟೊಮೆಟೊ ತಿರುಳು ತೆಗೆಯಿರಿ

ಟೊಮೆಟೊ ತಿರುಳು ಭೇಲ್‌ಪುರಿಯನ್ನು ಮೆತ್ತಗೆ ಮಾಡುತ್ತದೆ. ಹಾಗಾಗಿ ಟೊಮೆಟೊ ಹೆಚ್ಚುವ ತಿರುಳನ್ನು ತೆಗೆದು ಹೊರಭಾಗವನ್ನು ಮಾತ್ರ ಬಳಸಿ. ತಿರುಳಿನಲ್ಲಿ ಹೆಚ್ಚಿನ ನೀರಿನಂಶವನ್ನು ಒಳಗೊಂಡಿರುತ್ತದೆ.

57
ಭೇಲ್‌ಪುರಿ ಮಾಡುವುದು ಹೀಗೆ?

ಹುರಿದ ಮಂಡಕ್ಕಿಯನ್ನು ಬಟ್ಟಲಿಗೆ ಹಾಕಿ. ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಬೇಯಿಸಿದ ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿ ಮಂಡಕ್ಕಿ ಹಾಕಿ. ನಂತರ ಕಡಲೆಕಾಯಿ ಸೇರಿಸಿ. ಬೇಕಿದ್ರೆ ಬೇಕರಿಯಲ್ಲಿ ಸಿಗುವ ಪುರಿಯನ್ನು ಸಹ ಸೇರಿಸಬಹುದು.

67
ಚಟ್ನಿ ಮತ್ತು ಮಸಾಲೆ ಹಾಕಿ

ಈಗ ಹಸಿರು ಚಟ್ನಿ ಮತ್ತು ಸಿಹಿ ಚಟ್ನಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಪ್ಪು ಮತ್ತು ಚಾಟ್ ಮಸಾಲೆ ಸೇರಿಸಿ. ಸ್ವಲ್ಪ ನಿಂಬೆರಸ ಹಿಂಡಿ.

77
ಸೇವ್ ಮತ್ತು ಕೊತ್ತಂಬರಿ ಸೊಪ್ಪು

ಮೇಲೆ ಸೇವ್ ಹಾಕಿ ಮತ್ತು ತಾಜಾ ಕೊತ್ತಂಬರಿ ಸೊಪ್ಪು ಚಿಮುಕಿಸಿ. ಭೇಲ್‌ಪುರಿ ಮಿಶ್ರಣ ಮಾಡಿದ ತಕ್ಷಣ ಸರ್ವ್ ಮಾಡಿ. ಇದರಿಂದ ಸೇವಿಸುವಾಗ ಕ್ರಿಸ್ಪಿ ಫೀಲ್ ಆಗುತ್ತದೆ.

Read more Photos on
click me!

Recommended Stories