ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಬರುವ ಸಾಧ್ಯತೆ ಇರುತ್ತದೆ. ಬೇಸಿಗೆಯಲ್ಲಿ ಕೆಲವು ಆಹಾರಗಳು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಅನೇಕ ಬಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಈ ಋತುವಿನಲ್ಲಿ ಆರೋಗ್ಯವಾಗಿರಲು ಕೆಲವು ಆಹಾರಗಳಿಂದ ದೂರವಿರಬೇಕು. ಅವು ಯಾವುವು ನೋಡೋಣ..
28
ಉಪ್ಪg
ಬೇಸಿಗೆಯಲ್ಲಿ ಉಪ್ಪನ್ನು ಕಡಿಮೆ ತಿನ್ನಿರಿ! ಹೆಚ್ಚಾದರೆ ಬಿಪಿ, ಊತ, ಹೃದಯ ರೋಗಗಳು ಬರುತ್ತವೆ. ಹೆಲ್ತ್ ಲೈನ್ ಪ್ರಕಾರ ಬೇಸಿಗೆಯಲ್ಲಿ ಉಪ್ಪು ಸೇವನೆಯನ್ನು ಕಡಿಮೆ ಮಾಡಿ. ಉಪ್ಪು ನಮ್ಮ ಆಹಾರವನ್ನು ರುಚಿಕರವಾಗಿಸುತ್ತದೆ. ಆದರೆ ಉಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಅಧಿಕ ರಕ್ತದೊತ್ತಡ, ಊತ, ಹೃದಯ ಸಂಬಂಧಿತ ಕಾಯಿಲೆಗಳು ಬರುವ ಸಾಧ್ಯತೆ ಇದೆ.
38
ಟೀ, ಕಾಫಿಗೆ ಟಾಟಾ ಹೇಳಿ
ಟೀ, ಕಾಫಿ ಕುಡಿಯುವವರು ಬೇಸಿಗೆಯಲ್ಲಿ ಕೂಡ ಅವುಗಳನ್ನು ಬಿಡುವುದಿಲ್ಲ. ಒಂದು ಎರಡು ಕಪ್ ಗಳವರೆಗೆ ಓಕೆ, ಆದರೆ ಕೆಲವರು ದಿನದಲ್ಲಿ ಹಲವು ಬಾರಿ ಟಿ ಅಥವಾ ಕಾಫಿ ಕುಡಿಯುತ್ತಿರುತ್ತಾರೆ. ಟೀ, ಕಾಫಿ ಬಿಸಿ ಸ್ವಭಾವವನ್ನು ಹೊಂದಿರುತ್ತವೆ. ಇದು ದೇಹದ ಬಿಸಿಯನ್ನು ಹೆಚ್ಚಿಸುತ್ತದೆ. ಟೀ, ಕಾಫಿಗೆ ಬದಲಾಗಿ ನಿಂಬೆರಸ, ಮಜ್ಜಿಗೆ ಕುಡಿಯಿರಿ. ಬಿಸಿ ಮಾಡಿದರೆ ಜೀರ್ಣ ಸಮಸ್ಯೆಗಳು ಬರುತ್ತವೆ.
48
ಉಪ್ಪಿನಕಾಯಿಗಳಿಗೆ ದೂರವಿರಬೇಕು
ಬೇಸಿಗೆಯಲ್ಲಿ ಉಪ್ಪಿನಕಾಯಿ ತಿನ್ನಬಾರದು. ಇವುಗಳನ್ನು ತಿಂದರೆ ದೇಹದಲ್ಲಿ ನೀರು ನಿಂತು, ಊತ ಬರುತ್ತದೆ. ಅಷ್ಟೇ ಅಲ್ಲ, ಅಜೀರ್ಣ ಕೂಡ ಬರುತ್ತದೆ. ಅಲ್ಸರ್ ಅನ್ನು ಇದು ಮತ್ತಷ್ಟು ತೀವ್ರಗೊಳಿಸುತ್ತದೆ.
58
ಖಾರವಾದ ಆಹಾರ
ಖಾರ ತಿನ್ನಬಾರದು
ಬೇಸಿಗೆಯಲ್ಲಿ ಖಾರ ತಿನ್ನಬಾರದು. ಖಾರದಲ್ಲಿ ಹೆಚ್ಚಾಗಿರುವ ಕ್ಯಾಪ್ಸೈಸಿನ್ ದೇಹದಲ್ಲಿ ಪಿತ್ತ ದೋಷವನ್ನು ಹೆಚ್ಚಿಸುತ್ತದೆ. ಇದರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ. ಬಹಳಷ್ಟು ಬೆವರು ಬರುತ್ತದೆ, ಚರ್ಮದ ಮೇಲೆ ಆರೋಗ್ಯ ಸಮಸ್ಯಗಳು ಕಾಣಿಸಿಕೊಳ್ಳಲಿದೆ.
68
ಜಂಕ್ ಫುಡ್, ಕರಿದ ತಿಂಡಿಗಳು ಬೇಡ
ಜಂಕ್ ಫುಡ್, ಕರಿದ ತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಳಿಗಾಲದಲ್ಲಿ ಅನಿವಾರ್ಯ ಎಂದರೆ ತಿನ್ನಬಹುದು, ಆದರೆ ಬೇಸಿಗೆಯಲ್ಲಿ ಇವು ನಿಮ್ಮನ್ನು ಅನಾರೋಗ್ಯಕ್ಕೆ ಗುರಿಮಾಡುತ್ತವೆ. ಸಮೋಸಾ, ಬರ್ಗರ್, ಪಿಜ್ಜಾ, ಫ್ರೆಂಚ್ ಫ್ರೈಸ್ ನಂತಹವು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. ಇವುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ.
78
ಗ್ರಿಲ್ಡ್ ಮಾಂಸ ಬೇಡ
ಬೇಸಿಗೆಯಲ್ಲಿ ಗ್ರಿಲ್ಡ್ ಮಾಂಸ ತಿನ್ನಬಾರದು. ಹೊರಗಡೆ ಉಷ್ಣಾಂಶ ಹೆಚ್ಚಾಗಿರುತ್ತದೆ. ಗ್ರಿಲ್ಡ್ ಮಾಂಸ ತಿಂದರೆ ದೇಹದ ಉಷ್ಣೋಗ್ರತೆ ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದ ನಿರ್ಜಲೀಕರಣಕ್ಕೆ ಒಳಗಾಗುತ್ತೀರಿ.
88
ಡಾರ್ಕ್ ಚಾಕೊಲೇಟ್
ಡಾರ್ಕ್ ಚಾಕೊಲೇಟ್ ಬೇಡ
ಬೇಸಿಗೆಯಲ್ಲಿ ಡಾರ್ಕ್ ಚಾಕೊಲೇಟ್ ತಿನ್ನಬಾರದೆಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಇದರಲ್ಲಿ ಕೆಫೀನ್ ಹೆಚ್ಚಾಗಿರುತ್ತದೆ. ಹೆಚ್ಚಾಗಿ ತಿಂದರೆ ಭೇದಿ, ಕಿರಿಕಿರಿ, ಹೃದಯದ ಬಡಿತದಂತಹವು ಬರುತ್ತವೆ. ನಿರ್ಜಲೀಕರಣಕ್ಕೆ ಕೂಡ ಒಳಗಾಗುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.