Published : Feb 25, 2025, 12:48 PM ISTUpdated : Feb 25, 2025, 12:52 PM IST
ಫುಡ್ ಡೆಸ್ಕ್: ಇದು ಮಾವಿನ ಹಣ್ಣಿನ ಸೀಸನ್. ಆದ್ರೆ ಮಾರ್ಕೆಟ್ನಲ್ಲಿ ಅಸಲಿ ಮಾವಿನ ಹಣ್ಣಿನ ಜೊತೆ ನಕಲಿ ಹಣ್ಣುಗಳು ಕೂಡಾ ಜಾಸ್ತಿಯಾಗಿವೆ. ಕೆಮಿಕಲ್ ಇರುವ ಹಣ್ಣುಗಳನ್ನು ತಂದು ತಿಂದು ಆರೋಗ್ಯ ಹಾಳು ಮಾಡ್ಕೋಬೇಡಿ. ಈ ಟ್ರಿಕ್ಸ್ ಬಳಸಿ ಅಸಲಿ, ನಕಲಿ ಹಣ್ಣುಗಳನ್ನು ಗುರುತಿಸಿ...
ಮಾವಿನ ಹಣ್ಣು ಬೇಗ ಬೆಳೆಯೋಕೆ ವಿಷಯುಕ್ತ ರಾಸಾಯನಿಕ ಬಳಸಿ ಬೆಳೆಯುತ್ತಾರೆ. ಇದರಿಂದ 1-2 ದಿನದಲ್ಲೇ ಹಣ್ಣಾಗುತ್ತೆ. ಇಂಥ ಹಣ್ಣುಗಳು ನೋಡಲು ಆಕರ್ಷಕವಾಗಿ ಬಾಯಲ್ಲಿ ನೀರೂರಿಸುವಂತೆ ಇರುತ್ತವೆ ಮನೆಗೆ ತಂದು ತಿಂದರೆ ಆರೋಗ್ಯ ಹಾಳು, ಹಣವೂ ಹಾಳಾಗುತ್ತೆ.
28
ಅಸಲಿ ಮಾವಿನ ಹಣ್ಣನ್ನು ಹೇಗೆ ಚೆಕ್ ಮಾಡೋದು?
ಅಸಲಿ ಮಾವಿನ ಹಣ್ಣು ಚೆಕ್ ಮಾಡೋಕೆ ಅದರ ಸೈಜ್ ನೋಡಿ. ತುಂಬಾ ದೊಡ್ಡದಾಗೂ ಇರಬಾರ್ದು, ತುಂಬಾ ಚಿಕ್ಕದಾಗೂ ಇರಬಾರ್ದು, ನ್ಯಾಚುರಲ್ ಆಗಿ ಸಿಗುವ ಹಣ್ಣುಗಳ ವಾಸನೆ, ಬಣ್ಣ, ಗಾತ್ರ ಬೇರೆಯದೇ ಆಗಿರುತ್ತದೆ.
38
ನಕಲಿ ಮಾವಿನ ಹಣ್ಣು ಹೇಗಿರುತ್ತೆ?
ನಕಲಿ ಮಾವಿನ ಹಣ್ಣು ಅಸಲಿ ಹಣ್ಣಿಗಿಂತ ಚಿಕ್ಕದಾಗಿರುತ್ತೆ. ಅದರಿಂದ ರಸ ಸೋರುತ್ತಿರುತ್ತೆ ಇಂಥ ಹಣ್ಣುಗಳ ಖರೀಸುವಾಗ ಎಚ್ಚರವಾಗಿರಬೇಕು.
48
ನೀರಿನಿಂದ ಮಾವಿನ ಹಣ್ಣು ಪರೀಕ್ಷೆ
ಅಸಲಿ ಮಾವಿನ ಹಣ್ಣು ಪರೀಕ್ಷೆ ಮಾಡೋಕೆ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತುಂಬಿ ಬಳಿಕ ಆ ನೀರಲ್ಲಿ ಮಾವಿನ ಹಣ್ಣುಗಳು ಹಾಕಿ.
58
ಮಾವಿನ ಹಣ್ಣು ಅಸಲಿಯೋ ನಕಲಿಯೋ ಅಂತ ಹೀಗೆ ಗುರುತಿಸಿ
ಮಾವಿನ ಹಣ್ಣು ಕಟ್ ಮಾಡಿದ್ಮೇಲೆ ಅದರಿಂದ ರಸ ಬರಲಿಲ್ಲ ಅಂದ್ರೆ ಅದು ಕೆಮಿಕಲ್ ಹಾಕಿ ಹಣ್ಣು ಮಾಡಿರೋ ಹಣ್ಣು. ಎಂಬುದು ತಿಳಿಯಿರಿ.
68
ಕಲರ್ನಿಂದ ಮಾವಿನ ಹಣ್ಣು ಗುರುತಿಸಿ
ಅಸಲಿ ಮಾವಿನ ಹಣ್ಣು ಗುರುತಿಸೋಕೆ ಅದರ ಕಲರ್ ಗಮನಿಸಿ. ಕೆಮಿಕಲ್ ಹಾಕಿ ಹಣ್ಣು ಮಾಡಿದ್ರೆ ಹಸಿರು ಕಲರ್ನ ಚುಕ್ಕೆಗಳು ಇರುತ್ತವೆ.
78
ಮಾವಿನ ಕಾಯಿಯಿಂದ ಪತ್ತೆ ಮಾಡಿ
ಶುದ್ಧ ಮಾವಿನ ಕಾಯಿ ಹಸಿರಾಗಿರುತ್ತೆ. ನಕಲಿ ಮಾವಿನ ಕಾಯಿ ಒಣಗಿ ಕಂದು ಬಣ್ಣದಲ್ಲಿ ಇರುತ್ತೆ. ಇದನ್ನು ಗಮನಿಸಿ, ನೀವು ಹಣ್ಣುಗಳ ಬೆಳೆಗಾರರಾಗಿದ್ದಾರೆ, ಹೆಚ್ಚು ಹಣ್ಣು ಸೇವನೆ ಮಾಡಿದ್ದರೆ ಅದನ್ನು ನೋಡಿಯೇ ನಕಲಿಯೋ, ಅಸಲಿಯೋ ಎಂದು ಗುರುತಿಸಬಹುದು.
88
ವಾಸನೆ ನೋಡಿ ಪತ್ತೆ ಮಾಡಿ
ಅಸಲಿ ಮಾವಿನ ಹಣ್ಣು ಸಿಹಿ ಹಾಗೂ ಹಣ್ಣಿನ ವಾಸನೆ ಇರುತ್ತೆ. ನಕಲಿ ಹಣ್ಣಿಗೆ ಯಾವುದೇ ವಾಸನೆ ಇರೋದಿಲ್ಲ. ಮಾರುಕಟ್ಟೆ ಹೋಗುವ ಮುನ್ನ ಇದರ ಬಗ್ಗೆ ತಿಳಿದಿರಬೇಕು. ಕಡಿಮೆ ಬೆಲೆಗೆ ಸಿಗುತ್ತೆ ಅಂತಾ ನಕಲಿ ಹಣ್ಣುಗಳನ್ನು ಖರೀದೀಸಬೇಡಿ.