ಉತ್ತರ ಭಾರತದಲ್ಲಿ ಖ್ಯಾತಿ ಗಳಿಸಿದ ದಕ್ಷಿಣ ಭಾರತದ ಕ್ಯಾಲೋರಿರಹಿತ ತಿಂಡಿಗಳು; ಇದು ನಮ್ಮ ಕರ್ನಾಟಕ ಸ್ಪೆಷಲ್!

Published : Jan 08, 2025, 04:28 PM IST

ದಕ್ಷಿಣ ಭಾರತದ ತಿಂಡಿಗಳಾದ ಇಡ್ಲಿ, ದೋಸೆ, ಉತ್ತಪ್ಪಂ, ಪೊಂಗಲ್, ರಾಗಿದೋಸೆ, ಉಪ್ಪಿಟ್ಟು, ಪಡ್ಡು ಮತ್ತು ಅಕ್ಕಿರೊಟ್ಟಿ ಕ್ಯಾಲೋರಿ ಕಡಿಮೆ ಇರುವ ಆರೋಗ್ಯಕರ ಆಯ್ಕೆಗಳಾಗಿವೆ. ಈ ತಿಂಡಿಗಳು ವಿವಿಧ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆ ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೂಕ್ತವಾಗಿವೆ.

PREV
19
ಉತ್ತರ ಭಾರತದಲ್ಲಿ ಖ್ಯಾತಿ ಗಳಿಸಿದ  ದಕ್ಷಿಣ ಭಾರತದ ಕ್ಯಾಲೋರಿರಹಿತ ತಿಂಡಿಗಳು; ಇದು ನಮ್ಮ ಕರ್ನಾಟಕ ಸ್ಪೆಷಲ್!

ಉತ್ತರ ಭಾರತೀಯರಿಗೆ ಕ್ಯಾಲೋರಿರಹಿತ ತಿಂಡಿಗಳಾದ ಇಡ್ಲಿ, ದೋಸೆ, ಉತ್ತಪ್ಪಂ ಮತ್ತು ಪೊಂಗಲ್‌ನಂತಹ ಆರೋಗ್ಯಕರ  ದಕ್ಷಿಣ ಭಾರತದ ಉಪಹಾರಗಳನ್ನು ಸೇವಿಸಿ ಎಂದು ಸಲಹೆ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲಿ ಕರ್ನಾಟಕದ ತಿಂಡಿ ಯಾವುದಿದೆ ನೋಡಿ..

29

ಉತ್ತಪ್ಪಂನಲ್ಲಿ ಸುಮಾರು 120 ಕ್ಯಾಲೋರಿಗಳಿವೆ. ಉತ್ತಪ್ಪಂನಲ್ಲಿ ತರಕಾರಿಗಳು ಮತ್ತು ನಾರಿನಂಶ ಹೆಚ್ಚಾಗಿರುತ್ತದೆ. ಇದನ್ನು ಸಾಂಬಾರ್ ಮತ್ತು ಕಡಿಮೆ ಕೊಬ್ಬಿನ ಚಟ್ನಿಯೊಂದಿಗೆ ಸೇವಿಸಿ.

39

ಒಂದು ಬಟ್ಟಲು ಪೊಂಗಲ್‌ನಲ್ಲಿ ಸುಮಾರು 200-250 ಕ್ಯಾಲೋರಿಗಳಿವೆ. ಅಕ್ಕಿ ಮತ್ತು ಹೆಸರುಬೇಳೆಯಿಂದ ತಯಾರಿಸಿದ ಈ ಖಾದ್ಯವು ಹಗುರ ಮತ್ತು ಪೌಷ್ಟಿಕಾಂಶದಿಂದ ಕೂಡಿದೆ. ನೀವು ಇದನ್ನು ಪುದೀನ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಸೇವಿಸಬಹುದು.

49

ಒಂದು ದೋಸೆಯಲ್ಲಿ ಸುಮಾರು 120 ಕ್ಯಾಲೋರಿಗಳಿವೆ. ಗರಿಗರಿಯಾದ ದೋಸೆ ಗ್ಲುಟನ್-ಮುಕ್ತ ಮತ್ತು ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ನೀವು ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ಸೇವಿಸಬಹುದು.

59

ಕರ್ನಾಟಕದ ಪ್ರಸಿದ್ಧ ತಿಂಡಿಗಳಲ್ಲಿ ಒಂದಾಗಿರುವ ರಾಗಿದೋಸೆಯೂ ಕ್ಯಾಲೋರಿರಹಿತ ತಿಂಡಿಯಾಗಿದೆ. ಒಂದು ರಾಗಿ ದೋಸೆಯಲ್ಲಿ ಸುಮಾರು 100 ಕ್ಯಾಲೋರಿಗಳಿವೆ. ರಾಗಿ ಗ್ಲುಟನ್-ಮುಕ್ತ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಇದನ್ನು ಕಡಿಮೆ ಕೊಬ್ಬಿನ ಚಟ್ನಿಯೊಂದಿಗೆ ಸೇವಿಸಿ.

69

ಉಪ್ಪಿಟ್ಟು/ಉಪ್ಮಾ: 1 ಬಟ್ಟಲು ಉಪ್ಮಾದಲ್ಲಿ ಸುಮಾರು 200 ಕ್ಯಾಲೋರಿಗಳಿವೆ. ರವೆ, ತರಕಾರಿಗಳು ಮತ್ತು ಮಸಾಲೆಗಳಿಂದ ತಯಾರಿಸಿದ ಉಪ್ಮಾ ಆರೋಗ್ಯಕರ ನಾರಿನಂಶ ಮತ್ತು ಶಕ್ತಿಯನ್ನು ನೀಡುತ್ತದೆ. ನೀವು ಇದ ಚಟ್ನಿ, ಚಟ್ನಿಪುಡಿ ಹಾಕಿಕೊಂಡು ಸೇವಿಸಬಹುದು.

79

ದಕ್ಷಿಣ ಭಾರತದ ಪ್ರಮುಖ ತಿಂಡಿಯಲ್ಲಿ ಇಡ್ಲಿ ಪ್ರಮುಖ ಸ್ಥಾನದಲ್ಲಿದೆ. ಒಂದು ಇಡ್ಲಿಯಲ್ಲಿ ಸುಮಾರು 39 ಕ್ಯಾಲೋರಿಗಳಿವೆ. ಇದು ಆವಿಯಲ್ಲಿ ಬೇಯಿಸಿದ್ದು, ಕಡಿಮೆ ಎಣ್ಣೆಯನ್ನು ಹೊಂದಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಬಹುದು.

89

ಪಡ್ಡು/ಅಪ್ಪೆ/ಗುಂಡುಪಂಗಲ:  ಪಡ್ಡು ಅಥವಾ ಅಪ್ಪೆಯನ್ನು ಹಲವು ವಿಧಗಳಲ್ಲಿ ತಯಾರಿಸಬಹುದು, ಉದಾಹರಣೆಗೆ ಬೇಳೆಯಿಂದ, ರವೆಯಿಂದ ಅಥವಾ ಅಕ್ಕಿ ಹಿಟ್ಟಿನಿಂದ. ನೀವು ಪಡ್ಡು ಅನ್ನು ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಸೇವಿಸುವ ಮೂಲಕ ನಿಮ್ಮ ಆಹಾರ ಕ್ಯಾಲೋರಿ ಸೇವನೆ ಕಡಿಮೆ ಮಾಡಬಹುದು. ಇದು ಕರ್ನಾಟಕದ ಖಾದ್ಯವೆಂದೇ ಹೇಳಬಹುದು.

99

ಅಕ್ಕಿರೊಟ್ಟಿ: ಕಡಿಮೆ ಎಣ್ಣೆಯನ್ನು ಬಳಸಿ ಮಾಡುವಂತಹ ದಕ್ಷಿಣ ಭಾರತದ ತಿಂಡಿಗಳಲ್ಲಿ ಅಕ್ಕಿರೊಟ್ಟಿ ಸಹ ಒಂದಾಗಿದೆ. ಇದರಲ್ಲಿ ಸಬ್ಬಸಿಗೆ ಸೊಪ್ಪು ಹಾಗೂ ಕ್ಯಾರೆಟ್ ತುರಿ ಹಾಕಿ ಮಾಡಲಾಗುತ್ತದೆ,. ಇದಯ ಕಡಿಮೆ ಕ್ಯಾಲರಿ ಹೊಂದಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ. 

click me!

Recommended Stories