8. ಗೋವಾ
ಗೋವಾದಲ್ಲಿ 93.8% ಜನರು ಮಾಂಸಾಹಾರ ಸೇವಿಸುತ್ತಾರೆ. ಗೋವಾ ಮೀನು ಕರಿ ಅಚ್ಚುಮೆಚ್ಚು. ಚಿಕನ್, ಹಂದಿ ಮಾಂಸವನ್ನೂ ಇಷ್ಟಪಡುತ್ತಾರೆ.
9.ಜಾರ್ಖಂಡ್
ಜಾರ್ಖಂಡ್‌ನಲ್ಲಿ 97% ಜನರು ಮಾಂಸಾಹಾರ ಸೇವಿಸುತ್ತಾರೆ. ಮೀನು ಮತ್ತು ಚಿಕನ್ ಅವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
10. ತೆಲಂಗಾಣ
ತೆಲಂಗಾಣದಲ್ಲಿ ಸುಮಾರು 97% ಜನರು ಮಾಂಸಾಹಾರಿಗಳು. ಚಿಕನ್, ಎಮ್ಮೆ ಮಾಂಸ, ಮಟನ್, ಮೀನು ಇಷ್ಟಪಡುತ್ತಾರೆ.
ಕರ್ನಾಟಕ
ಇನ್ನು ಕರ್ನಾಟಕದಲ್ಲಿ ಮಾಂಸಾಹಾರ ಸೇವಿಸುವವರ ಪ್ರಮಾಣ ಹೆಚ್ಚುತ್ತಲೇ ಇದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಅಧ್ಯಯನದ ಪ್ರಕಾರ, ಸುಮಾರು 80% ಕನ್ನಡಿಗರು ಮಾಂಸ ತಿನ್ನುತ್ತಾರೆ ಎಂದು ಹೇಳಿದೆ.