Children Health Tips: ಉತ್ತಮ ಆರೋಗ್ಯಕ್ಕೆ ಮಗುವಿಗೆ ನೀಡಿ ಬಾಳೆಹಣ್ಣಿನ ಸೆರೆಲಾಕ್

First Published Sep 24, 2022, 4:41 PM IST

ಬಾಳೆಹಣ್ಣು ವಯಸ್ಕರಿಗೆ ಮಾತ್ರವಲ್ಲದೆ ಮಕ್ಕಳಿಗೂ ತುಂಬಾ ಇಷ್ಟವಾಗುವ ಮತ್ತು ಆರೋಗ್ಯಕ್ಕೆ ಬೆಸ್ಟ್ ಆಗಿರುವ ಒಂದು ಹಣ್ಣಾಗಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇದನ್ನು ಆರಾಮವಾಗಿ ಸೇವಿಸಬಹುದು. ಅಂಬೆಗಾಲಿಡುವ ಮಗುವಿಗೆ ಮಾಗಿದ ಬಾಳೆಹಣ್ಣುಗಳನ್ನು ತಿನ್ನಿಸಬಹುದು, ಆದರೆ ಇದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಬಾಳೆಹಣ್ಣನ್ನು ಮ್ಯಾಶ್ ಮಾಡಿ ಕೊಡಲಾಗುತ್ತೆ, ಅದರ ಪ್ಯೂರಿಯನ್ನು ತಯಾರಿಸುವ ಮೂಲಕ ನೀಡಲಾಗುತ್ತೆ ಅಥವಾ ಸೆರೆಲೇಕ್ ಆಗಿ ನೀಡಲಾಗುತ್ತೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಬಾಳೆಹಣ್ಣಿನಲ್ಲಿ(Banana) ಫೈಬರ್ ಸಮೃದ್ಧವಾಗಿದೆ, ಇದು ದೀರ್ಘಾವಧಿಯಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನ ನೀಡುತ್ತೆ. ಮಾಗಿದ ಬಾಳೆಹಣ್ಣಿನ ಮೃದುವಾದ ತಿರುಳು ಸುಮಾರು 75% ನಷ್ಟು ನೀರನ್ನು ಹೊಂದಿರುತ್ತೆ, ಇದು ಜೀರ್ಣಿಸಿಕೊಳ್ಳಲು ಸುಲಭವಾಗುತ್ತೆ ಮತ್ತು ಮಗುವಿನ ಹೊಟ್ಟೆಗೂ ಇದು ಆರಾಮದಾಯಕ ಆಹಾರವಾಗಿದೆ.

ಮಾಗಿದ ಬಾಳೆಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಗಳು(Carbohydrate) ಸಮೃದ್ಧವಾಗಿವೆ, ಇದು ಮಗುವಿನ ಶಕ್ತಿಯ ಅಗತ್ಯಗಳನ್ನು ಪೂರೈಸುತ್ತೆ. ಇದು ಫೋಲೇಟ್ ಅನ್ನು ಸಹ ಹೊಂದಿರುತ್ತೆ, ಅಲ್ಲದೇ ಇದು ಮೆದುಳಿನ ಶಕ್ತಿ ಮತ್ತು ಪೊಟ್ಯಾಸಿಯಮ್ ಅನ್ನು ಸುಧಾರಿಸುತ್ತೆ, ಇದು ದೇಹದ ಒಟ್ಟಾರೆ ಆರೋಗ್ಯಕರ ಬೆಳವಣಿಗೆಗೆ ಮುಖ್ಯವಾಗಿದೆ.  

ಬಾಳೆಹಣ್ಣು ಕ್ಯಾಲ್ಸಿಯಂ(Calcium), ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ ಅನ್ನು ಸಹ ಹೊಂದಿರುತ್ತೆ. ಬಾಳೆಹಣ್ಣಿನಲ್ಲಿರುವ ಕಬ್ಬಿಣದ ಪ್ರಮಾಣವು ರಕ್ತಹೀನತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತೆ ಮತ್ತು ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತೆ. ಬಾಳೆಹಣ್ಣಿನ ಸೆರೆಲಾಕ್ ತಯಾರಿಸುವ ಮೂಲಕ ನೀವು ನಿಮ್ಮ ಮಗುವಿಗೆ ನೀಡಬಹುದು.  ಬಾಳೆಹಣ್ಣಿನ ಸೆರೆಲಾಕ್  ಹೇಗೆ ತಯಾರಿಸುವುದು ನೋಡೋಣ.

ಬಾಳೆಹಣ್ಣಿನ ಸೆರೆಲಾಕ್ (Cerelac)ತಯಾರಿಸಲು ಏನೇನು ಬೇಕು?
ಮಗುವಿಗೆ ಸೆರೆಲಾಕ್ ತಯಾರಿಸಲು, ನಿಮಗೆ 3 ಟೇಬಲ್ ಚಮಚ ಮನೆಯಲ್ಲಿ ತಯಾರಿಸಿದ ಸೆರೆಲಾಕ್, 1/2 ಬಾಳೆಹಣ್ಣು (ಸಿಪ್ಪೆ ಸುಲಿದು ಮತ್ತು ಮ್ಯಾಶ್ ಮಾಡಿದ), 1 ಟೀಸ್ಪೂನ್ ಒಣದ್ರಾಕ್ಷಿ ಪ್ಯೂರಿ ಮತ್ತು 1 ಕಪ್ ನೀರು ಬೇಕು. ಇದನ್ನು ತಯಾರಿಸುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ…

ಸೆರೆಲಾಕ್ ತಯಾರಿಸೋದು ಹೇಗೆ?
ಮಿಕ್ಸಿಂಗ್ ಬೌಲ್ ನಲ್ಲಿ, ಮನೆಯಲ್ಲಿ ತಯಾರಿಸಿದ ಸೆರೆಲಾಕ್, ಒಣದ್ರಾಕ್ಷಿ(Dry grapes) ಪ್ಯೂರಿ ಮತ್ತು ನೀರನ್ನು ಬೆರೆಸಿ ನಯವಾದ ಮತ್ತು ಉಂಡೆರಹಿತ ಮಿಶ್ರಣವನ್ನು ತಯಾರಿಸಿ.
ಈ ಮಿಶ್ರಣವನ್ನು ಒಂದು ಪಾತ್ರೆಗೆ ಸುರಿಯಿರಿ ಮತ್ತು ಅದು ದಪ್ಪಗಾಗಲು ಪ್ರಾರಂಭಿಸುವವರೆಗೆ ಹತ್ತು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಗ್ಯಾಸ್ ಆಫ್ ಮಾಡಿ ಮತ್ತು ಮಿಶ್ರಣವನ್ನು ತಣ್ಣಗಾಗಲು ಬಿಡಿ.

ಮಿಶ್ರಣಕ್ಕೆ ರುಬ್ಬಿದ ಬಾಳೆಹಣ್ಣನ್ನು ಸೇರಿಸಿ. ಸೆರೆಲಾಕ್ ತಿನ್ನಲು ಸಿದ್ಧವಾಗುತ್ತೆ 
ಮಕ್ಕಳಿಗಾಗಿ ಬಣ್ಣದ ಸೆರೆಲಾಕ್ ತಯಾರಿಸಲು ನೀವು ಈ ಪಾಕವಿಧಾನಕ್ಕೆ ಬೆರ್ರಿ(Berry), ಕಿವಿ, ಸೇಬು, ಪಿಯರ್ ಮತ್ತು ಗೆಣಸಿನಂತಹ ವಿವಿಧ ಸೀಸನಲ್ ಹಣ್ಣು, ತರಕಾರಿಗಳನ್ನು ಸೇರಿಸಬಹುದು. ಇದು ಆಹಾರದ ರುಚಿ ಹೆಚ್ಚಿಸುತ್ತೆ.

ಯಾವ ಬಾಳೆಹಣ್ಣನ್ನು ಆಯ್ಕೆ ಮಾಡಬೇಕು
ಮಗುವಿಗೆ ಯಾವಾಗಲೂ ಮಾಗಿದ ಬಾಳೆಹಣ್ಣನ್ನು ನೀಡಿ ಏಕೆಂದರೆ ಅದು ಸುಲಭವಾಗಿ ಜೀರ್ಣವಾಗುತ್ತೆ(Digest) ಮತ್ತು ಹಸಿ ಹಸಿರು ಬಾಳೆಹಣ್ಣುಗಳಿಗಿಂತ ಹೆಚ್ಚು ಸಿಹಿ ಮತ್ತು ಹೆಚ್ಚು ರುಚಿಕರವಾಗಿರುತ್ತೆ . ನೀವು ಕಚ್ಚಾ ಬಾಳೆಹಣ್ಣುಗಳನ್ನು ಖರೀದಿಸಿದರೆ, ಅವುಗಳನ್ನು ಹಣ್ಣಾಗುವವರೆಗೆ ಸಂಗ್ರಹಿಸಿ ಮತ್ತು ಕೋಣೆಯ ತಾಪಮಾನದಲ್ಲಿ ಅವುಗಳನ್ನು ಹಳದಿ ಬಣ್ಣಕ್ಕೆ ತಿರುಗಲು ಬಿಡಿ. ಇವು ಬೇಗನೆ ಹಣ್ಣಾಗಲು, ಮಾಗಿದ ಸೇಬಿನೊಂದಿಗೆ ಬಾಳೆಹಣ್ಣನ್ನು ಪೇಪರ್ ಕವರ್ನಲ್ಲಿ ಸಂಗ್ರಹಿಸಿ.

ಬಾಳೆಹಣ್ಣಿನ ಪ್ಯೂರಿ, ಸೆರೆಲಾಕ್ ಅಥವಾ ಇನ್ನಾವುದೇ ಪಾಕವಿಧಾನಕ್ಕೆ ನೀವು ಎದೆ ಹಾಲು(Breast milk) ಅಥವಾ ಫಾರ್ಮುಲಾ ಹಾಲನ್ನು ಸೇರಿಸಬಹುದು. ಇದರೊಂದಿಗೆ, ಮಗುವು ಆಹಾರವನ್ನು ಸುಲಭವಾಗಿ ನುಂಗುತ್ತೆ. ನೀವು ಮಗುವಿಗೆ ಬಾಳೆಹಣ್ಣಿನ ಪ್ಯೂರಿಯನ್ನು ಸಹ ತಯಾರಿಸಬಹುದು.
 

ನಿಮ್ಮ ಮಗುವಿಗೆ ಬಾಳೆಹಣ್ಣನ್ನು ಏಕೆ ನೀಡಬೇಕು? 
ಬಾಳೆಹಣ್ಣುಗಳು ಪೊಟ್ಯಾಸಿಯಮ್ನಂತಹ(Potassium) ಎಲೆಕ್ಟ್ರೋಲೈಟ್ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತೆ, ಇದು ಅತಿಸಾರ ಅಥವಾ ವಾಂತಿಯ ಸಮಯದಲ್ಲಿ ದೇಹದಲ್ಲಿ ಕಡಿಮೆಯಾಗುತ್ತೆ ಮತ್ತು ಕರುಳನ್ನು ಗುಣಪಡಿಸಲು ಸಹಾಯ ಮಾಡುತ್ತೆ. ಒಟ್ಟಲ್ಲಿ ಮಕ್ಕಳ ಉತ್ತಮ ಆರೋಗ್ಯಕ್ಕೆ ಇದು ಸಹಕಾರಿಯಾಗಿದೆ.

click me!