ಆರೋಗ್ಯಕರ ಜೀವನವನ್ನು ನಡೆಸಲು ತಜ್ಞರು ಪ್ರತಿದಿನ ಹಣ್ಣು ಮತ್ತು ತರಕಾರಿ ಜ್ಯೂಸ್ ಕುಡಿಯುವುದು ಒಳ್ಳೆಯದು ಅಂತಾರೆ. ಇದರೊಂದಿಗೆ, ಕರಿದ ವಸ್ತುಗಳು ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಲೈಫ್ ಸ್ಟೈಲ್ (healthy lifestyle) ಹೊಂದುವುದು ಸಹ ಮುಖ್ಯವಾಗಿದೆ. ಈ ಮೂರು ರೀತಿಯ ಜ್ಯೂಸ್ ಗಳು ಮತ್ತು ಅವುಗಳ ಆರೋಗ್ಯ ಪ್ರಯೋಜನಗಳು ನಿಮ್ಮನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ, ಆದ್ದರಿಂದ ಅವುಗಳ ಬಗ್ಗೆ ತಿಳಿಯೋಣ. 0
ತುಳಸಿ ರಸವನ್ನು (tulsi juice) ದೈನಂದಿನ ಆಹಾರದಲ್ಲಿ ಸೇರಿಸಲು ತಜ್ಞರು ಸಲಹೆ ನೀಡುತ್ತಾರೆ. ಅಸ್ತಮಾ, ಬ್ರಾಂಕೈಟಿಸ್, ಶೀತ ಕೆಮ್ಮು, ಸೈನಸ್ ಸಮಸ್ಯೆ, ಅಸಿಡಿಟಿ ಮತ್ತು ಜ್ವರದಂತಹ ವಿವಿಧ ಕಾಯಿಲೆಗಳಿಗೆ ತುಳಸಿಯು ಪರಿಹಾರವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದನ್ನು ನೀವು ನಿಯಮಿತವಾಗಿ ಸೇವಿಸೋದು ಉತ್ತಮ.
ಕಪ್ಪು ತುಳಸಿ ಎಲೆಗಳು ಹಸಿರು ತುಳಸಿಗಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿವೆ. ಇವುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು. ಕೆಮ್ಮು, ಶೀತ ಇದ್ದರೆ ನೀವು ಕಪ್ಪು ತುಳಸಿ ಎಲೆಯ ರಸಕ್ಕೆ, ಶುಂಠಿ ರಸ ಸೇವಿಸಿದ್ರೆ ಅದರಿಂದ ಸಮಸ್ಯೆ ಬೇಗನೆ ನಿವಾರಣೆಯಾಗುತ್ತೆ.
ಕಲ್ಲಂಗಡಿ ಹಣ್ಣಿನ ರಸದಲ್ಲಿ (watermelon juice) ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ದೇಹದಲ್ಲಿ ಸರಿಯಾದ ನೀರಿನ ಅಂಶ ಕೂಡಿರುವಂತೆ ನೋಡಿಕೊಳ್ಳುತ್ತೆ. ಡೀ ಹೈಡ್ರೇಶನ್ ಸಮಸ್ಯೆಯನ್ನು ಸಹ ಇದು ನಿವಾರಿಸುತ್ತೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
ಡೀ ಹೈಡ್ರೆಶನ್ ಸಂದರ್ಭದಲ್ಲಿ, ಉಪ್ಪು, ಸಕ್ಕರೆ ಮತ್ತು ಮೈದಾ ಸೇವನೆಯನ್ನು ಕಡಿಮೆ ಮಾಡುವುದು ತುಂಬಾನೆ ಉತ್ತಮ. ಯಾಕೆಂದರೆ ಈ ಆಹಾರಗಳು ದೇಹದಲ್ಲಿ ನೀರಿನ ಅಂಶವನ್ನು ಕಡಿಮೆ ಮಾಡುತ್ತೆ. ಇದರ ಬದಲಾಗಿ ನೀವು ದೈನಂದಿನ ಆಹಾರದಲ್ಲಿ ಕಲ್ಲಂಗಡಿ ಜ್ಯೂಸ್ ಸೇರಿಸುವುದು ಒಳ್ಳೆಯದು.
ಕ್ಯಾರೆಟ್ ಜ್ಯೂಸ್ ಕ್ಯಾಲ್ಸಿಯಂ, ವಿಟಮಿನ್ ಎ, ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ ಮತ್ತು ವಿಟಮಿನ್ ಕೆ ಗಳಿಂದ ತುಂಬಿದೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಖಾಲಿ ಹೊಟ್ಟೆಗೆ ಬೆಳಗ್ಗೆ ಕ್ಯಾರೆಟ್ ಜ್ಯೂಸ್ ಸೇವಿಸೋದು ಉತ್ತಮ.
ಕ್ಯಾರೆಟ್ ರಸವು (carrot juice) ದೇಹಕ್ಕೆ ಪೋಷಕಾಂಶಗಳ ಸರಿಯಾದ ಮಿಶ್ರಣವನ್ನು ಒದಗಿಸುತ್ತದೆ ಮತ್ತು ಅದನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಉತ್ತಮ ತ್ವಚೆಯನ್ನು ಸಹ ನೀಡುತ್ತೆ, ಅಲ್ಲದೇ ಕಣ್ಣುಗಳ ಆರೋಗ್ಯವನ್ನು ಕಾಪಾಡಲು ಸಹ ಕ್ಯಾರೆಟ್ ಜ್ಯೂಸ್ ಸಹಕಾರಿಯಾಗಿದೆದ್.
ಕ್ಯಾರೆಟ್ ರಸವು ಅನೇಕ ಪ್ರಯೋಜನಗಳನ್ನು ಹೊಂದಿದೆ, ಇದು ನರಮಂಡಲ, ಚರ್ಮ, ಕೂದಲು ಮತ್ತು ರಕ್ತದ ಹರಿವನ್ನು (blood circulation) ಸುಧಾರಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಗೆಡ್ಡೆಗಳ ವಿರುದ್ಧ ಹೋರಾಡಲು ಮತ್ತು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.