ಆಹಾರದ ರುಚಿ ಹೆಚ್ಚಿಸಲು ಉಪ್ಪು ಬೇಡ, ಈ ವಸ್ತುಗಳನ್ನು ಬಳಸಿ

Published : Sep 18, 2022, 12:23 PM IST

ತಪ್ಪಾದ ಆಹಾರ ಪದ್ಧತಿಯಿಂದ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ಇತ್ತೀಚಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಯುವಕರು ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರದಲ್ಲಿ ಉಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ, ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಆದರೆ ಉಪ್ಪನ್ನು ಕಡಿಮೆ ಮಾಡಲು ನೀವು ಇನ್ನು ಅನೇಕ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಅವುಗಳ ಬಗ್ಗೆ ತಿಳಿಯೋಣ.   

PREV
110
ಆಹಾರದ ರುಚಿ ಹೆಚ್ಚಿಸಲು ಉಪ್ಪು ಬೇಡ, ಈ ವಸ್ತುಗಳನ್ನು ಬಳಸಿ

ಆಹಾರದ ರುಚಿ ಹೆಚ್ಚಿಸಲು ಉಪ್ಪನ್ನು ಬಳಸಲಾಗುತ್ತದೆ. ಉಪ್ಪು ನಮ್ಮ ದೇಹಕ್ಕೆ ಅತ್ಯಗತ್ಯ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು, ಎಲೆಕ್ಟ್ರೋಲೈಟ್ಸ್ ಸಮತೋಲನಗೊಳಿಸಲು, ಆರೋಗ್ಯಕರ ನರ ವ್ಯವಸ್ಥೆಗೆ ಮತ್ತು ಹೈಡ್ರೇಟ್ ಆಗಿರಲು ನಮಗೆ ಕನಿಷ್ಠ 500 ಮಿಗ್ರಾಂ ಉಪ್ಪಿನ ಅಗತ್ಯವಿದೆ. 

210

ನಮ್ಮ ಆಹಾರಕ್ಕೆ ಪರಿಮಳವನ್ನು ಸೇರಿಸಲು ಉಪ್ಪು ಅತ್ಯಗತ್ಯ ಸಂಯುಕ್ತ. ಅದಕ್ಕಾಗಿಯೇ ನಾವು ಅದನ್ನು ನಮ್ಮ ಸಲಾಡ್ಸ್, ತಿಂಡಿಗಳು ಮತ್ತು ಬಹುತೇಕ ಎಲ್ಲದರಲ್ಲೂ ಸೇರಿಸುತ್ತೇವೆ. ಆದಾಗ್ಯೂ, ವಯಸ್ಕರು ದಿನಕ್ಕೆ 6 ಗ್ರಾಂಗಿಂತ ಹೆಚ್ಚು ಉಪ್ಪನ್ನು (2.4 gram sodium) ತಿನ್ನಬಾರದು, ಅಂದರೆ ಸುಮಾರು 1 ಟೀಸ್ಪೂನ್ ಕ್ಕಿಂತ ಕಡಿಮೆ ಪ್ರಮಾಣದ ಉಪ್ಪನ್ನು ಸೇವಿಸಬೇಕು. 

310

ಹೆಚ್ಚು ಉಪ್ಪನ್ನು ತಿನ್ನುವುದರಿಂದ ಹೃದಯ, ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು. ಹೆಚ್ಚು ಉಪ್ಪನ್ನು ತಿನ್ನುವುದು ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಹೆಚ್ಚಿನ ಸೋಡಿಯಂ (Sodium) ಆಹಾರವು ನಿಮ್ಮ ಮೂತ್ರಪಿಂಡಗಳಿಗೆ ತೊಂದರೆಯನ್ನುಂಟು ಮಾಡುತ್ತೆ, ಅಲ್ಲದೇ ಇದು ನಿಮ್ಮ ರಕ್ತದೊತ್ತಡವನ್ನು (Blood Pressure) ಹೆಚ್ಚಿಸುತ್ತದೆ ಮತ್ತು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ (stroke) ಕಾರಣವಾಗಬಹುದು. ಜೊತೆಗೆ ಮೂಳೆಗಳಿಂದ ಕ್ಯಾಲ್ಸಿಯಂ (Calcium) ಕೊರತೆಗೂ ಕಾರಣವಾಗಬಹುದು. 

410

ಆರ್ಕೈವ್ಸ್ ಆಫ್ ಇಂಟರ್ನಲ್ ಮೆಡಿಸಿನ್ನ ಅಧ್ಯಯನದ ಪ್ರಕಾರ, ಹೆಚ್ಚಿನ ಸೋಡಿಯಂ, ಕಡಿಮೆ-ಪೊಟ್ಯಾಸಿಯಮ್ ಆಹಾರವನ್ನು ಸೇವಿಸುವ ಜನರು ಹೃದಯಾಘಾತಕ್ಕೆ ಒಳಗಾಗುವ ಅಥವಾ ಯಾವುದೇ ಕಾರಣದಿಂದ ಸಾಯುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.  ಆದುದರಿಂದ ಸಾಧ್ಯವಾದಷ್ಟು ಸೋಡಿಯಂ ಅವಾಯ್ಡ್ ಮಾಡಬೇಕು ಎಂದು ಹೇಳಲಾಗುತ್ತೆ.

510
ತಜ್ಞರ ಸಲಹೆ ಏನು?

ದೇಹದಲ್ಲಿನ ಹೆಚ್ಚುವರಿ ಉಪ್ಪು ನಿಮ್ಮ ಟೇಸ್ಟ್ ಬಗ್ ಮೇಲೆ ಪರಿಣಾಮ ಬೀರುವುದಲ್ಲದೆ, ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ (serious health issue) ಕಾರಣವಾಗಬಹುದು. ಅಡುಗೆಯಲ್ಲಿ ಉಪ್ಪು ಕಡಿಮೆ ಸೇವಿಸಲು ಬಯಸುವವರಿಗೆ ಈ ಐದು ವಸ್ತುಗಳಲ್ಲಿ ಒಂದು ಬಳಸಿ ಅಡುಗೆ ಮಾಡಿದರೆ ಉಪ್ಪಿನ ಪ್ರಮಾಣವನ್ನು ಆಹಾರದಿಂದ ಕಡಿಮೆ ಮಾಡಬಹುದು. ಅವು ಯಾವುವು ಅನ್ನೋದನ್ನು ನೋಡೋಣ. 

610
ಉಪ್ಪನ್ನು ಕಡಿಮೆ ಮಾಡಲು ಆಹಾರದಲ್ಲಿ ಈ ವಸ್ತುಗಳನ್ನು ಬಳಸಿ

1. ನಿಂಬೆ ರಸ (lemon juice)
ಆಹಾರಕ್ಕೆ ಉಪ್ಪನ್ನು ಸೇರಿಸುವುದನ್ನು ತಪ್ಪಿಸಲು ನಿಂಬೆ ರಸವನ್ನು ಬಳಸಬಹುದು. ಆಮ್ಲದ ಮೂಲ. ನಿಂಬೆ ರಸವು ಭಕ್ಷ್ಯದ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಉಪ್ಪಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ, ನಿಂಬೆ ರಸವು ಆಹಾರಕ್ಕೆ ಇನ್ನಷ್ಟು ಹುಳಿ ರುಚಿಯನ್ನು ಸೇರಿಸುತ್ತದೆ.

710
2. ಬೆಳ್ಳುಳ್ಳಿ (Garlic)

ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಸಂಯುಕ್ತದಿಂದ ಅನೇಕ ಆರೋಗ್ಯ ಪರಿಣಾಮಗಳು ಉಂಟಾಗುತ್ತವೆ, ಇದು ಬೆಳ್ಳುಳ್ಳಿಯ ವಿಭಿನ್ನ ಸುವಾಸನೆಗೆ ಸಹ ಕಾರಣವಾಗಿದೆ. ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡ ಇರೋರಿಗೆ ರಕ್ತದೊತ್ತಡ ಇಳಿಕೆಯಾಗಲು ಸಹಾಯ ಮಾಡುತ್ತೆ. ಬೆಳ್ಳುಳ್ಳಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸದೆ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. 

810
3. ಪುಡಿ ಮಾಡಿದ ಕರಿಮೆಣಸು (crushed pepper)

ಇದು ಪ್ರತಿಯೊಬ್ಬರ ಆಹಾರದ ರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಕರಿಮೆಣಸು ಹೃದ್ರೋಗಗಳು ಮತ್ತು ಕ್ಯಾನ್ಸರ್ (Cancer) ನಂತಹ ದೀರ್ಘಕಾಲದ ಕಾಯಿಲೆಗಳಿಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡುತ್ತದೆ. ನೀವೂ ಕೂಡ ನಿಮ್ಮ ಅಡುಗೆಯಲ್ಲಿ ಇದನ್ನು ಬಳಕೆ ಮಾಡಿ ನೋಡಿ.

910
4. ಸಬ್ಸಿಗೆ ಸೊಪ್ಪು (dill leaves)

ಸಬ್ಸಿಗೆ ಸೊಪ್ಪು ಹಲವು ಜನರಿಗೆ ಫೆವರಿಟ್ ಆಗಿದೆ. ಯಾಕೆಂದರೆ ಇದರಲ್ಲಿರುವ ಬೇರೆ ರೀತಿಯ ಪರಿಮಳ ಮತ್ತು ರುಚಿ ಹಲವರಿಗೆ ಇಷ್ಟವಾಗುತ್ತೆ. ಇದು ಹುಳಿ-ಸಿಹಿ, ಸ್ವಲ್ಪ ಕಹಿ ರುಚಿಯನ್ನು ಹೊಂದಿದೆ. ಇದರಲ್ಲಿ ಕಂಡುಬರುವ ಫ್ಲೇವನಾಯ್ಡ್ ಗಳು ತಮ್ಮ ಶಕ್ತಿಯುತ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳಿಂದಾಗಿ ಹೃದಯದ ಆರೋಗ್ಯವನ್ನು ರಕ್ಷಿಸುತ್ತವೆ ಎಂದು ತಿಳಿದುಬಂದಿದೆ.

1010
5. ಅಮ್ಚೂರ್ ಪೌಡರ್ (Amchoor powder).

ಅಮ್ಚೂರ್, ಇದನ್ನು ಮಾವಿನ ಪುಡಿ ಎಂದೂ ಕರೆಯಲಾಗುತ್ತದೆ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಅಮ್ಚೂರ್ ಪುಡಿಯು ಉಪ್ಪಿಗೆ ಉತ್ತಮ ಪರ್ಯಾಯವಾಗಿದೆ. ಅಮ್ಚೂರ್ ಪುಡಿಯನ್ನು ಅನೇಕ ಅಡುಗೆಗಳಲ್ಲಿ ಬಳಸಬಹುದು. ಇದನ್ನು ಸೂಪ್ ಗಳು, ಚಟ್ನಿಗಳು, ಮೇಲೋಗರಗಳು, ಬೇಳೆಕಾಳುಗಳಂತಹ ಗ್ರೇವಿಗಳಿಗೆ ಸೇರಿಸಬಹುದು. ಇದರ ರುಚಿ ಚೆನ್ನಾಗಿರುತ್ತೆ.

click me!

Recommended Stories