ಹೋಟೆಲ್ ಶೈಲಿಯ ಇಡ್ಲಿ ಸಾಂಬಾರ್ ಮನೆಯಲ್ಲಿ ಮಾಡಿದಾಗ ಅದೇ ರುಚಿ ಬರುವುದಿಲ್ಲ ಎಂಬ ಚಿಂತೆಯೇ? ಈ ಲೇಖನದಲ್ಲಿ, ಹದವಾಗಿ ಪದಾರ್ಥಗಳನ್ನು ಹುರಿದು, ರುಬ್ಬಿ, ತಾಳ್ಮೆಯಿಂದ ಕುದಿಸಿ, ಪರಿಪೂರ್ಣ ಹೋಟೆಲ್ ರುಚಿಯ ಸಾಂಬಾರ್ ತಯಾರಿಸುವ ಸಂಪೂರ್ಣ ವಿಧಾನವನ್ನು ವಿವರಿಸಲಾಗಿದೆ.
ಇಡ್ಲಿ ಮೇಲೆ ಬಿಸಿಯಾದ ಸಾಂಬಾರ್ ಹಾಕಿಕೊಂಡು ತಿನ್ನೋದೇ ಒಂದು ಮಜಾ. ಆದ್ರೆ ಹೋಟೆಲ್ ಸ್ಟೈಲ್ ಸಾಂಬಾರ್ ಮನೆಯಲ್ಲಿ ಮಾಡಿದ್ರೆ ಆ ರುಚಿಯೇ ಇಲ್ಲ ಎಂದು ಹಲವರು ಹೇಳುತ್ತಿರುತ್ತಾರೆ. ತಾಳ್ಮೆಯಿಂದ, ಪದಾರ್ಥಗಳನ್ನು ಹದವಾಗಿ ಹುರಿದು, ರುಬ್ಬಿ, ಕುದಿಸಿದ್ರೆ ರುಚಿಯಾದ ಹೋಟೆಲ್ ಶೈಲಿ ಸಾಂಬಾರ್ ಸಿದ್ಧವಾಗುತ್ತದೆ. ಹೋಟೆಲ್ ಶೈಲಿಯ 'ಇಡ್ಲಿ ಸಾಂಬಾರ್' ಮಾಡೋದು ಹೇಗೆ ಎಂದು ನೋಡೋಣ ಬನ್ನಿ
26
ಇಡ್ಲಿ ಸಾಂಬಾರ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು
ಮಸೂರ್ ಬೇಳೆ ಅಥವಾ ತೊಗರಿ ಬೇಳೆ (ಒಂದು ಕಪ್), ಧನಿಯಾ: 3 ಟೀ ಸ್ಪೂನ್, ಕಡ್ಲೆಬೇಳೆ: 1 ಟೋ ಸ್ಪೂನ್, ಉದ್ದಿನಬೇಳೆ: 1 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್,ಮೆಂತೆ ಕಾಳು: 1/4 ಟೀ ಸ್ಪೂನ್, ಬ್ಯಾಡಗಿ ಮೆಣಸಿನಕಾಯಿ: 4,ಗುಂಟೂರು ಮೆಣಸಿನಕಾಯಿ: 4, ತೆಂಗಿನಕಾಯಿ ತುರಿ: 1 ಟೀ ಸ್ಪೂನ್, ಟೊಮೆಟೋ: ಮೂರು, ಅಡುಗೆ ಎಣ್ಣೆ, ಈರುಳ್ಳಿ: ಮೂರು (ಸಾಂಬಾರ್ ಈರುಳ್ಳಿ)
ಒಂದು ಕಪ್ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಕೋತಂಬರಿ ಸೊಪ್ಪು, ಕರಿಬೇವು, ಒಗ್ಗರಣೆಗೆ ಸಾಸವೆ-ಜೀರಿಗೆ ಅರ್ಧ ಟೀ ಸ್ಪೂನ್, ಬೆಲ್ಲ: 1 ಟೇಬಲ್ ಸ್ಪೂನ್, ತುಪ್ಪ: 1 ಟೀ ಸ್ಪೂನ್, ಅರಿಶಿನ ಪುಡಿ
36
ಇಡ್ಲಿ ಸಾಂಬಾರ್ ತಯಾರಿಸುವ ವಿಧಾನ
ಮೊದಲಿಗೆ ಮಸೂರ್ ಅಥವಾ ತೊಗರಿ ಬೇಳೆಗೆ ಚಿಟಿಕೆ ಅರಿಶಿನ ಸೇರಿಸಿ ಮೂರು ವಿಷಲ್ ಕೂಗಿಸಿಕೊಳ್ಳಿ. ಮತ್ತೊಂದೆಡೆ ಧನಿಯಾ, ಕಡಲೆಬೇಳೆ, ಉದ್ದಿನಬೇಳೆಮ ಜೀರಿಗೆ, ಮೆಂತೆಕಾಳನ್ನು ಕಡಿಮೆ ಉರಿಯಲ್ಲಿ ಎರಡು ನಿಮಿಷ ಫ್ರೈ ಮಾಡಿಕೊಂಡು ತರಿತರಿಯಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ. ಈಗ ಬ್ಯಾಡಗಿ ಮತ್ತು ಗುಂಟೂರು ಮೆಣಸಿನಕಾಯಿಯನ್ನು ಬಿಸಿ ಮಾಡಿಕೊಳ್ಳಿ.
ತದನಂತರ ಮಿಕ್ಸಿ ಜಾರ್‌ನಲ್ಲಿ ಎರಡೂ ತರಹದ ಮೆಣಸಿನಕಾಯಿ, ತೆಂಗಿನಕಾಯಿ ತುರಿ ಮತ್ತು ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ ಸೇರಿಸಿಕೊಂಡು ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಪಾತ್ರೆಯನ್ನಿಟ್ಟುಕೊಂಡು ಮೂರರಿಂದ ಎರಡು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೋ ಸೇರಿಸಿ ಮೂರು ನಿಮಿಷ ಬಾಡಿಸಿಕೊಳ್ಳಿ.
56
ರುಚಿಯಾದ ಇಡ್ಲಿ ಸಾಂಬಾರ್
ನಂತರ ಇದಕ್ಕೆ ರುಬ್ಬಿಕೊಂಡಿರುವ ಮಸಾಲೆ ಪೌಡರ್ ಮತ್ತು ತೆಂಗಿನಕಾಯಿ-ಟೊಮೆಟೋ-ಮೆಣಸಿನಕಾಯಿ ಮಿಶ್ರಿತ ಮಸಾಲೆ, ಬೆಲ್ಲ, ಬೇಯಿಸಿಕೊಂಡಿರುವ ಬೇಳೆ ಸೇರಿಸಿಕೊಂಡು ನಾಲ್ಕೈದು ನಿಮಿಷ ಬೇಯಿಸಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಈಗ ಮತ್ತೊಂದು ಮೇಲೆ ಪ್ಯಾನ್ ಇಟ್ಕೊಂಡು ಒಗ್ಗರಣೆಗೆ ಸಿದ್ಧತೆ ಮಾಡಿಕೊಳ್ಳಿ.
66
ಒಗ್ಗರಣೆ
ಅಡುಗೆಎಣ್ಣೆಗೆ ಸಾಸವೆ-ಜೀರಿಗೆ, ಒಂದು ಬ್ಯಾಡಗಿ ಮೆಣಸಿನಕಾಯಿ, ಕರೀಬೇವು ಒಗ್ಗರಣೆ ಮಾಡಿಕೊಳ್ಳಿ. ನಂತರ ಬೇಯಿಸಿಕೊಂಡಿರುವ ಸಾಂಬಾರ್ ಸೇರಿಸಿಕೊಂಡು, ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದರೆ ರುಚಿಯಾದ ಹೋಟೆಲ್ ಶೈಲಿಯ ಸಾಂಬಾರ್ ರೆಡಿಯಾಗುತ್ತದೆ. ಬಿಸಿಯಾದ ಇಡ್ಲಿಯನ್ನು ರುಚಿಯಾದ ಸಾಂಬಾರ್ ಇದ್ರೆ ಎಲ್ಲಾ ರೀತಿಯ ಆಹಾರವನ್ನೇ ಮರೆಯುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.