Instant Rasam Making: ಅಡುಗೆ ಮಾಡಲು ಬೇಸರವಾದಾಗ, ಕೇವಲ 5 ನಿಮಿಷದಲ್ಲಿ ಕುದಿಸದೆ, ಬೇಯಿಸದೆ ರುಚಿಕರವಾದ ಚಟ್‌ಪಟ್ ರಸಂ ತಯಾರಿಸಬಹುದು. ಈ ತ್ವರಿತ ರಸಂ ಅನ್ನದೊಂದಿಗೆ ಸವಿಯಲು ಅದ್ಭುತವಾಗಿರುತ್ತದೆ.
ಕೆಲವೊಮ್ಮೆ ಅಡುಗೆ ಏನು ಮಾಡಬೇಕು ಅಂತ ಹೊಳೆಯಲ್ಲ. ಒಲೆ ಆನ್ ಮಾಡು, ಒಗ್ಗರಣೆ ಹಾಕಿ 10-15 ನಿಮಿಷ ಕುದಿಸಿಕೊಂಡು ಸಾಂಬಾರ್ ಅಥವಾ ರಸಂ ಮಾಡಿಕೊಳ್ಳಲು ಸಹ ಕೆಲವೊಮ್ಮೆ ಬೇಸರವಾಗುತ್ತದೆ. ಇಂದು ನಾವು ನಿಮಗೆ ಬೇಯಿಸದೇ ಕುದಿಸದೇ 5 ನಿಮಿಷದಲ್ಲಿ ಮಾಡಿ ಚಟ್‌ಪಟ್ ರಸಂ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ.
25
ಚಟ್‌ಪಟ್ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು
ಅಡಿಕೆ ಗಾತ್ರದಷ್ಟಯ ಹುಣಸೆಹಣ್ಣು, ಜೀರಿಗೆ: ಅರ್ಧ ಟೀ ಸ್ಪೂನ್, ಬೆಳ್ಳುಳ್ಳಿ ಎಸಳು: 4 ರಿಂದ 5, ಕೋತಂಬರಿ ಸೊಪ್ಪು, ಕರೀಬೇವು: 4 ರಿಂದ 5 ಎಲೆ, ಹಸಿಮೆಣಸಿನಕಾಯಿ: 4, ಈರುಳ್ಳಿ: ಚಿಕ್ಕ ಗಾತ್ರದ್ದು ಒಂದು, ರುಚಿಗೆ ತಕ್ಕಷ್ಟು ಉಪ್ಪು
35
ಚಟ್‌ಪಟ್ ರಸಂ ಮಾಡುವ ವಿಧಾನ
ಮೊದಲಿಗೆ ಒಂದು ಬೌಲ್‌ನಲ್ಲಿ ನೀರು ಹಾಕಿಕೊಂಡು ಹುಣಸೆ ಸೇರಿಸಿ ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಹುಣಸೆ ಸಿಪ್ಪೆ ಬೇರ್ಪಡಿಸಿಕೊಂಡು ಹುಳಿಯಾದ ನೀರನ್ನು ಎತ್ತಿಟ್ಟುಕೊಳ್ಳಿ. ನಂತರ ಒಂದು ಈರುಳ್ಳಿ ಚಿಕ್ಕ ಗಾತ್ರದಲ್ಲಿ ಕತ್ತರಿಸಿಕೊಳ್ಳಬೇಕು.
ಈಗ ಒಂದು ಮಿಕ್ಸಿ ಜಾರ್‌ಗೆ ಜೀರಿಗೆ, ಬೆಳ್ಳುಳ್ಳಿ, ಕೋತಂಬರಿ ಸೊಪ್ಪು, ಕರೀಬೇಬು, ಹಸಿಮೆಣಸಿನಕಾಯಿಯನ್ನು ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ. ಈ ವೇಳೆ ಸ್ಪಲ್ವ ನೀರು ಸೇರಿಸಿಕೊಂಡು ರುಬ್ಬಿಕೊಳ್ಳೋದು ಉತ್ತಮ.
55
ಬಿಸಿಯಾದ ಅನ್ನಕ್ಕೆ ಈ ರಸಂ ಹಾಕಿಕೊಂಡು ಸವಿದ್ರೆ ಸ್ವರ್ಗಕ್ಕೆ ಮೂರೇ ಗೇಣು
ಈಗ ಹುಣಸೆ ನೀರಿನ ಬೌಲ್‌ಗೆ ರುಬ್ಬಿಕೊಂಡಿರುವ ಮಸಾಲೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಬೌಲ್‌ಗೆ ಕತ್ತರಿಸಿದ ಈರುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದ್ರೆ ರುಚಿಯಾದ ಚಟ್‌ಪಟ್ ರಸಂ ಅಥವಾ ಸಾಂಪ್ರದಾಯಿಕ ಶೈಲಿಯ ಹುಣಸೆ ಗೊಜ್ಜಿನ ರಸಂ ಸವಿಯಲು ಸಿದ್ಧವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.