ಹೆಚ್ಚು ಕೆಲಸವಿಲ್ಲ, ಮಸಾಲೆಗಳು ಬೇಕಿಲ್ಲ, 10 ನಿಮಿಷದಲ್ಲಿ ರೆಡಿ ಮಾಡಿ ರುಚಿ ರುಚಿಯಾದ ತವಾ ಫಿಶ್ ಫ್ರೈ

Published : Aug 30, 2026, 03:20 PM IST

ಹೆಚ್ಚಿನ ಮಸಾಲೆಗಳು ಬೇಕಿಲ್ಲ, ರುಬ್ಬೋ ಕಷ್ಟವೂ ಇಲ್ಲ. ಅತೀ ಕಡಿಮೆ ಸಮಯದಲ್ಲಿ ಅತ್ಯಂತ ರುಚಿಕರವಾದ ಫಿಶ್ ಫ್ರೈ ಮಾಡಲು ಸಾಧ್ಯವಿದೆ. ಮಂಗಳೂರು, ಉಡುಪಿ, ಕುಂದಾಪುರ ಸೇರಿದಂತೆ ಹಲವೆಡೆ ಸಿಗುವ ಅದೇ ಸ್ವಾದ ಮನೆಯಲ್ಲೇ ಮಾಡುವುದು ಹೇಗೆ? ಇಲ್ಲಿದೆ ರೆಸಿಪಿ.

PREV
15
ತಟ್ಟನೆ ರೆಡಿ ಮಾಡಿ ಫಿಶ್ ಫ್ರೈ

ಬಹುತೇಕ ಮೀನು ಆಹಾರ ಆರೋಗ್ಯಕ್ಕೂ ಉತ್ತಮ. ಆದರೆ ಮೀನಿನ ಅಡುಗೆ ಮಾಡುವುದು ಹಲವರಿಗೆ ಪ್ರಯಾಸದ ಕೆಲಸ.ಹಲವು ಬಗೆಯ ಮೀನುಗಳಿವೆ. ಈ ಪೈಕಿ ಯಾವ ಮೀನಿಗೆ ಯಾವ ಮಸಾಲೆ ಅನ್ನೋ ಲೆಕ್ಕಾಚಾರವೇ ಹಲವರಿಗೆ ತಲೆನೋವು. ಮಸಾಲೆ ಲೆಕ್ಕ ತಪ್ಪಿಹೋದರೆ ರುಚಿಯಾಗಿರುವುದಿಲ್ಲ ಅನ್ನೋ ಆತಂಕ. ಆದರೆ ಯಾವುದೇ ಮೀನಿಗೆ ಹೊಂದಿಕೊಳ್ಳುವ ಹಾಗೂ ಅತೀ ಕಡಿಮೆ ಮಸಾಲೆ ಮೂಲಕ ಫಿಶ್ ಫ್ರೈ ಮಾಡಲು ಸಾಧ್ಯವಿದೆ.

25
ಫಿಶ್ ಫ್ರೈಗೆ ಮಸಾಲೆ ಯಾವುದು?

ಭೂತಾಯಿ (ಮತ್ತಿ) ಬಾಂಗ್ಡಾ, ಕಿಂಗ್ ಕಿಶ್ ಸೇರಿದಂತೆ ಮೀನು ಯಾವುದೇ ಇರಲಿ. ಅದು ಸಮುದ್ರ ಮೀನು ಅಥವಾ ಕೆರೆ ಮೀನು ಯಾವುದೇ ಮೀನಿಗೆ ಈ ಒಂದೇ ಮಸಾಲೆ ಚೆನ್ನಾಗಿ ಹೊಂದಿಕೊಳ್ಳುತ್ತೆ. ಮೆಣಸಿನ ಪುಡಿ, ಅರಿಶಿನ, ಉಪ್ಪು ಹಾಗೂ ನಿಂಬೆ. ಇಷ್ಟೇ ಸಾಕು ಅತ್ಯಂತ ರುಚಿಕರ ಮೀನು ಫ್ರೈ ಮಸಾಲೆಗೆ. ಈ ಮಸಾಲೆ ರೆಡಿ ಮಾಡಲು 2 ನಿಮಿಷ ಸಾಕು.

35
ಮಸಾಲೆ ತಯಾರಿಸುವುದು ಹೇಗೆ?

ಅಗತ್ಯಕ್ಕೆ ಬೇಕಾಗುಷ್ಟು ಮಣಸಿನ ಪುಡಿ ಹಾಕಿಕೊಳ್ಳಿ. ಪೇಸ್ಟ್ ಮಾಡಿ ಮೀನಿನ ಮೇಲೆ ಹಚ್ಚಲು ಬೇಕಾಗುವಷ್ಟು ಪುಡಿ ಇರಲಿ. ಮೆಣಸಿನ ಪುಡಿ ಖಾರದ ಅಂದಾಜು ಇರಲಿ. ಚಿಟಿಕೆಯನ್ನು ಅರಶಿನ ಪುಡಿ ಸೇರಿಸಿಕೊಳ್ಳಿ ಬಳಿಕ ನಿಂಬೂ ರಸ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಪೇಸ್ಟ್ ರೀತಿ ಆಗಲು ಸ್ವಲ್ಪ ನೀರು ಬಳಸಿ.

45
ಮೀನಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ

ಚೆನ್ನಾಗಿ ತೊಳೆದ ಮೀನುಗಳನ್ನು ತೆಗೆದು ರೆಡಿ ಮಾಡಿದ ಮಸಾಲೆ ಹಚ್ಚಿ. ಮೀನಿಗೆ ಸರಿಯಾದ ಪ್ರಮಾಣದಲ್ಲಿ ಮಸಾಲೆ ಹಚ್ಚಿದ ಬಳಿಕ ಕೆಲ ಹೊತ್ತು ಬಿಡಬೇಕು. ಫ್ರಿಡ್ಜ್‌ನಲ್ಲಿಟ್ಟರೆ ಉತ್ತಮ. ಕನಿಷ್ಠ 20 ನಿಮಿಷ ಮಸಾಲೆಗಳನ್ನು ಮೀನು ಬೆರೆಸೆ ಇಡಬೇಕು. ಇದರಿಂದ ಮೀನಿನ ರುಚಿ ಮತ್ತಷ್ಟು ಹೆಚ್ಚುತ್ತದೆ.

55
ಫ್ರೈ ಮಾಡಿ ತಿನ್ನಿ ರುಚಿಯಾದ ಮೀನು

ಹೆಚ್ಚಿನ ಎಣ್ಣೆ ಬಳಸದೆ ತವಾ ಫಿಶ್ ಫ್ರೈ ಸ್ವಾದ ಹೆಚ್ಚಿರುತ್ತದೆ. ನಿಮ್ಮಿಷ್ಟದ ಯಾವುದೇ ಎಣ್ಣೆ ಬಳಸಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ ಲೋ ಫ್ಲೇಮ್‌ನಲ್ಲಿ ಇಡಬೇಕು. ತವಾ ಮೇಲೆ ಕರಿಬೇವು ಹಾಕಿ ಅದರ ಮೇಲೆ ಮೀನುಗಳನ್ನಿಡಿ. ಲೋ ಫ್ಲೇಮ್‌ನಲ್ಲಿ ಫ್ರೈ ಆಗಲಿದೆ. ಹೀಗೆ ಮೀನಿನ ಎರಡೂ ಬದಿ ಫ್ರೈ ಮಾಡಿದರೆ 10 ರಿಂದ 15 ನಿಮಿಷದಲ್ಲಿ ಮೀನು ರೆಡಿಯಾಗಲಿದೆ. ಮೀನಿನ ಗಾತ್ರ, ಸ್ಲೈಸ್‌ಗೆ ಅನುಗುಣವಾಗಿ ಮೀನು ಫ್ರೈ ಮಾಡಿಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories