ಇತ್ತೀಚಿನ ದಿನಗಳಲ್ಲಿ ಕಣ್ಣಿನ ದೃಷ್ಟಿ ದೌರ್ಬಲ್ಯ ಮತ್ತು ಕಣ್ಣಿನ ಆಯಾಸ ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ಕ್ರೀನ್ ಬಳಕೆ ಹೆಚ್ಚಾಗಿರುವುದು. ಆದರೆ ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಸರಿಯಾದ ಆಹಾರ ಸೇವನೆಯಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು.
28
ಇರುಳು ಕುರುಡುತನ ತಡೆಯಲು
ಕ್ಯಾರೆಟ್‌ನಲ್ಲಿರುವ ಬೀಟಾ ಕೆರೋಟಿನ್ ವಿಟಮಿನ್ ಎ ಆಗಿ ಪರಿವರ್ತನೆಯಾಗಿ ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ದಿನಾ ಒಂದು ಕ್ಯಾರೆಟ್ ತಿನ್ನುವುದರಿಂದ ರಾತ್ರಿ ಅಥವಾ ಇರುಳು ಕುರುಡುತನ ತಡೆಯಬಹುದು.
38
ಪಾಲಕ್
ಪಾಲಕ್‌ನಲ್ಲಿರುವ ಲೂಟೀನ್ ಮತ್ತು ಜಿಯಾಕ್ಸಾಂಥಿನ್ ನೀಲಿ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸುತ್ತದೆ. ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಮ್ಯಾಕ್ಯುಲರ್ ಡಿಜೆನರೇಶನ್ ಸಮಸ್ಯೆ ತಡೆಯಲು ಪಾಲಕ್ ಸಹಾಯಕ.
ಬ್ರೊಕೊಲಿಯಲ್ಲಿ ವಿಟಮಿನ್ ಸಿ, ಕೆ, ಇ ಜೊತೆಗೆ ಲೂಟೀನ್ ಮತ್ತು ಜಿಯಾಕ್ಸಾಂಥಿನ್ ಇದೆ. ಇವು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ಕಣ್ಣಿನ ಸಮಸ್ಯೆಗಳಿಂದ ರಕ್ಷಿಸುತ್ತದೆ.
58
ಆವಕಾಡೊ
ಆವಕಾಡೊದಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಆಂಟಿಆಕ್ಸಿಡೆಂಟ್‌ಗಳು ಕಣ್ಣು ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ದಿನಾ ಒಂದು ಆವಕಾಡೊ ತಿನ್ನುವುದರಿಂದ ರೆಟಿನಾ ಆರೋಗ್ಯವಾಗಿರುತ್ತದೆ.
68
ಕ್ಯಾಪ್ಸಿಕಂ
ಕ್ಯಾಪ್ಸಿಕಂ ಕಣ್ಣಿಗೆ ತುಂಬಾ ಒಳ್ಳೆಯದು. ಬೆಲ್ ಪೆಪ್ಪರ್‌ಗಳಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕೆರೋಟಿನ್ ಹೇರಳವಾಗಿದೆ. ಇವು ಕಣ್ಣಿನ ಒಣಗುವಿಕೆ ಮತ್ತು ಮಸುಕಾದ ದೃಷ್ಟಿ ಸಮಸ್ಯೆಗಳಿಂದ ರಕ್ಷಿಸುತ್ತದೆ.
78
ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶಗಳು
ಈ ಎಲ್ಲಾ ಆಹಾರಗಳು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಪೋಷಕಾಂಶಗಳನ್ನು ಹೊಂದಿವೆ. ಇವು ಕಣ್ಣಿನ ಆರೋಗ್ಯದ ಜೊತೆಗೆ ಮೆದುಳು ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಮಿತವಾಗಿ ಸೇವಿಸಿ.
88
20-20-20
ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು, ಚೆನ್ನಾಗಿ ನಿದ್ರೆ ಮಾಡುವುದು ಮತ್ತು ಹಸಿರು ತರಕಾರಿಗಳನ್ನು ತಿನ್ನುವುದು ಮುಖ್ಯ. 20 ನಿಮಿಷಗಳಿಗೊಮ್ಮೆ 20 ಅಡಿ ದೂರದ ವಸ್ತುವನ್ನು 20 ಸೆಕೆಂಡುಗಳ ಕಾಲ ನೋಡಿ.