ಇಂತಹ ಚಿಹ್ನೆಗಳು ಕೈಯಲ್ಲಿದ್ದರೆ, ಆ ವ್ಯಕ್ತಿ ಶ್ರೀಮಂತನಾಗೋದು ಖಚಿತ

First Published | Sep 25, 2022, 3:59 PM IST

ಹಸ್ತ ಸಾಮುದ್ರಿಕ ಶಾಸ್ತ್ರವು ಕೈಗಳ ರೇಖೆಗಳನ್ನು ಮಾತ್ರವಲ್ಲದೆ ಕೈಗಳಲ್ಲಿನ ಗುರುತುಗಳ ಬಗ್ಗೆಯೂ ವಿವರವಾಗಿ ವಿವರಿಸುತ್ತೆ. ಒಬ್ಬ ವ್ಯಕ್ತಿಯ ಕೈಗಳ ಈ ಗುರುತುಗಳ ಸಹಾಯದಿಂದ, ಅವನ ಭವಿಷ್ಯದ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಇವುಗಳ ಸಹಾಯದಿಂದ, ವ್ಯಕ್ತಿಯ ಪರ್ಸನಲ್ ಜೀವನದಿಂದ ಹಿಡಿದು ಅವನ ಪ್ರೊಫೆಷನಲ್  ಜೀವನದವರೆಗೆ ಎಲ್ಲದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆದ್ದರಿಂದ ಅಂತಹ ಕೆಲವು ಕೈಗಳ ಗುರುತುಗಳ ಬಗ್ಗೆ  ತಿಳಿಯೋಣ.

ಕೈಯಲ್ಲಿ ಆನೆಯ(Elephant) ಗುರುತು
ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಗಜ ಗುರುತನ್ನು ಹೊಂದಿದ್ದರೆ, ಅವನು ತುಂಬಾ ಬುದ್ಧಿವಂತ ವ್ಯಕ್ತಿಯಾಗಿರುತ್ತಾನೆ. ಅಂತಹ ಜನರು ಅದೃಷ್ಟದಲ್ಲಿ ಶ್ರೀಮಂತರಾಗಿರುತ್ತಾರೆ. ಅಲ್ಲದೇ ಹೆಚ್ಚಾಗಿ ವ್ಯವಹಾರದ ಮೂಲಕ ಸಾಕಷ್ಟು ಹಣ ಗಳಿಸುತ್ತಾರೆ. ಅಲ್ಲದೆ, ಅಂತಹ ಜನರು ತುಂಬಾ ಉತ್ತಮ ಜೀವನ ನಡೆಸುತ್ತಾರೆ.

ಕೈಯಲ್ಲಿ ಮೀನಿನ(Fish) ಗುರುತು
ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಮೀನಿನ ಗುರುತನ್ನು ಹೊಂದಿದ್ದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಅಂತಹ ವ್ಯಕ್ತಿಯ ಹಣೆಬರಹದಲ್ಲಿ, ಸಮುದ್ರದ ಮೂಲಕ ವಿವಿಧ ದೇಶಗಳಿಗೆ ಪ್ರಯಾಣದ ಯೋಗವಿದೆ. ಅಲ್ಲದೆ, ಅಂತಹ ಜನರಿಗೆ ಹಣದ ಕೊರತೆ ಇರೋದಿಲ್ಲ. ಈ ಜನರು ಸಂತೋಷದ ಜೀವನ ನಡೆಸುತ್ತಾರೆ.

Tap to resize

ಕೈಯಲ್ಲಿ ಪಲ್ಲಕ್ಕಿ ಗುರುತು
ಒಬ್ಬ ವ್ಯಕ್ತಿಯ ಕೈಯಲ್ಲಿ ಪಲ್ಲಕ್ಕಿಯ ಗುರುತು ಇದ್ದರೆ, ಅಂತಹ ಜನರನ್ನು ತುಂಬಾ ಅದೃಷ್ಟಶಾಲಿ(Lucky) ಎಂದು ಪರಿಗಣಿಸಲಾಗುತ್ತೆ. ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ಅಂತಹ ಜನರು ತುಂಬಾ ಐಷಾರಾಮಿ ಜೀವನವನ್ನು ಹೊಂದುತ್ತಾರೆ. ಅವರಿಗೆ ಭೌತಿಕ ಸೌಕರ್ಯಗಳ ಕೊರತೆಯಿರೋಲ್ಲ. ಅಂತಹ ಜನರು ಅಪಾರ ಸಂಪತ್ತನ್ನು ಹೊಂದಿರುತ್ತಾರೆ. ಅಲ್ಲದೇ ಸಾಕಷ್ಟು  ಕಾರುಗಳನ್ನು ಹೊಂದಿರುತ್ತಾರೆ.

ಕೈಯಲ್ಲಿ ಸ್ವಸ್ತಿಕ್(Swastik) ಗುರುತು
ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ಹೊಂದಿದ್ದರೆ, ಆ ವ್ಯಕ್ತಿಯು ತುಂಬಾ ಅದೃಷ್ಟಶಾಲಿ ಎಂದು ಅರ್ಥ. ಅಂತಹ ಜನರು ತುಂಬಾ ಅದೃಷ್ಟವಂತರು ಮತ್ತು ಉತ್ತಮ ಶಿಕ್ಷಕರು ಆಗಿರುತ್ತಾರೆ, ಅಲ್ಲದೇ ಸಾಕಷ್ಟು ಗೌರವ ಮತ್ತು ಪ್ರತಿಷ್ಠೆಯನ್ನು ಗಳಿಸುತ್ತಾರೆ. ಅಂತಹ ಜನರು ಒಂದೋ ಮಂತ್ರಿಗಳಾಗಿರುತ್ತಾರೆ ಅಥವಾ ಉನ್ನತ ಸ್ಥಾನದಲ್ಲಿರುತ್ತಾರೆ.

ಕೈಯಲ್ಲಿ ಕಲಶದ ಗುರುತು
ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಕಲಶದ(Kalash) ಚಿಹ್ನೆಯನ್ನು ಹೊಂದಿದ್ದರೆ, ಅವನು ತುಂಬಾ ಧಾರ್ಮಿಕ ಪ್ರವೃತ್ತಿಯ ವ್ಯಕ್ತಿಯಾಗಿರುತ್ತಾನೆ. ಅಂತಹ ಜನರು ದೇವರ ಆರಾಧಕರಾಗಿರುತ್ತಾರೆ. ಅಂದರೆ, ಅಂತಹ ಜನರು ಧರ್ಮ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಬೀರುತ್ತಾರೆ. ಈ ಜನರು ಸಾಕಷ್ಟು ಧಾರ್ಮಿಕ ಪ್ರವಾಸಗಳನ್ನು ಮಾಡುತ್ತಾರೆ ಮತ್ತು ಧರ್ಮವನ್ನು ಪ್ರಚಾರ ಮಾಡುತ್ತಾರೆ.

ಕೈಯಲ್ಲಿ ಹಡಗಿನ(Ship) ಗುರುತು
ಹಸ್ತ ಸಾಮುದ್ರಿಕಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಹಡಗಿನ ಗುರುತನ್ನು ಹೊಂದಿದ್ದರೆ, ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿಯಾಗಿರುತ್ತಾನೆ .ಆತನಿಗೆ ಹಣದ ಕೊರತೆ ಇರೋದಿಲ್ಲ. ಅಂತಹ ಜನರು ಸಮುದ್ರದಾಚೆಗಿನ ದೇಶಗಳಲ್ಲಿ ಉತ್ತಮ ವ್ಯವಹಾರವನ್ನು ಹೊಂದಿರುತ್ತಾರೆ.

ಕೈಯಲ್ಲಿ ಸೂರ್ಯನ(Sun) ಗುರುತು 
ಕೈಯಲ್ಲಿ ಸೂರ್ಯನ ಗುರುತನ್ನು ಹೊಂದಿರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ಅವರ ಬಳಿ ಹಣದ ಕೊರತೆ ಇರೋದಿಲ್ಲ. ಈ ಜನರು ಜೀವನದಲ್ಲಿ ಸಾಕಷ್ಟು ಗೌರವ ಮತ್ತು ಹಣವನ್ನು ಗಳಿಸುತ್ತಾರೆ. ಅಲ್ಲದೇ ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸುತ್ತಾರೆ ಎಂದು ತಿಳಿದು ಬಂದಿದೆ.

Latest Videos

click me!