ಅಕ್ಟೋಬರ್ 24 ರಂದು ಸೂರ್ಯಗ್ರಹಣ: ಈ ರಾಶಿಯವರು ಹುಷಾರಾಗಿರಿ!

Published : Sep 24, 2022, 05:45 PM IST

ಅಕ್ಟೋಬರ್ ತಿಂಗಳಲ್ಲಿ ಸೂರ್ಯ ಗ್ರಹಣ ಉಂಟಾಗಲಿದೆ ಎನ್ನವುದನ್ನು ಕೇಳಿ ಪ್ರತಿಯೊಬ್ಬರಿಗೂ ಈ ಬಾರಿ ನಮಗೆ ಏನು ತೊಂದರೆಯಾಗಲಿದೆ ಅನ್ನೋ ಭಯ ಕಾಡುತ್ತಿದೆ. ಪಂಚಾಂಗದ ಪ್ರಕಾರ, ಈ ವರ್ಷ ದೀಪಾವಳಿ ಹಬ್ಬವನ್ನು ಅಕ್ಟೋಬರ್ 24 ರಂದು ಆಚರಿಸಲಾಗುವುದು. ಮರುದಿನ ಅಂದರೆ ಗೋವರ್ಧನ ಪೂಜೆಯಂದು ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣವು ಯಾವಾಗಲೂ ಅಮಾವಾಸ್ಯೆ ತಿಥಿಯಂದು ಸಂಭವಿಸುತ್ತೆ ಮತ್ತು ದೀಪಾವಳಿಯನ್ನು ಪ್ರತಿ ವರ್ಷ ಅಮಾವಾಸ್ಯೆ ತಿಥಿಯಂದು ಆಚರಿಸಲಾಗುತ್ತೆ. ಈ ಬಾರಿ ಸೂರ್ಯ ಗ್ರಹಣದಂದು ಯಾವ ರಾಶಿ ಮೇಲೆ ಪರಿಣಾಮ ಬೀರಲಿದೆ ನೋಡೋಣ.

PREV
16
ಅಕ್ಟೋಬರ್ 24 ರಂದು ಸೂರ್ಯಗ್ರಹಣ: ಈ ರಾಶಿಯವರು ಹುಷಾರಾಗಿರಿ!

ಗ್ರಹಣದ(Eclipse) ಸಮಯದಲ್ಲಿ, ಸೂರ್ಯನು ತುಲಾರಾಶಿಯಲ್ಲಿರುತ್ತಾನೆ, ಇದನ್ನು ಸೂರ್ಯನ ನೀಚ ರಾಶಿ ಎಂದು ಪರಿಗಣಿಸಲಾಗುತ್ತೆ . ಈ ಸೂರ್ಯಗ್ರಹಣದ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಇದ್ದರೂ, ವೃಷಭ, ಮಿಥುನ, ಕನ್ಯಾ ಮತ್ತು ತುಲಾ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.

26

ಸೂರ್ಯಗ್ರಹಣ(Solar eclipse) 2022: ಸೂತಕ ಕಾಲ ಯಾವಾಗ ಸಂಭವಿಸುತ್ತೆ 
ಪಂಚಾಂಗದ ಪ್ರಕಾರ, ಸೂರ್ಯಗ್ರಹಣವು ಅಕ್ಟೋಬರ್ 25 ರಂದು ಮಧ್ಯಾಹ್ನ 2:29 ಕ್ಕೆ ಪ್ರಾರಂಭವಾಗುತ್ತೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಸೂತಕದ ಅವಧಿಯು ನಡೆಯುತ್ತೆ. ಆದ್ದರಿಂದ, ಸೂತಕ ಅವಧಿಯು ಅಕ್ಟೋಬರ್ 24 ರ ದೀಪಾವಳಿಯ ರಾತ್ರಿ 2:30 ರಿಂದ ಆರಂಭವಾಗುತ್ತೆ. ಏಕೆಂದರೆ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸೋದಿಲ್ಲ. ಆದ್ದರಿಂದ, ಈ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗೋದಿಲ್ಲ. 

36

ಈ ರಾಶಿಯವರು ಜಾಗರೂಕರಾಗಿರಬೇಕು
ವೃಷಭ ರಾಶಿ: (Taurus)
ಸೂರ್ಯಗ್ರಹಣವು ನಿಮಗೆ ಶುಭಕರವಲ್ಲ. ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆದ್ದರಿಂದ ಆಹಾರದ ಬಗ್ಗೆ ಜಾಗರೂಕರಾಗಿರಿ, ಎಚ್ಚರಿಕೆಯಿಂದ ಆಹಾರ ಸೇವನೆ ಮಾಡಿ. ವ್ಯವಹಾರದಲ್ಲಿ ನಷ್ಟವಾಗಬಹುದು. ಹೂಡಿಕೆ ಮಾಡೋದನ್ನು ತಪ್ಪಿಸಿ ಎಂದು ತಜ್ಞರು ಹೇಳುತ್ತಾರೆ.

46

ಮಿಥುನ ರಾಶಿ: (Gemini)
ಸೂರ್ಯಗ್ರಹಣವು ನಿಮಗೆ ನೋವುಂಟುಮಾಡಬಹುದು. ದುಂದುವೆಚ್ಚ ಹೆಚ್ಚಾಗಬಹುದು. ನಿಮ್ಮ ಬಜೆಟ್ ಹದಗೆಡಬಹುದು. ಕೆಲವು ಪ್ರಮುಖ ಕೆಲಸಗಳಿಗೆ ಅಡ್ಡಿಪಡಿಸಬಹುದು. ಯಾವುದೇ ವ್ಯವಹಾರ ಒಪ್ಪಂದವನ್ನು ರದ್ದುಗೊಳಿಸಬಹುದು. ವೈವಾಹಿಕ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.

56

ಕನ್ಯಾ ರಾಶಿ :(Virgo)
ಕನ್ಯಾ ರಾಶಿಯವರಿಗೂ ಗ್ರಹಣದಿಂದ ತೊಂದರೆ ಇದೆ. ಈ ಸೂರ್ಯಗ್ರಹಣವು ನಿಮ್ಮ ಆರ್ಥಿಕ ಕ್ಷೇತ್ರದಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತೆ. ಈ ಸಮಯದಲ್ಲಿ ನಿಮ್ಮ ವ್ಯವಹಾರವು ನಿಧಾನವಾಗಬಹುದು. ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ.

66

ತುಲಾ(Libra) ರಾಶಿ: 
ಶನಿಯ ಧೈಯ ನಿಮ್ಮ ಮೇಲೆ ಚಲಿಸುತ್ತಿದೆ. ಹಾಗಾಗಿ, ನೀವು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು ಏಕೆಂದರೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಆದುದರಿಂದ ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಉತ್ತಮ. ನೀವು ಯಾವುದಕ್ಕೂ ಹೆದರದಿರಿ, ಧೈರ್ಯದಿಂದ ಕೆಲಸ ಮಾಡಬೇಕು.

Read more Photos on
click me!

Recommended Stories